Monday, Sep 16 2019 | Time 06:28 Hrs(IST)
Entertainment Share

ಹ್ಯಾಟ್ರಿಕ್ ಹೀರೋ ಭುಜದ ಶಸ್ತ್ರಚಿಕಿತ್ಸೆ ಯಶಸ್ವಿ: ಲಂಡನ್​ನಲ್ಲಿ ವಿಶ್ರಾಂತಿ: ನಾಳೆ ಅಭಿಮಾನಿಗಳೊಂದಿಗೆ ಜನ್ಮದಿನಾಚರಣೆಗೆ ಅಲಭ್ಯ

ಬೆಂಗಳೂರು, ಜುಲೈ 11 (ಯುಎನ್ಐ) ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಭಿಮಾನಿಗಳ ಹಾರೈಕೆ ಫಲಿಸಿದ್ದು, ಲಂಡನ್ ನಲ್ಲಿ ಅವರ ಭುಜದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಶುಕ್ರವಾರ ಜುಲೈ 12ರಂದು ಅವರ ಜನ್ಮದಿನಕ್ಕೂ ಮೊದಲೇ ಬಂದಿರುವ ಈ ಸಿಹಿ ಸುದ್ದಿ ಅಭಿಮಾನಿಗಳಿಗೆ ನೆಮ್ಮದಿ ತಂದಿದೆ ಆದರೆ ಬರ್ತ್ ಡೇ ಗೆ ಲಭ್ಯವಿರುವುದಿಲ್ಲ ಎಂಬ ನೋವು ಕಾಡುತ್ತಿದೆ

ಕಳೆದ ಆರು ತಿಂಗಳಿನಿಂದ ಭುಜದ ನೋವಿನಿಂದ ಬಳಲುತ್ತಿದ್ದ ಶಿವಣ್ಣ ಕೆಲ ದಿನಗಳ ಹಿಂದೆಯಷ್ಟೇ, ಶಸ್ತ್ರ ಚಿಕಿತ್ಸೆಗಾಗಿ ಲಂಡನ್​ಗೆ ತೆರಳಿದ್ದರು. ಬುಧವಾರ ಶಿವಣ್ಣನವರಿಗೆ ಶಸ್ತ್ರ ಚಿಕಿತ್ಸೆ ನಡೆದು ಆಫರೇಶನ್​ ಯಶಸ್ವಿಯಾಗಿದ್ದು, ವಾರ್ಡ್​ಗೆ ಶಿಫ್ಟ್ ಮಾಡಲಾಗಿದೆಯಂತೆ

ಶಿವಣ್ಣ ಆರೋಗ್ಯವಾಗಿದ್ದಾರೆ, ವೈದ್ಯರು ಒಂದು ತಿಂಗಳು ವಿಶ್ರಾಂತಿಗೆ ಸೂಚಿಸಿದ್ದಾರೆ ಎಂದು ಶಿವಣ್ಣ ಆಪ್ತ ಹಾಗೂ ನಿರ್ಮಾಪಕ ಕೆ.ಪಿ.ಶ್ರೀಕಾಂತ್​ ಟ್ವಿಟರ್​ ಖಾತೆಯ ಮೂಲಕ ಸ್ಪಷ್ಟ ಪಡಿಸಿದ್ದಾರೆ.

ಶಿವರಾಜ್ ಕುಮಾರ್ ಜೊತೆಗೆ ಪತ್ನಿ ಗೀತಾ ಶಿವರಾಜಕುಮಾರ್ ಹಾಗೂ ಪುತ್ರಿ ನಿವೇದಿತಾ ಕೂಡ ಲಂಡನ್​ಗೆ ತೆರಳಿದ್ದಾರೆ ಪುನೀತ್ ರಾಜಕುಮಾರ್ ಕೂಡ ಅಣ್ಣನ ಆರೋಗ್ಯ ನೋಡಿಕೊಳ್ಳುತ್ತಿದ್ದಾರೆ.

ಕಳೆದ 6 ತಿಂಗಳ ಹಿಂದೆ ಪ್ರವಾಸಕ್ಕೆ ತೆರಳಿದ್ದ ವೇಳೆ ಹಿಮದಲ್ಲಿ ಜಾರಿ ಬಿದ್ದು ಶಿವಣ್ಣ ಗಾಯಗೊಂಡಿದ್ದು, ಆ ವೇಳೆ ಅವರಿಗೆ ಭುಜದ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಶೂಟಿಂಗ್​ ಮುಗಿಸಿದ ಶಿವಣ್ಣ ಹುಟ್ಟುಹಬ್ಬ ಆಚರಣೆಯನ್ನು ಕೈಬಿಟ್ಟು ಆಪರೇಶನ್​ಗಾಗಿ ಲಂಡನ್​ಗೆ ತೆರಳಿದ್ದರು.

ಇನ್ನು ಶಿವರಾಜ್ ಕುಮಾರ್ ಅವರು ಶಸ್ತ್ರಚಿಕಿತ್ಸೆಗೆ ತೆರಳುವ ಮುನ್ನ ಬಾಲಿವುಡ್ ನಟ ಅರ್ಬಾಜ್ ಖಾನ್ ಅವರನ್ನು ಭೇಟಿ ಮಾಡಿದ್ದರು ಎಂದು ತಿಳಿದುಬಂದಿದೆ.
ಯುಎನ್ಐ ಎಸ್ಎ ಎಸ್ಎಚ್ 1747
More News

ಯೂಟ್ಯೂಬ್ ಚಾನೆಲ್ ಗೆ ದಿಶಾ ಪಟಾನಿ ಚಾಲನೆ

14 Sep 2019 | 6:42 PM

 Sharesee more..
ಮೇಕಪ್ ಇಲ್ಲದ ಸಮಂತಾ ಫೋಟೋಗೆ ಅಭಿಮಾನಿಗಳು ಫಿದಾ

ಮೇಕಪ್ ಇಲ್ಲದ ಸಮಂತಾ ಫೋಟೋಗೆ ಅಭಿಮಾನಿಗಳು ಫಿದಾ

14 Sep 2019 | 5:11 PM

ಬೆಂಗಳೂರು, ಸೆ 14 (ಯುಎನ್ಐ) ಕೆಲವು ತಿಂಗಳುಗಳ ಹಿಂದಷ್ಟೇ ಬಹುಭಾಷಾ ನಟಿ ಕಾಜಲ್ ಅಗರ್ ವಾಲ್ ತಮ್ಮ ಮೇಕಪ್ ಇಲ್ಲದ ಫೋಟೋ ಒಂದನ್ನು ಶೇರ್ ಮಾಡಿ, ಅಭಿಮಾನಿಗಳ ಮನಗೆದ್ದಿದ್ದರು.

 Sharesee more..