Monday, Jun 1 2020 | Time 02:50 Hrs(IST)
National Share

ಹದಿನೈದು ದೇಶಗಳಿಗೆ ಸ್ಪೀಡ್ ಪೋಸ್ಟ್ ಸೇವೆ ಪುನರಾರಂಭ

ನವದೆಹಲಿ, ಮೇ 22 (ಯುಎನ್ಐ) ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಲಾಕ್ ಡೌನ್ ಜಾರಿಯಲ್ಲಿದ್ದ ಕಾರಣ ಸ್ಥಗಿತಗೊಂಡಿದ್ದ ಅಂಚೆ ಇಲಾಖೆಯ ಅಂತಾರಾಷ್ಟ್ರೀಯ ಸ್ಪೀಡ್ ಪೋಸ್ಟ್ ಸೇವೆಯನ್ನು ಪುನರಾರಂಭಿಸಲಾಗಿದೆ.

ಆರಂಭಿಕವಾಗಿ ಈ ಸೇವೆ 15 ದೇಶಗಳಿಗೆ ಲಭ್ಯವಿರಲಿದೆ. ಅಂಚೆ ಇಲಾಖೆಯ ಸ್ಪೀಡ್ ಪೋಸ್ಟ್ ಸೇವೆಯನ್ನು ಈಗಾಗಲೇ ಪುನರಾರಂಭಿಸಲಾಗಿದೆ. ಆದರೆ ಅಂಚೆ ತಲುಪುವ ಅವಧಿಗೆ ಕಾಲಮಿತಿ ಹೇಳಲಾಗುವುದಿಲ್ಲ.

ಈ ಬಗ್ಗೆ ಟ್ವೀಟ್ ಮಾಡಿರುವ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ರವಿಶಂಕರ್ ಪ್ರಸಾದ್, ವಿಮಾನ ಸೇವೆಯ ಮೇಲೆ ಅಂಚೆ ಸೇವೆಯ ಅವಧಿ ನಿರ್ಧರಿತವಾಗಲಿದೆ. ವಿಮಾನ ಲಭ್ಯತೆಗೆ ತಕ್ಕಂತೆ ಅಂಚೆಗಳ ರವಾನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಸದ್ಯ ಈ ಸೇವೆ 15 ರಾಷ್ಟ್ರಗಳಿಗೆ ಮಾತ್ರ ಇರಲಿದ್ದು ಉಳಿದ ದೇಶಗಳಿಗೆ ಇನ್ನೂ ಸೇವೆ ಆರಂಭಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಯುಎನ್ಐ ಜಿಎಸ್ಆರ್ 2252
More News
ಜೂನ್ 3ರ ವೇಳೆಗೆ ಗುಜರಾತ್,ಮಹಾರಾಷ್ಟ್ರ ಕರಾವಳಿಗೆ ಚಂಡಮಾರುತ ಬೀಸುವ ಸಾಧ್ಯತೆ:ಹವಾಮಾನ ಇಲಾಖೆ ಎಚ್ಚರಿಕೆ

ಜೂನ್ 3ರ ವೇಳೆಗೆ ಗುಜರಾತ್,ಮಹಾರಾಷ್ಟ್ರ ಕರಾವಳಿಗೆ ಚಂಡಮಾರುತ ಬೀಸುವ ಸಾಧ್ಯತೆ:ಹವಾಮಾನ ಇಲಾಖೆ ಎಚ್ಚರಿಕೆ

31 May 2020 | 9:35 PM

ನವದೆಹಲಿ, ಮೇ 31 (ಯುಎನ್‌ಐ) ಅರಬ್ಬಿ ಸಮುದ್ರ ಮತ್ತು ಲಕ್ಷದ್ವೀಪಗಳ ಮೇಲೆ ರೂಪುಗೊಂಡ ಕಡಿಮೆ ಒತ್ತಡ ಪ್ರದೇಶವು ಚಂಡಮಾರುತವಾಗಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದ್ದು, ಜೂನ್ 3 ರೊಳಗೆ ಕರಾವಳಿ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಗುಜರಾತ್ ಗೆ ಬೀಸುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.

 Sharesee more..
ದೇಶದಲ್ಲಿ ಒಂದೇ ದಿನ 8380 ಕೊರೋನಾ ಸೋಂಕು ಪತ್ತೆ: ಸಾವಿನ ಸಂಖ್ಯೆ 5164ಕ್ಕೆ ಏರಿಕೆ

ದೇಶದಲ್ಲಿ ಒಂದೇ ದಿನ 8380 ಕೊರೋನಾ ಸೋಂಕು ಪತ್ತೆ: ಸಾವಿನ ಸಂಖ್ಯೆ 5164ಕ್ಕೆ ಏರಿಕೆ

31 May 2020 | 9:26 PM

ನವದೆಹಲಿ, ಮೇ 31 (ಯುಎನ್ಐ) ರಾಷ್ಟ್ರವ್ಯಾಪಿ ಲಾಕ್‌ಡೌನ್ 4.0 ಭಾನುವಾರ ಮುಕ್ತಾಯಗೊಳ್ಳುತ್ತಿದ್ದಂತೆ, ದೇಶದಲ್ಲಿ ಒಂದೇ ದಿನ ಕೊರೋನಾ ಸೋಂಕು 8380 ಜನರಲ್ಲಿ ಕಂಡುಬಂದಿದೆ.

 Sharesee more..