Wednesday, Feb 26 2020 | Time 10:39 Hrs(IST)
  • 2007ರಲ್ಲಿ ತಿಲಕ್‌ ನಗರದಲ್ಲಿ ಜೋಡಿ ಕೊಲೆ: ರವಿ ಪೂಜಾರಿ ತೀವ್ರ ವಿಚಾರಣೆ
  • "ಕೇಜ್ರಿವಾಲ್‌ ಹೊರಗೆ ಬನ್ನಿ, ನಮ್ಮೊಂದಿಗೆ ಮಾತನಾಡಿ" ಘೋಷಣೆಯೊಂದಿಗೆ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ: ಪೊಲೀಸರಿಂದ ತೆರವು
  • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
  • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
  • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
  • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
  • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
  • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
  • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
  • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
  • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
  • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
  • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
  • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
  • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
National Share

ಸ್ವಾಮಿ ವಿವೇಕಾನಂದರ ಜಯಂತಿ ಯುವ ಜನತೆಗೆ ಹೊಸ ಸ್ಫೂರ್ತಿ: ಪ್ರಧಾನಮಂತ್ರಿ

ಲಖನೌ, ಜ12(ಯುಎನ್‍ಐ)- ಸ್ವಾಮಿ ವಿವೇಕಾನಂದರ 157ನೇ ಜನ್ಮದಿನ ಯುವಜನತೆಗೆ ಹೊಸ ಸ್ಫೂರ್ತಿಯಾಗಿದ್ದು, ಪ್ರತಿಯೊಬ್ಬ ಭಾರತೀಯ ಯುವಕ ನಿರ್ಣಯಿಸಬೇಕಾದ ದಿನವಾಗಿದೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.

‘ಸ್ವಾಮಿ ವಿವೇಕಾನಂದರ ಸ್ವರೂಪದಿಂದ ಭಾರತ, ಈ ದಿನ ಅಗಾಧ ಶಕ್ತಿಯನ್ನು ಪಡೆದಿದೆ. ಇದು ನಮ್ಮನ್ನು ಹುರಿದುಂಬಿಸುತ್ತಲೇ ಇರುತ್ತದೆ. ನಮ್ಮ ಶ್ರೀಮಂತ ಹಿನ್ನೆಲೆ ಮತ್ತು ಭವಿಷ್ಯದ ಶಕ್ತಿ ಯುವಕರಾಬೇಕೆಂದು ಸ್ವಾಮಿ ವಿವೇಕಾನಂದರು ಕನಸು ಕಂಡಿದ್ದರು. ಅದನ್ನು ಸಾಕಾರಗೊಳಿಸುತ್ತ ಯುವ ಜನತೆ ಮುನ್ನಡೆಯಬೇಕು.’ ಎಂದು ಅವರು ಹೇಳಿದ್ದಾರೆ.

ಇಲ್ಲಿನ ಇಂದಿರಾಗಾಂಧಿ ಪ್ರತಿಷ್ಠಾನಲ್ಲಿ ನಡೆದ ಇಲ್ಲಿನ ಇಂದಿರಾಗಾಂಧಿ ಪ್ರತಿಷ್ಠಾನಲ್ಲಿ ನಡೆದ ಐದು ದಿನಗಳ ಸ್ವಾಮಿ ವಿವೇಕಾನಂದರ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿಯರು, ನಮ್ಮವರೇ(ಸ್ಥಳೀಯರು) ತಯಾರಿಸಿದ ವಸ್ತುಗಳನ್ನು ಖರೀದಿಸಬೇಕು. ಇದರಿಂದ ನಿಮ್ಮ ಸ್ನೇಹಿತರಿಗೆ ಪ್ರಯೋಜನವಾಗಲಿದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಯುವ ದಿನದ ಅಂಗವಾಗಿ ದೇಶದ ಯುವಕರನ್ನು ಅಭಿನಂದಿಸಿರುವ ಪ್ರಧಾನಿ ಮೋದಿ, ಎಲ್ಲ ಶಕ್ತಿ-ಸಾಮರ್ಥ್ಯ ನಿಮ್ಮಲ್ಲಿಯೇ ಇದೆ ಎಂದು ವಿವೇಕಾನಂದರು ಪ್ರತಿಪಾದಿಸುತ್ತಿದ್ದರು. ಈ ಶಕ್ತಿಯಲ್ಲಿ ನನಗೆ ನಂಬಿಕೆ ಇದೆ. ಇದಕ್ಕಾಗಿ ಹಗಲಿರಳು ಶ್ರಮಿಸುತ್ತೇನೆ. ಇಂದಿನ ಯುವಕರು ಎಲ್ಲವನ್ನೂ ಗ್ರಹಿಸಿ ಮುನ್ನಡೆಯುತ್ತಿರುವುದ್ದಾರೆ ಮತ್ತು ಸ್ವಾವಲಂಭಿಗಳಾಗುತ್ತಿರುವುದಕ್ಕೆ ಸಂಸತೋಷವಾಗುತ್ತಿದೆ ಎಂದು ಹೇಳಿದ್ದಾರೆ.

ಯುಎನ್‍ಎಐ ಎಸ್‍ಎಲ್‍ಎಸ್ 2157