Monday, Sep 21 2020 | Time 10:44 Hrs(IST)
  • ಕೊರೋನಾ ಆರ್ಭಟ, 24 ಗಂಟೆಯಲ್ಲಿ 1,130 ಮಂದಿ ಸಾವು
  • ರಾಜ್ಯಸಭೆಯಲ್ಲಿ ಕೋಲಾಹಲ; 8 ಸದಸ್ಯರ ಅಮಾನತ್ತು
  • ರಾಜ್ಯಸಭೆಯಲ್ಲಿ ಕೋಲಾಹಲ; 8 ಸದಸ್ಯರ ಅಮಾನತ್ತು
  • ಕೊವಿಡ್‍-19: ಬ್ರೆಜಿಲ್‌ನಲ್ಲಿ ಸಾವಿನ ಸಂಖ್ಯೆ 1,36,895 ಕ್ಕೆ ಏರಿಕೆ
  • ಬ್ರೆಜಿಲ್‌ನಲ್ಲಿ ಹೆದ್ದಾರಿ ಅಪಘಾತ: 12 ಮಂದಿ ಸಾವು
  • ಪ್ರೇಮಸೌಧ, ತಾಜ್ ಮಹಲ್ ವೀಕ್ಷಣೆಗೆ ಸಾರ್ವಜನಿಕರಿಗೆ ಅನುಮತಿ
  • ಭಾರತ- ಚೀನಾ ನಡುವೆ ಇಂದು ಸೇನಾ ಮಟ್ಟದ ಮಾತುಕತೆ
  • ಮಹಾರಾಷ್ಟ್ರದಲ್ಲಿ ಕಟ್ಟಡ ಕುಸಿದು 8 ಮಂದಿ ಸಾವು
Sports Share

ಹಾರ್ದಿಕ್‌ ಪಾಂಡ್ಯ ಮಗನಿಗೆ ಆಲ್‌ರೌಂಡರ್‌ ಆಗುವಂತೆ ರಾಹುಲ್‌ ಸಲಹೆ

ನವದೆಹಲಿ, ಆಗಸ್ಟ್ 7 (ಯುಎನ್ಐ)
ಟೀಮ್‌ ಇಂಡಿಯಾ ಆಟಗಾರರಾದ ಹಾರ್ದಿಕ್‌ ಪಾಂಡ್ಯ ಹಾಗೂ ಕೆ.ಎಲ್‌ ರಾಹುಲ್‌ ಅವರ ನಡುವೆ ಅತ್ಯುತ್ತಮ ಬಾಂಧವ್ಯವಿದೆ. ಇವರಿಬ್ಬರು ಒಮ್ಮೆ ಕಾಫಿ ವಿಥ್‌ ಕರನ್‌ ಕಾರ್ಯಕ್ರಮದಲ್ಲಿ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಆ ಘಟನೆಯ ಬಳಿಕ ತಪ್ಪು ಒಪ್ಪಿಕೊಂಡ ಈ ಇಬ್ಬರು, ಅತ್ಯುತ್ತಮ ಸ್ನೇಹಿತರಾಗಿದ್ದಾರೆ.
ಇತ್ತೀಚೆಗಷ್ಟೇ ಹಾರ್ದಿಕ್‌ ಪಾಂಡ್ಯ ಹಾಗೂ ನಟಿ ಮತ್ತು ರೂಪದರ್ಶಿ ನತಾಶಾ ಸ್ಟ್ಯಾನ್‌ಕೋವಿಚ್‌ ದಂಪತಿಗೆ ಗಂಡು ಮಗು ಜನಿಸಿತ್ತು. ಹಾರ್ದಿಕ್‌ ಪಾಂಡ್ಯ ಸಹೋದರ ಕೃನಾಲ್‌ ಪಾಂಡ್ಯ ಮಗುವನ್ನು ಎತ್ತಿಕೊಂಡಿರುವ ವಿಡಿಯೋವನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು ಹಾಗೂ 'ಲೆಟ್ಸ್‌ ಟಾಕ್‌ ಕ್ರಿಕೆಟ್‌' ಎಂಬ ಶೀರ್ಷಿಕೆಯನ್ನು ನೀಡಿದ್ದರು. ಇದಕ್ಕೆ ಕಾಮೆಂಟ್‌ ಹಾಕಿದ ಕೆ.ಎಲ್‌ ರಾಹುಲ್‌, 'ಫಾಸ್ಟ್‌ ಬೌಲಿಂಗ್‌ ಆಲ್‌ರೌಂಡರ್‌ ಆಗುವಂತೆ ದಯವಿಟ್ಟು ಅವರಿಗೆ ಹೇಳಿ' ಎಂದು ಸಲಹೆ ನೀಡಿದ್ದಾರೆ.
ಹಾರ್ದಿಕ್‌ ಪಾಂಡ್ಯ ಹಾಗೂ ಪತ್ನಿ ನತಾಶಾ ಸ್ಟ್ಯಾನ್‌ ಕೋವಿಚ್‌ ದಂಪತಿಗೆ ಜುಲೈ 30 ರಂದು ಗಂಡು ಮಗು ಜನಿಸಿತ್ತು. ಈ ವರ್ಷದ ಆರಂಭದಲ್ಲಿ ಈ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಹಾಗೂ ಲಾಕ್‌ಡೌನ್‌ ಸಮಯದಲ್ಲಿ ಈ ಜೋಡಿ ಸರಳ ವಿವಾಹವಾಗಿತ್ತು.
2016 ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ದಿನದಿಂದ ಇದುವರೆಗೂ ಹಾರ್ದಿಕ್‌ ಪಾಂಡ್ಯ ಸೀಮಿತ ಓವರ್‌ಗಳ ಭಾರತ ತಂಡದಲ್ಲಿ ಕಾಯಂ ಆಟಗಾರರಾಗಿ ಆಡುತ್ತಿದ್ದಾರೆ. ವೇಗದ ಬೌಲಿಂಗ್‌ ಆಲ್‌ರೌಂಡರ್‌ ಆಗಿ ಆಡುತ್ತಿರುವ ಹಾರ್ದಿಕ್‌ ಪಾಂಡ್ಯ, ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಸಾಕಷ್ಟು ಸುಧಾರಣೆ ಕಂಡಿದ್ದಾರೆ.
ಕೆ.ಎಲ್‌ ರಾಹುಲ್‌ ಹಾಗೂ ಹಾರ್ದಿಕ್‌ ಪಾಂಡ್ಯ ಇಬ್ಬರ ನಡುವೆ ಅದ್ಭುತ ಸಂಬಂಧವಿದೆ. ಈ ಇಬ್ಬರೂ ಸೆಪ್ಟೆಂಬರ್‌ 19 ರಿಂದ ಯುಎಇಯಲ್ಲಿ ಆರಂಭವಾಗುವ 13ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹಾರ್ದಿಕ್‌ ಹಾಗೂ ಕೃನಾಲ್‌ ಅವರು ಮುಂಬೈ ಇಂಡಿಯನ್ಸ್ ತಂಡದ ನಿರ್ನಾಯಕ ಆಟಗಾರರಾಗಿದ್ದಾರೆ. ಕರ್ನಾಟಕದ ಕೆ.ಎಲ್ ರಾಹುಲ್‌ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡವನ್ನು ಮೊಟ್ಟ ಮೊದಲ ಬಾರಿ ಮುನ್ನಡೆಸಲಿದ್ದು, ಚೊಚ್ಚಲ ಪ್ರಶಸ್ತಿಗಾಗಿ ಪ್ರಯತ್ನ ನಡೆಸಲಿದ್ದಾರೆ.
ಯುಎನ್ಐಆರ್ ಕೆ 2024