Saturday, Jan 25 2020 | Time 01:25 Hrs(IST)
National Share

ಹೈದರಾಬಾದ್ ಎನ್‍ಕೌಂಟರ್: ಘಟನಾ ಸ್ಥಳಕ್ಕೆ ಎನ್ ಎಚ್ ಆರ್ ಸಿ ತಂಡ ಭೇಟಿ

ಹೈದರಾಬಾದ್, ಡಿ 7(ಯುಎನ್‍ಐ)- ಪಶುವೈದ್ಯೆ ದಿಶಾ ಮೇಲೆ ಅತ್ಯಾಚಾರ ಮತ್ತು ಹತ್ಯೆ ಆರೋಪಿಗಳು ನಗರದ ಹೊರವಲಯದ ಶಾದ್‍ನಗರದ ಚಟನ್‍ಪಲ್ಲಿಯಲ್ಲಿ ಎನ್‍ಕೌಂಟರ್‍ನಲ್ಲಿ ಹತ್ಯೆಯಾದ ಒಂದು ದಿನದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್ ಎಚ್ ಆರ್ ಸಿ)ದ ತಂಡ ಎನ್‍ಕೌಂಟರ್ ನಡೆದ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲಿಸಿತು. ಶಾದ್‍ನಗರ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ಎನ್‍ಕೌಂಟರ್‍ನಲ್ಲಿ ನಾಲ್ವರು ಆರೋಪಿಗಳು ಹತ್ಯೆಯಾಗಿರುವ ಕುರಿತು ಮೇಲ್ನೋಟಕ್ಕೆ ಕಂಡು ಬಂದಿರುವ ಅಂಶಗಳನ್ನು ಪರಿಗಣಿಸಿ, ಮಾನವ ಹಕ್ಕುಗಳ ಆಯೋಗ ಹಿರಿಯ ಪೊಲೀಸ್ ಅಧಿಕಾರಿ ನೇತೃತ್ವದ ತಜ್ಞರ ತಂಡವನ್ನು ತನಿಖೆಗಾಗಿ ಘಟನಾ ಸ್ಥಳಕ್ಕೆ ಕಳುಹಿಸಿದೆ. ಎನ್‍ಕೌಂಟರ್ ಸಂಬಂಧಿಸಿ ತನಿಖಾ ವರದಿಯನ್ನು ನೀಡುವ ಮುನ್ನ ತಂಡ ಹತ್ಯೆಯಾದ ಆರೋಪಿಗಳ ಮೃತದೇಹಗಳನ್ನಿಸಲಾಗಿರುವ ಮೆಹಬೂಬನಗರ್ ಸರ್ಕಾರಿ ಆಸ್ಪತ್ರೆಗೂ ಭೇಟಿ ನೀಡಲಿದೆ. ಮೃತದೇಹಗಳನ್ನು ಸಂರಕ್ಷಿಸುವಂತೆ ತೆಲಂಗಾಣ ಹೈಕೋರ್ಟ್ ಸೂಚಿಸಿತ್ತು.
‘ಎನ್‍ಕೌಂಟರ್ ಕುರಿತು ವಿವರಣೆ ಕೋರಿ ತೆಲಂಗಾಣ ಪೊಲೀಸರಿಗೆ ಆಯೋಗ ನೋಟಿಸ್ ನೀಡಿದೆ. ಪೊಲೀಸರ ಕಸ್ಟಡಿಯಲ್ಲಿದ್ದ 26 ವರ್ಷದೊಳಗಿನ ನಾಲ್ವರು ವ್ಯಕ್ತಿಗಳನ್ನು ಎನ್‍ಕೌಂಟರ್‍ನಲ್ಲಿ ಹತ್ಯೆ ಮಾಡಲಾಗಿದೆ ಎಂಬುದು ಗಂಭೀರ ವಿಷಯವಾಗಿದೆ.’ ಎಂದು ಆಯೋಗ ಹೇಳಿದೆ.
ಪಶುವೈದ್ಯೆ ದಿಶಾ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳು ಶುಕ್ರವಾರ ನಸುಕಿನಲ್ಲಿ ಎನ್‍ಕೌಂಟರ್‍ನಲ್ಲಿ ಹತರಾಗಿದ್ದಾರೆ. ಪಶುವೈದ್ಯಯನ್ನು ಸುಟ್ಟ ಜಾಗಕ್ಕೆ ಆರೋಪಿಗಳನ್ನು ಪೊಲೀಸರು ಕರೆದೊಯ್ದಿದ್ದಾಗ ಪೊಲೀಸರ ಬಳಿಯಿದ್ದ ರಿವಲ್ವಾರ್ ಕಸಿದುಕೊಂಡ ಆರೋಪಿಗಳು ಗುಂಡು ಹಾರಿಸಿದ್ದು ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿ ಎನ್‍ಕೌಂಟರ್ ನಡೆಸಿದ್ದಾರೆ ಎಂದು ಹೈದರಾಬಾದ್ ಪೊಲೀಸ್ ಆಯುಕ್ತರು ಶನಿವಾರ ಸ್ಪಷ್ಟಪಡಿಸಿದ್ದರು.
ಯುಎನ್‍ಐ ಎಸ್‍ಎಲ್‍ಎಸ್ 1500
More News
ಗಣರಾಜ್ಯ:  ನಾಳೆ ರಾಷ್ಟ್ರ ಉದ್ದೇಶಿಸಿ ರಾಷ್ಟ್ರಪತಿ ಭಾಷಣ

ಗಣರಾಜ್ಯ: ನಾಳೆ ರಾಷ್ಟ್ರ ಉದ್ದೇಶಿಸಿ ರಾಷ್ಟ್ರಪತಿ ಭಾಷಣ

24 Jan 2020 | 8:49 PM

ನವದೆಹಲಿ, ಜನವರಿ 24 (ಯುಎನ್‌ಐ) ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ 71 ನೇ ಗಣರಾಜ್ಯೋತ್ಸವದ ಮುನ್ನಾದಿನದಂದು ಶನಿವಾರ ( ನಾಳೆ) ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

 Sharesee more..