Wednesday, Feb 26 2020 | Time 10:40 Hrs(IST)
 • 2007ರಲ್ಲಿ ತಿಲಕ್‌ ನಗರದಲ್ಲಿ ಜೋಡಿ ಕೊಲೆ: ರವಿ ಪೂಜಾರಿ ತೀವ್ರ ವಿಚಾರಣೆ
 • "ಕೇಜ್ರಿವಾಲ್‌ ಹೊರಗೆ ಬನ್ನಿ, ನಮ್ಮೊಂದಿಗೆ ಮಾತನಾಡಿ" ಘೋಷಣೆಯೊಂದಿಗೆ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ: ಪೊಲೀಸರಿಂದ ತೆರವು
 • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
 • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
 • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
 • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
 • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
 • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
 • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
 • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
 • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
 • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
 • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
 • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
 • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
National Share

ಹೊಸ ವರ್ಷದ ಆರಂಭದಲ್ಲೇ ರೈಲ್ವೆ ಪ್ರಯಾಣಿಕರಿಗೆ ದರ ಏರಿಕೆಯ ಬರೆ; ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿ

ಹೊಸ ವರ್ಷದ ಆರಂಭದಲ್ಲೇ ರೈಲ್ವೆ ಪ್ರಯಾಣಿಕರಿಗೆ ದರ ಏರಿಕೆಯ ಬರೆ; ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿ
ಹೊಸ ವರ್ಷದ ಆರಂಭದಲ್ಲೇ ರೈಲ್ವೆ ಪ್ರಯಾಣಿಕರಿಗೆ ದರ ಏರಿಕೆಯ ಬರೆ; ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿ

ನವದೆಹಲಿ, ಡಿ.31 (ಯುಎನ್ಐ) ಭಾರತೀಯ ರೈಲ್ವೆ ಇಲಾಖೆ ಪ್ರಯಾಣ ದರ ಬೆಲೆ ಏರಿಸುವ ಮೂಲಕ ಹೊಸ ವರ್ಷದ ಸಂಭ್ರಮದಲ್ಲಿರುವ ಸಾರ್ವಜನಿಕರಿಗೆ ಬೆಲೆ ಏರಿಕೆಯ ಬರೆ ಎಳೆದಿದೆ.

ಪ್ರತಿ ಕಿಲೋಮೀಟರ್‌ಗೆ ಒಂದು ಪೈಸೆಯಿಂದ ನಾಲ್ಕು ಪೈಸೆ ದರ ಹೆಚ್ಚಿಸಲಾಗಿದೆ. ಇಂದು ಜನವರಿ 1ರಿಂದಲೇ ಅನ್ವಯವಾಗಲಿದೆ.

ಸಾಮಾನ್ಯ ಎಸಿ ರಹಿತ ರೈಲುಗಳಲ್ಲಿ ದ್ವಿತೀಯ ದರ್ಜೆ ಸಾಮಾನ್ಯ, ಸ್ಲೀಪರ್ ಕ್ಲಾಸ್ ಸಾಮಾನ್ಯ, ಪ್ರಥಮ ದರ್ಜೆ ಸಾಮಾನ್ಯ ಪ್ರಯಾಣಿಕರಿಗೆ ಪ್ರತಿ ಕಿ.ಮೀ.ಗೆ ಒಂದು ಪೈಸೆ ಹೆಚ್ಚಿಸಲಾಗಿದೆ.

ಮೇಲ್ ಮತ್ತು ಎಕ್ಸ್‌ಪ್ರೆಸ್ ಎಸಿ ರಹಿತ ರೈಲುಗಳಲ್ಲಿ, ದ್ವಿತೀಯ ದರ್ಜೆ, ಸ್ಲೀಪರ್ ದರ್ಜೆ ಮತ್ತು ಪ್ರಥಮ ದರ್ಜೆಗಳಲ್ಲಿ ಪ್ರತಿ ಕಿ.ಮೀ.ಗೆ ತಲಾ ಎರಡು ಪೈಸೆ ದರ ಹೆಚ್ಚಿಸಲಾಗಿದೆ ಎಂದು ರೈಲ್ವೆ ಇಲಾಖೆಯ ಸುತ್ತೋಲೆ ತಿಳಿಸಿದೆ.

ಅದೇ ರೀತಿ, ಎಸಿ ಚೇರ್ ಕಾರ್, ಎಸಿ 3-ಟೈರ್, ಎಸಿ 2-ಟೈರ್, ಎಸಿ ಪ್ರಥಮ ದರ್ಜೆ ಪ್ರಯಾಣಿಕರಿಗೆ ಪ್ರತಿ ಕಿ.ಮೀ.ಗೆ ತಲಾ ನಾಲ್ಕು ಪೈಸೆ ದರ ಹೆಚ್ಚಾಗುತ್ತದೆ. ದರ ಹೆಚ್ಚಳವು ಜನವರಿ 1, 2020 ರಿಂದ ಜಾರಿಗೆ ಬರಲಿದೆ.

" ಈಗಾಗಲೇ ಯಾರಾದರೂ ಟಿಕೆಟ್ ಬುಕ್‌ ಮಾಡಿದ್ದರೆ 2020 ರ ಜನವರಿ 1 ರಂದು ಅಥವಾ ನಂತರ ಶುಲ್ಕದ ವ್ಯತ್ಯಾಸವನ್ನು ಸಂಗ್ರಹಿಸಲಾಗುವುದಿಲ್ಲ. ಆದಾಗ್ಯೂ, ಟಿಟಿಇ ಅಥವಾ ತಪಾಸಣೆ ಮಾಡುವ ಸಿಬ್ಬಂದಿ, ರೈಲುಗಳಲ್ಲಿ ಅಥವಾ ನಿಲ್ದಾಣಗಳಲ್ಲಿ ಜನವರಿ ಅಥವಾ ನಂತರಲ್ದಲಿ ಯಾವುದೇ ಹೊಸ ಟಿಕೆಟ್‌ಗಳನ್ನು ನೀಡಿದರೆ ಅದಕ್ಕೆ ಹೊಸ ದರ ಅನ್ವಯವಾಗಲಿದೆ ಎಂದು ಸುತ್ತೋಲೆ ತಿಳಿಸಿದೆ.

ರಾಜಧಾನಿ, ಶತಾಬ್ಡಿ, ಡುರೊಂಟೊ, ವಂದೇ ಭಾರತ್, ತೇಜಸ್, ಹಮ್ಸಫರ್, ಮಹಾಮನ, ಗೈಮಾನ್, ಆಂತ್ಯೋದಯ, ಗರಿಬ್ ರಥ್, ಜನ ಶತಾಬ್ದಿ, ರಾಜ್ಯ ರಾಣಿ, ಯುವ ಎಕ್ಸ್‌ಪ್ರೆಸ್, ಸುವಿಧಾ ಮತ್ತು ವಿಶೇಷ ರೈಲುಗಳು, ಎಸಿ ಮೆಮು (ಉಪನಗರವಲ್ಲದ) ಮತ್ತು ಎಸಿ ಡೆಮು (ಉಪನಗರವಲ್ಲದ) ರೈಲುಗಳ ದರ ಹೆಚ್ಚಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

"ಟಿಕೆಟ್ ಮೀಸಲು ಶುಲ್ಕ, ಸೂಪರ್ ಫಾಸ್ಟ್ ಹೆಚ್ಚುವರಿ ಶುಲ್ಕಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಅಂತಹ ಶುಲ್ಕಗಳು ಎಲ್ಲಿ ಅನ್ವಯವಾಗುತ್ತದೆಯೋ ಅಲ್ಲಿ ಹೆಚ್ಚುವರಿಯಾಗಿ ವಿಧಿಸಲಾಗುತ್ತದೆ ಎಂದು ಅದು ಹೇಳಿದೆ.

ರೈಲ್ವೆ ಮಂಡಳಿ ಈಗಾಗಲೇ ಹೊಸ ದರದ ಯೋಜನೆಯನ್ನು ಸಿದ್ಧಪಡಿಸಿದೆ ಮತ್ತು ಪ್ರಧಾನ ಮಂತ್ರಿ ಕಚೇರಿಯಿಂದ ಹಸಿರು ನಿಶಾನೆಯನ್ನು ಪಡೆದುಕೊಂಡಿದೆ ಎಂದು ತಿಳಿದುಬಂದಿದೆ, ಆದಾಗ್ಯೂ, ಜಾರ್ಖಂಡ್ ವಿಧಾನಸಭಾ ಚುನಾವಣೆ ಮುಗಿಯುವುದಕ್ಕಾಗಿ ಅದು ಕಾಯುತ್ತಿತ್ತು.

ಕಳೆದ ಕೆಲವು ವರ್ಷಗಳಲ್ಲಿ, ರೈಲ್ವೆ ಪ್ರಯಾಣಿಕರ ದರವನ್ನು ಹೆಚ್ಚಿಸಿರಲಿಲ್ಲ. ದರ ಹೆಚ್ಚಳದಿಂದ ರೈಲ್ವೆಯ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ.

ಈ ಪ್ರಯಾಣ ದರಗಳ ಹೆಚ್ಚಳದಿಂದ ರೈಲ್ವೆಯ ಖಜಾನೆಯಲ್ಲಿ ವಾರ್ಷಿಕವಾಗಿ 4,000-5,000 ಕೋಟಿ ರೂ. ಹೆಚ್ಚುವರಿ ಆದಾಯವನ್ನು ಬರಲಿದೆ ಎಂದು ಅಂದಾಜಿಸಲಾಗಿದೆ.

ಯುಎನ್ಐ ಎಎಚ್ 1930