Sunday, Dec 8 2019 | Time 13:31 Hrs(IST)
 • ದೆಹಲಿ ಬೆಂಕಿ ದುರಂತ: ಮೃತಪರ ಕುಟುಂಬಗಳಿಗೆ ಪ್ರಧಾನಿಯವರಿಂದ ತಲಾ 2 ಲಕ್ಷ ರೂ ಪರಿಹಾರ ಘೋಷಣೆ
 • ಉನ್ನಾವೋ ಘಟನೆ : ಸಿಎಂ ಬರುವವರೆಗೂ ಅಂತ್ಯ ಸಂಸ್ಕಾರ ನಡೆಸದಿರಲು ಬಿಗಿಪಟ್ಟು
 • ದೆಹಲಿ ಅಗ್ನಿ ದುರಂತ; ತನಿಖೆಗೆ ಸಿಎಂ ಕೇಜ್ರೀವಾಲ್ ಆದೇಶ, ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ
 • ಪರಿಷ್ಕೃತ ಪೌರತ್ವ ತಿದ್ದುಪಡಿ ಮಸೂದೆ: ಸೋಮವಾರ ಮಂಡನೆ
 • ಲಾ ಲೀಗಾ: ರೊನಾಲ್ಡೊ ದಾಖಲೆ ಮುರಿದ ಮೆಸ್ಸಿ
 • ಲಾ ಲೀಗಾ: ರೊನಾಲ್ಡೊ ದಾಖಲೆ ಮುರಿದ ಮೆಸ್ಸಿ
 • ನಾಳೆ ಉಪ ಕದನ ಫಲಿತಾಂಶ; ದೇವರ ಮೊರೆ ಹೋದ ಬಿಎಸ್‌ವೈ
 • ಲಾ ಲೀಗಾ ಫುಟ್ಬಾಲ್‌ ಟೂರ್ನಿ: ಮೆಸ್ಸಿ ಹ್ಯಾಟ್ರಿಕ್‌ ಗೋಲಿನ ನೆರವಿನಿಂದ ಬಾರ್ಸಿಲೋನಾಗೆ ಜಯ
 • ಭದ್ರತಾಪಡೆ ಗುಂಡಿಗೆ ಐವರು ಉಗ್ರರ ಬಲಿ
 • ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಮಣಿಪುರದಲ್ಲಿ ತೀವ್ರ ಪ್ರತಿಭಟನೆ: ಸಿಎಬಿಗೆ ಕಾಂಗ್ರೆಸ್, ಎಡಪಕ್ಷ ವಿರೋಧ
 • ಉಪದ್ರವ ಕೊಡುತ್ತಿದ್ದ ಚಿರತೆ ಕೊನೆಗೂ ಬಲೆಗೆ ಬಿತ್ತು
 • ಚಿಕ್ಕಮಗಳೂರಿನಲ್ಲಿ ಮೂರು ದಿನಗಳ ದತ್ತ ಜಯಂತಿ ಜಿಲ್ಲಾಡಳಿತದಿಂದ ವ್ಯಾಪಕ ಬಂದೋಬಸ್ತ್
 • ಎಟಿಕೆ ತಂಡದ ರಾಯ್ ಕೃಷ್ಣ ಮುಡಿಗೆ ನವೆಂಬರ್ ಐಎಸ್ಎಲ್‌ ಹಿರೋ ಮುಕುಟ
 • ದೆಹಲಿಯಲ್ಲಿ ಭೀಕರ ಅಗ್ನಿದುರಂತ : ಮೃತರ ಸಂಖ್ಯೆ 43ಕ್ಕೆ ಏರಿಕೆ
 • ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್‌ ಸೆಹ್ವಾಗ್‌ ದ್ವಿಶತಕಕ್ಕೆ ಎಂಟು ವರ್ಷ
business economy Share

ಹೂಡಿಕೆದಾರರ ಲಾಭದ ಪ್ರವೃತ್ತಿ:ಸೆನ್ಸೆಕ್ಸ್ 38,736.23ಕ್ಕೆ ಇಳಿಕೆ

ಮುಂಬೈ, ಜುಲೈ 12 (ಯುಎನ್‌ಐ) ಹೂಡಿಕೆದಾರರ ಲಾಭದ ಪ್ರವೃತ್ತಿ ಹಿನ್ನೆಲೆಯಲ್ಲಿ ಮುಂಬೈ ಷೇರು ವಿನಿಮಯ ಕೇಂದ್ರ (ಬಿಎಸ್‌ಇ) ಸೂಚ್ಯಂಕ, ಸೆನ್ಸೆಕ್ಸ್ ಶುಕ್ರವಾರ ಚಂಚಲ ವಹಿವಾಟಿನಲ್ಲಿ ದಿನದ ಅಂತ್ಯಕ್ಕೆ 86.88 ಅಂಕ ಕುಸಿದು 38,736.23ಕ್ಕೆ ಇಳಿದಿದೆ.
ರಾಷ್ಟ್ರೀಯ ಷೇರು ಪೇಟೆ (ಎನ್ಎಸ್ಇ) ಸೂಚ್ಯಂಕ ನಿಫ್ಟಿ ಸಹ 30.40 ಅಂಕ ಕುಸಿದು
11,552.50 ಕ್ಕೆ ತಲುಪಿದೆ.
ಗುರುವಾರ 266 ಅಂಕ ಏರಿಕೆ ಕಂಡಿದ್ದ ಸೆನ್ಸೆಕ್ಸ್, ಇಂದು ಬೆಳಗಿನ ವಹಿವಾಟಿನಲ್ಲಿ 118 ಅಂಕ ಏರಿಕೆ ಕಂಡು 38,941.10 ಕ್ಕೆ ತಲುಪಿತು. ಆದರೆ, ಆರಂಭಿಕ ಲಾಭವು ಮಧ್ಯಾಹ್ನದ ಅವಧಿಯ ತೀವ್ರ ಏರಿಳಿತದಿಂದ ಅಳಸಿ ಹೋಯಿತು.
ಸೆನ್ಸೆಕ್ಸ್ 39,021.84 ಹಾಗೂ 38,684.85 ರ ನಡುವೆ ಏರಿಳಿತ ಕಂಡಿತು. ಅಂತಿಮವಾಗಿ 86.88 ಅಂಕ ಇಳಿಕೆ ಕಂಡು 38,736.23 ಕ್ಕೆ ವಹಿವಾಟು ಕೊನೆಗೊಳಿಸಿತು.
ನಿಫ್ಟಿ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ.11,639.55ತ್ತು 11,538.60ರ ಮಟ್ಟದಲ್ಲಿತ್ತು.
ವಲಯ ಸೂಚ್ಯಂಕಗಳಾದ ಬಂಡವಾಳ ಸರಕು, ದೂರಸಂಪರ್ಕ, ಕೈಗಾರಿಕೆ, ಬ್ಯಾಂಕಿಗ್ ನ ಷೇರುಗಳ ಕುಸಿತವು ಸೆನ್ಸೆಕ್ಸ್ ಏರಿಕೆಗೆ ಅಡ್ಡಿಯಾಯಿತು. ಲೋಹ, ರಿಯಾಲ್ಟಿ, ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಮತ್ತು ಆರೋಗ್ಯ ರಕ್ಷಣೆ ವಲಯಗಳ ಷೇರುಗಳ ಏರಿಕೆ ಸೆನ್ಸೆಕ್ಸ್ ಮತ್ತಷ್ಟು ಕುಸಿತವಾಗುವುದನ್ನು ತಡೆದಿದೆ ಎಂದು ಪೇಟೆಯ ಮಧ್ಯವರ್ಥಿಗಳು ತಿಳಿಸಿದ್ದಾರೆ.
ಬಿಎಸ್‌ಇನಲ್ಲಿ ಮಾರುಕಟ್ಟೆ ಗಾತ್ರ ಒಟ್ಟಾರೆ ಋಣಾತ್ಮಕವಾಗಿತ್ತು. 1,196 ಕಂಪೆನಿಗಳ ಷೇರುಗಳು ಏರಿಕೆ ಕಂಡರೆ, 1,252 ಕಂಪೆನಿಗಳ ಷೇರುಗಳು ಇಳಿಕೆ ಕಂಡಿವೆ. ಉಳಿದಂತೆ 146 ಕಂಪೆನಿಗಳ ಷೇರುಗಳು ಯಥಾಸ್ಥಿತಿಯಲ್ಲಿದ್ದವು.
ಸಾಗರೋತ್ತರದಲ್ಲಿ ಅಮೆರಿಕ ಫೆಡರಲ್‌ ರಿಸರ್ವ್ ಈ ತಿಂಗಳ ಕೊನೆಯಲ್ಲಿ ಬಡ್ಡಿ ದರಗಳನ್ನು ಕಡಿತಗೊಳಿಸುವ ನಿರೀಕ್ಷೆಯಿಂದ ಹೆಚ್ಚಿನ ಯೂರೋಪ್‌ ಮಾರುಕಟ್ಟೆಗಳು ಏರಿಕೆಯಲ್ಲಿ ವಹಿವಾಟು ನಡೆಸುತ್ತಿದ್ದರೆ, ಏಷ್ಯಾದ ಮಾರುಕಟ್ಟೆಗಳು ಮಿಶ್ರವಹಿವಾಟು ನಡೆಸಿವೆ.
ಯುಎನ್‌ಐ ಎಸ್‌ಎಲ್‌ಎಸ್‌ ಕೆವಿಆರ್ 1804
More News
ಎಲೆಕ್ಟ್ರಾನಿಕ್ ವಾಹನ; ಪಂಜಾಬ್ ಸರ್ಕಾರದೊಂದಿಗೆ ಹೀರೋ ಎಲೆಕ್ಟ್ರಿಕ್ ಕಂಪನಿ ಒಪ್ಪಂದ

ಎಲೆಕ್ಟ್ರಾನಿಕ್ ವಾಹನ; ಪಂಜಾಬ್ ಸರ್ಕಾರದೊಂದಿಗೆ ಹೀರೋ ಎಲೆಕ್ಟ್ರಿಕ್ ಕಂಪನಿ ಒಪ್ಪಂದ

07 Dec 2019 | 9:27 PM

ನವದೆಹಲಿ, ನ 7 (ಯುಎನ್ ಐ ) ಭಾರತದ ಬೃಹತ್ ಎಲೆಕ್ಟ್ರಿಕ್ ವಾಹನಗಳ ಬ್ರಾಂಡ್ ಹೀರೋ ಎಲೆಕ್ಟ್ರಿಕ್ ಕಂಪನಿ, ವಿದ್ಯುತ್ ಚಾಲಿತ ವಾಹನಗಳ ತಯಾರಿಕೆಗೆ ಸಂಬಂಧಿಸಿದಂತೆ ಪಂಜಾಬ್ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ.

 Sharesee more..

ಡಿ 16 ರಿಂದ ದಿನದ 24 ಗಂಟೆಯೂ ನೆಫ್ಟ್ ಸೌಲಭ್ಯ

07 Dec 2019 | 9:45 AM

 Sharesee more..