Wednesday, Sep 23 2020 | Time 01:09 Hrs(IST)
Karnataka Share

ಹಾಸಿಗೆ ಹೊಲಿಯುವ ಕಾರ್ಮಿಕರಿಗೆ ಮಾಸಿಕ 10 ಸಾವಿರ ರೂ ನೀಡಿ: ಡಿ.ಕೆ. ಶಿವಕುಮಾರ್

ಬೆಂಗಳೂರು, ಆ 3 (ಯುಎನ್ಐ) ರಾಜ್ಯದಲ್ಲಿ ಕೊರೋನಾ ಸಂಕಷ್ಟಕ್ಕೆ ಸಿಲುಕಿರುವ ಹಾಸಿಗೆ ಹೊಲಿಯುವ ಸಮುದಾಯಗಳಿಗೆ ಮಾಸಿಕ 10 ಸಾವಿರ ರೂ ಪ್ರೋತ್ಸಾಹ ಧನ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪತ್ರ ಬರೆದಿದ್ದಾರೆ.
ಹಾಸಿಗೆ ಹೊಲಿಯುವ ಕಾಯಕದಲ್ಲಿ ತೊಡಗಿರುವ ಪಿಂಜಾರ, ನದಾಫ, ಮನ್ಸೂರಿ, ದೂಧೆಕುಲ್ಲಾ , ಲಾದಪ್ ಸಮಾಜದ ಮುಖಂಡರು ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿದ್ದಾರೆ. ಹಾಸಿಗೆಗಳಿಗೆ ಬೇಡಿಕೆ ಇಲ್ಲದೇ ಯಾವುದೇ ಉದ್ಯೋಗ ದೊರೆಯುತ್ತಿಲ್ಲ. ಇವರು ಸಂಕಷ್ಟಕ್ಕೆ ಸಲುಕಿದ್ದು ಸರ್ಕಾರದಿಂದ ಪ್ರೋತ್ಸಾಹಧನ ದೊರಕಿಸಿಕೊಡುವಂತೆ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದ್ದರು.
ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಡಿ.ಕೆ.ಶಿವಕುಮಾರ್, ಈ ಸಮುದಾಯಗಳಿಗೆ ಮಾಸಿಕ 10 ಸಾವಿರ ರೂ. ಪ್ರೋತ್ಸಾಹ ಧನ ನೀಡುವ ಜತೆಗೆ ಈ ಸಮುದಾಯಗಳ ಒಕ್ಕೂಟ ಆಲ್ ಇಂಡಿಯಾ ಜಮಿಯತುಲ್ ಮನ್ಸೂರ್ ಕರ್ನಾಟಕ ಸಂಘದ ಪದಾಧಿಕಾರಿಗಳನ್ನು ಭೇಟಿ ಮಾಡಿ ಅವರ ಅಹವಾಲುಗಳನ್ನು ಆಲಿಸುವಂತೆ ಮನವಿ ಮಾಡಿದ್ದಾರೆ.
ಯುಎನ್ಐ ಯುಎಲ್ 2105
More News
ರಾಜ್ಯದಲ್ಲಿ 6974 ಹೊಸ ಕೋವಿಡ್‌ ಪ್ರಕರಣಗಳ ವರದಿ; ಬೆಂಗಳೂರು ನಗರದಲ್ಲಿ ಸೋಂಕಿತರ ಸಂಖ್ಯೆ 2 ಲಕ್ಷಕ್ಕೇರಿಕೆ

ರಾಜ್ಯದಲ್ಲಿ 6974 ಹೊಸ ಕೋವಿಡ್‌ ಪ್ರಕರಣಗಳ ವರದಿ; ಬೆಂಗಳೂರು ನಗರದಲ್ಲಿ ಸೋಂಕಿತರ ಸಂಖ್ಯೆ 2 ಲಕ್ಷಕ್ಕೇರಿಕೆ

22 Sep 2020 | 10:23 PM

ಬೆಂಗಳೂರು, ಸೆ 22 (ಯುಎನ್ಐ) ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 6974 ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, 83 ಮಂದಿ ಮೃತಪಟ್ಟಿದ್ದಾರೆ.

 Sharesee more..

ಕಾಂಗ್ರೆಸ್ ವಕ್ತಾರರ ಪಟ್ಟಿ ಸಿದ್ಧತೆ

22 Sep 2020 | 9:27 PM

 Sharesee more..