Sunday, Nov 1 2020 | Time 01:30 Hrs(IST)
Special Share

ಹಿಂದೂ ದೇವಾಲಯಗಳ ಮೇಲಿನ ದಾಳಿ ಬಗ್ಗೆ ಸಚಿವರ ಅವಹೇಳನಕಾರಿ ಹೇಳಿಕೆ:ಸ್ವಾಮಿ ಪರಿಪೂರ್ಣಾನಂದ ಖಂಡನೆ

ಹೈದರಾಬಾದ್, ಸೆ 23 (ಯುಎನ್‍ಐ) ಹಿಂದೂ ದೇವಾಲಯಗಳ ಬಗ್ಗೆ ಸಚಿವ ಕೊಡಾಲಿ ವೆಂಕಟೇಶ್ವರ ರಾವ್ ಅಲಿಯಾಸ್ ನಾನಿ ನೀಡಿರುವ ಅವಹೇಳನಕಾರಿ ಹೇಳಿಕೆಗಳನ್ನು ಖಂಡಿಸಿರುವ ಬಿಜೆಪಿ ಮುಖಂಡ ಸ್ವಾಮಿ ಪರಿಪೂರ್ಣಾನಂದ, ದೇವರು ದೇವಾಲಯಗಳ ಕುರಿತು ಮಾತನಾಡುವ ಮುನ್ನ ಸಚಿವರು ಅದರ ಬಗೆಗಿನ ಜ್ಞಾನ ಮತ್ತು ಸಂಪ್ರದಾಯಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದ್ದಾರೆ.
ಅಂಜನೇಯಸ್ವಾಮಿ ವಿಗ್ರಹಗಳನ್ನು ಆಟಿಕೆ ಎಂದು ಕರೆದ ಮಂತ್ರಿ, ರಥವನ್ನು ಸುಟ್ಟುಹಾಕುವುದು ಮತ್ತು ವಿಗ್ರಹಗಳನ್ನು ಸಣ್ಣ ಘಟನೆಗಳೆಂದು ಕರೆಯುವುದು ಸರಿಯಲ್ಲ. ಇದು ಕೋಟಿಗಟ್ಟಲೆ ಹಿಂದೂ ಜನರ ನಂಬಿಕೆಯಾಗಿದೆ. ಜನರ ಪ್ರತಿನಿಧಿಗಳು ಹಿಂದೂಗಳ ನಂಬಿಕೆಯನ್ನು ಗೌರವಿಸಬೇಕು ಇಲ್ಲದಿದ್ದರೆ ಜನರು ಅವರಿಗೆ ಸರಿಯಾದ ಪಾಠ ಕಲಿಸುತ್ತಾರೆ ಎಂದಿದ್ದಾರೆ.
ತಿರುಪತಿ ತಿರುಮಲ ದೇವಾಲಯ ಪ್ರವೇಶಕ್ಕೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹೊರಡಿಸಿರುವ ಘೋಷಣೆ ಸರಿಯಲ್ಲ. ಅವರು ಕ್ರೈಸ್ತ ಧರ್ಮೀಯರೆಂಬುದು ಎಲ್ಲರಿಗೂ ತಿಳಿದಿದೆ. ಹಾಗೆಂದ ಮಾತ್ರಕ್ಕೆ ಕೇವಲ ಕ್ರೈಸ್ತರು ಮಾತ್ರವಲ್ಲ, ಹಿಂದೂಗಳು ಸೇರಿದಂತೆ ಪ್ರತಿಯೊಬ್ಬರೂ ಮತ ಹಾಕಿ ಚುನಾಯಿಸಿದ್ದಾರೆ. ಹೀಗಾಗಿ ಅವರಿಗೆ ದ್ರೋಹ ಮಾಡುವಂತಿಲ್ಲ ಎಂದಿದ್ದಾರೆ.
ವೈಎಸ್‌ಆರ್‌ಸಿಪಿ ಸರ್ಕಾರವು ಆಂಧ್ರಪ್ರದೇಶದಲ್ಲಿ ಅಧಿಕಾರ ವಹಿಸಿಕೊಂಡ ನಂತರ ಹಿಂದೂ ದೇವರು, ದೇವಾಲಯಗಳ ಮೇಲಿನ ದಾಳಿ ಮತ್ತಿತರ 16 ಘಟನೆಗಳು ನಡೆದಿವೆ. ಈ ಸಂಬಂಧ ಮುಖ್ಯಮಂತ್ರಿಯವರು ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ.
ಯುಎನ್‍ಐ ಎಸ್‍ಎ 1651
More News

ಟ್ರೂ ಕಾಲರ್ ಅ್ಯಪ್ ನಲ್ಲಿ ಮತ್ತೊಂದು ಹೊಸ ಫೀಚರ್

31 Oct 2020 | 7:50 PM

 Sharesee more..
ನ 1 ರಿಂದ ವೈಷ್ಣೋದೇವಿ ದರ್ಶನಕ್ಕೆ ಅವಕಾಶ

ನ 1 ರಿಂದ ವೈಷ್ಣೋದೇವಿ ದರ್ಶನಕ್ಕೆ ಅವಕಾಶ

31 Oct 2020 | 7:22 PM

ಶ್ರೀನಗರ್, ಅ 31 (ಯುಎನ್ಐ) ಕೇಂದ್ರ ಸರ್ಕಾರದ ಅನ್ಲಾಕ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ಜಮ್ಮು ಕಾಶ್ಮೀರ ಆಡಳಿತ ನವೆಂಬರ್ 1 ರಿಂದ ಮಾತಾ ವೈಷ್ಣೋದೇವಿಯ ದೇಗುಲದಲ್ಲಿ ದಿನಕ್ಕೆ 15 ಸಾವಿರ ಯಾತ್ರಾರ್ಥಿಗಳಿಗೆ ದರ್ಶನಕ್ಕೆ ಅವಕಾಶ ನೀಡಿದೆ.

 Sharesee more..
ಅದು ಪಕ್ಷದ ತೀರ್ಮಾನ  ಇಸಿಗೆ ಸಂಬಂಧವಿಲ್ಲ; 'ಸುಪ್ರೀಂ'  ಮೊರೆ ಹೋದ ಕಮಲ್ ನಾಥ್

ಅದು ಪಕ್ಷದ ತೀರ್ಮಾನ ಇಸಿಗೆ ಸಂಬಂಧವಿಲ್ಲ; 'ಸುಪ್ರೀಂ' ಮೊರೆ ಹೋದ ಕಮಲ್ ನಾಥ್

31 Oct 2020 | 7:11 PM

ನವದೆಹಲಿ, ಅ 31(ಯುಎನ್ಐ) ತಮ್ಮ 'ತಾರಾ ಪ್ರಚಾರಕ' ಸ್ಥಾನಮಾನ ರದ್ದುಗೊಳಿಸಿದ ಚುನಾವಣಾ ಆಯೋಗ ಕ್ರಮದ ವಿರುದ್ಧ ಹಿರಿಯ ಕಾಂಗ್ರೆಸ್ ನಾಯಕ, ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಶನಿವಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

 Sharesee more..

ನ್ಯಾಯ್ ಕೌಶಲ್ ಮೂಲಕ ತ್ವರಿತ ನ್ಯಾಯದಾನ: ಸಿಜೆಐ

31 Oct 2020 | 4:58 PM

 Sharesee more..