Saturday, Nov 28 2020 | Time 16:00 Hrs(IST)
 • ಬಿಬಿಐಎಲ್‌: ಕೋವ್ಯಾಕ್ಸಿನ್‌ ಪ್ರಗತಿಗೆ ವಿಜ್ಞಾನಿಗಳಿಗೆ ಮೋದಿ ಅಭಿನಂದನೆ
 • ಉತ್ತರ ಪ್ರದೇಶದಲ್ಲಿ ‘ಲವ್ ಜಿಹಾದ್’ ನಿಗ್ರಹ ಸುಗ್ರೀವಾಜ್ಞೆ ಇಂದಿನಿಂದ ಜಾರಿ
 • ಇಂದು ಪುಣೆ ತಲುಪಲಿರುವ ಪ್ರಧಾನಿ ಮೋದಿ
 • ಪಾಕ್ ನಿಂದ ಕಾಂಬೋಡಿಯಾಗೆ ವಿಮಾನದಲ್ಲಿ 10 ಗಂಟೆ ಪ್ರಯಾಣಿಸಲಿರುವ ಆನೆ !
 • ಜೈಡಸ್ ಕ್ಯಾಡಿಲಾ ಪ್ರಯತ್ನಗಳಿಗೆ ಸಂಪೂರ್ಣ ಬೆಂಬಲ: ಪ್ರಧಾನಿ ಮೋದಿ
 • ಬಿ ಐ ಎಸ್ ದೃಢೀಕೃತ ಹೆಲ್ಮಟ್ ಮಾತ್ರ ಧರಿಸಬೇಕು ತಪ್ಪಿದರೆ ಶಿಕ್ಷೆ ನಿಶ್ಚಿತ !
 • ಗುರುಗ್ರಾಮದಲ್ಲಿ ಡಿ 18ಕ್ಕೆ ಬಾಕ್ಸಿಂಗ್ ಸಂಸ್ಥೆಯ ಚುನಾವಣೆ
 • ಹೈದ್ರಾಬಾದ್ ; ‘ಕೋವಾಕ್ಸಿನ್’ ಲಸಿಕೆ ಅಭಿವೃದ್ದಿ ಪರಿಶೀಲಿಸುತ್ತಿರುವ ಪ್ರಧಾನಿ ಮೋದಿ
 • ಪುಟಿದೇಳುವ ನಿರೀಕ್ಷೆಯಲ್ಲಿ ಒಡಿಶಾ, ಜಮ್ ಶೆಡ್ಪುರ
 • ಮತ್ತೆ ಮಿಂಚುವ ಬಗ್ಗೆ ಭರವಸೆ ನೀಡಿದ ರಾಬ್ಬೀ ಫ್ಲವರ್
 • ಸರಣಿ ಜೀವಂತಕ್ಕೆ ಟೀಮ್ ಇಂಡಿಯಾ ಹಂಬಲ
 • ದೇಶದಲ್ಲಿ ಕೋವಿಡ್‍-19ನ 41,322 ಹೊಸ ಪ್ರಕರಣಗಳು ವರದಿ: ಒಟ್ಟು ಸಂಖ್ಯೆ 93,51,110ಕ್ಕೆ ಏರಿಕೆ
 • ಭಾರತ-ಹವಾಮಾನ ಬದಲಾವಣೆ ಜ್ಞಾನ ಪೋರ್ಟಲ್ ಗೆ ಪ್ರಕಾಶ್ ಜಾವಡೇಕರ್ ಚಾಲನೆ
 • ಚಂಡಮಾರುತದಿಂದ ಉಂಟಾದ ಪರಿಸ್ಥಿತಿ ಕುರಿತು ತಮಿಳುನಾಡು ಮುಖ್ಯಮಂತ್ರಿಯೊಂದಿಗೆ ಪ್ರಧಾನಿ ಚರ್ಚೆ
 • ಕೋವಿಡ್ ಸೋಂಕು ನಿಯಂತ್ರಣ: ಪರಿಷ್ಕೃತ ಮಾರ್ಗ ಸೂಚಿ ಹೊರಡಿಸಿದ ರಾಜ್ಯ ಸರ್ಕಾರ
Special Share

ಹೊಸ ಭೂಕುಸಿತ, ಶ್ರೀನಗರ-ಜಮ್ಮು ರಸ್ತೆ ಸಂಚಾರ ಮತ್ತೆ ಬಂದ್

ಶ್ರೀನಗರ, ಮಾರ್ಚ್ 11 (ಯುಎನ್‌ಐ) ಹೊಸ ಭೂಕುಸಿತ , ಪ್ರತಿಕೂಲ ಹವಾಮಾನದ ಕಾರಣ 270 ಕಿ.ಮೀ ಉದ್ದದ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿ ಸಂಚಾರ ಮತ್ತೆ ಸ್ಥಗಿತವಾಗಿದೆ.
ಈ ನಡುವೆ ಲಡಾಕ್‌ನ ಕೇಂದ್ರಾಡಳಿತ ಪ್ರದೇಶವನ್ನು (ಯುಟಿ) ಕಾಶ್ಮೀರದೊಂದಿಗೆ ಸಂಪರ್ಕಿಸುವ ಬೀಕನ್ ಹೆದ್ದಾರಿಯಲ್ಲಿ ಬೃಹತ್ ಹಿಮ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಹಿಮದ ಕಾರಣ 434 ಕಿ.ಮೀ ಉದ್ದದ ಶ್ರೀನಗರ-ಲೇಹ್ ಹೆದ್ದಾರಿ ಕಳೆದ ಮೂರು ತಿಂಗಳಿನಿಂದ ಮುಚ್ಚಿದೆ. 86 ಕಿ.ಮೀ ಉದ್ದದ ಐತಿಹಾಸಿಕ ಮೊಘಲ್ ರಸ್ತೆ ಮತ್ತು ಅನಂತ್‌ನಾಗ್-ಕಿಶ್ತ್ವಾರ್ ರಸ್ತೆ ಕಳೆದ ಎರಡು ತಿಂಗಳುಗಳಿಂದ ಹಿಮದ ಕಾರಣ ಮುಚ್ಚಿದೆ.
ಸಂಚಾರ ಮತ್ತು ಎನ್‌ಎಚ್‌ಎಐ ಅಧಿಕಾರಿಗಳಿಂದ ಹಸಿರು ನಿಶಾನೆ ದೊರಕಿದ ನಂತರ ಲ್ ಬಂದ ನಂತರ ಸಂಚಾರ ಮತ್ತೆ ಪುನರಾರಂಭಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಮುಂದಿನ 48 ಗಂಟೆಗಳಲ್ಲಿ ಹೆಚ್ಚಿನ ಹಿಮ ಮತ್ತು ಮಳೆಯಾಗುವ ಮುನ್ಸೂಚನೆ ಇದೆ ಎಂದರು.
ಶ್ರೀನಗರ-ಜಮ್ಮು ಹೆದ್ದಾರಿಗೆ ಪರ್ಯಾಯ ರಸ್ತೆಯ ಮೂಲಕ ಹೋಗಲು ಇನ್ನೂ ಎರಡು ತಿಂಗಳು ಸಮಯ ಬೇಕಾಗುತ್ತದೆ. ಹಿಮದಿಂದಾಗಿ ಅನಂತ್‌ನಾಗ್-ಕಿಶ್ತ್ವಾರ್ ರಸ್ತೆ ಸಹ ಮುಚ್ಚಲ್ಪಟ್ಟಿದ್ದು ಸಂಚಾರಕ್ಕೆ ತೊಂದರೆಯಾಗಿದೆ ಎಂದೂ ಅವರು ಹೇಳಿದರು.
ಯುಎನ್ಐ ಕೆಎಸ್ಆರ್ 0837