Sunday, Mar 29 2020 | Time 00:42 Hrs(IST)
National Share

ಸ್ವಾಮಿ ವಿವೇಕಾನಂದರ ಜೀವನ ಮತ್ತು ಕಾರ್ಯಗಳು ದೇಶಕ್ಕೆ ಎಂದಿಗೂ ಸ್ಫೂರ್ತಿ-ರಾಷ್ಟ್ರಪತಿ ರಾಮನಾಥ್‍ ಕೋವಿಂದ್‍

ಕನ್ಯಾಕುಮಾರಿ, ಡಿ 26 (ಯುಎನ್ಐ)- ಸ್ವಾಮಿ ವಿವೇಕಾನಂದರ ಜೀವನ ಮತ್ತು ಕಾರ್ಯಗಳು ನಮ್ಮ ರಾಷ್ಟ್ರಕ್ಕೆ ಸ್ಫೂರ್ತಿ ನೀಡುತ್ತಲೇ ಇವೆ ಎಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಹೇಳಿದ್ದಾರೆ.

ವಿವೇಕಾನಂದ ಶಿಲಾ ಸ್ಮಾರಕದ ಸುವರ್ಣ ಮಹೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ವಿವೇಕಾನಂದ ಕೇಂದ್ರ ಎಲ್ಲರಲ್ಲೂ ಆಧ್ಯಾತ್ಮಿಕತೆ, ಪ್ರಶಾಂತತೆ ಮೂಡಿಸುತ್ತಿದೆ. ಎಲ್ಲರಿಗೂ ಜೀವನವನ್ನು ಬೆಳಗಿಸುತ್ತಿದೆ. ಇದು ಇಡೀ ಪ್ರಪಂಚಕ್ಕೆ ಸಲ್ಲುವಂತಾಬೇಕು ಎಂದು ಹೇಳಿದರು.

ಸ್ವಾಮಿ ವಿವೇಕಾನಂದರ ಜೀವನದಲ್ಲಿ ವಿಶೇಷ ಸ್ಥಾನವನ್ನು ಪಡೆದಿರುವುದನ್ನು ಪ್ರಸ್ತಾಪಿಸಿದ ರಾಷ್ರಪತಿಯರವರು, ಆಧ್ಯಾತ್ಮಿಕ ಶಕ್ತಿಯೇ ಎಲ್ಲ ಯಶಸ್ಸಿಗೆ ಮೂಲ ಎಂದು ಹೇಳಿದ್ದಾರೆ.

127 ವರ್ಷಗಳ ಹಿಂದೆ ಡಿ 25, 1892 ರಂದು ಸ್ವಾಮೀಜಿ ಇಲ್ಲಿನ ಬಂಡೆ ಮೇಲೆ ಆಳವಾದ ಧ್ಯಾನವನ್ನು ಆರಂಭಿಸಿದರು. ಮೂರು ಹಗಲು ಮತ್ತು ಮೂರು ರಾತ್ರಿಗಳಲ್ಲಿ, ಒಬ್ಬ ಸರಳ ಸನ್ಯಾಸಿ ತನ್ನನ್ನು ಪ್ರಬುದ್ಧ ಜೀವಿಯಾಗಿ ಭಾರತೀಯ ಸಂಸ್ಕೃತದ ಜಾಗತಿಕ ಸಂದೇಶವಾಹಕರಾದರು. ಕನ್ಯಾಕುಮಾರಿ ಅನುಭವದ ಒಂದು ವರ್ಷದ ನಂತರ, ಸೆ 11, 1893 ರ ಐತಿಹಾಸಿಕ ದಿನದಂದು, ಸ್ವಾಮೀಜಿ ಚಿಕಾಗೊದಲ್ಲಿನ ವಿಶ್ವ ಧರ್ಮಗಳ ಸಂಸತ್ತಿನಲ್ಲಿ ತಮ್ಮ ಐತಿಹಾಸಿಕ ಭಾಷಣ ಮಾಡಿದರು ಎಂದು ರಾಷ್ಟ್ರಪತಿ ಹೇಳಿದರು.

ಯುಎನ್‍ಐ ಎಸ್‍ಎಲ್‍ಎಸ್‍ 2311
More News
ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

28 Mar 2020 | 7:17 PM

ನವದೆಹಲಿ, ಮಾ 28 (ಯುಎನ್ಐ) ಕೊರೋನಾ ವೈರಸ್ ತಡೆಯಲು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆಯಿಂದ ಬೃಹತ್ ಸಂಖ್ಯೆ ಕಾರ್ಮಿಕರುತ ತಮ್ಮ ತವರೂರಿಗೆ ತೆರಳಲಾಗದೆ ಪರದಾಡುವಂತಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

 Sharesee more..
ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ  ನೆರವು ನೀಡಿದ ಟಾಟಾ

ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ ನೆರವು ನೀಡಿದ ಟಾಟಾ

28 Mar 2020 | 7:10 PM

ನವದೆಹಲಿ, ಮಾ 28 (ಯುಎನ್ಐ) ದೇಶದ ಮುಂಚೂಣಿಯ ಉದ್ಯಮ ಸಂಸ್ಥೆ ಟಾಟಾ ಟ್ರಸ್ಟ್, ದೇಶದ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ.ನೆರವು ನೀಡುವುದಾಗಿ ಘೋಷಿಸಿದೆ.

 Sharesee more..