Wednesday, Feb 26 2020 | Time 10:29 Hrs(IST)
 • ಕಾಶ್ಮೀರದಲ್ಲಿ ಮೂವರು ಉಗ್ರರ ಮನೆಗಳ ಮೇಲೆ ಭದ್ರತಾ ಪಡೆಯಿಂದ ದಾಳಿ
 • ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ
 • ಅಮೂಲ್ಯ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ
 • ದೆಹಲಿ ಗಲಭೆ, ಹಿಂಸಾಚಾರ ಮೃತರ ಸಂಖ್ಯೆ 17 ಕ್ಕೆ ಏರಿಕೆ
 • ದೆಹಲಿ ಹಿಂಸಾಚಾರ ಹಿನ್ನೆಲೆ: ಹಿಂಸೆಗೆ ಪ್ರಚೋದಿಸುವ ಸುದ್ದಿ ಪ್ರಸಾರ ಮಾಡದಂತೆ ಟಿವಿ ವಾಹನಿಗಳಿಗೆ ಸರ್ಕಾರ ತಾಕೀತು
 • ದೆಹಲಿ ಹಿಂಸಾಚಾರ: ಕಪಿಲ್ ಮಿಶ್ರಾ ಬಂಧನಕ್ಕೆ ಸಿಪಿಐಎಂ ಒತ್ತಾಯ
 • ಗಾಯಾಳುಗಳ ಚಿಕಿತ್ಸೆಗೆ ಭದ್ರತೆ ಒದಗಿಸಿ ಮಧ್ಯರಾತ್ರಿ ದೆಹಲಿ ಹೈಕೋರ್ಟ್ ಆದೇಶ
 • ದೆಹಲಿ ಪೊಲೀಸರ ಹಿಂದೇಟಿಗೆ ಮಂಗಳೂರು ಗಲಭೆಯಲ್ಲಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಿದ್ದೇ ಕಾರಣ: ರಾಜೀವ್ ಚಂದ್ರಶೇಖರ್
 • ಯುವತಿ ಮೇಲೆ ಶೂಟೌಟ್ ಮಾಡಿದ್ದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ
 • ಏರ್ ಇಂಡಿಯ ಖರೀದಿ ಪೈಪೋಟಿಗೆ ಅದಾನಿ ಗುಂಪು ?
 • ಇ ಪಿ ಎಫ್ ಅಡಿ ಡಿಸೆಂಬರ್ 2019 ರಲ್ಲಿ 7 8 ಲಕ್ಷ ಹೊಸ ಸೇರ್ಪಡೆ
 • ಪೂರ್ವ ಟರ್ಕಿಯಲ್ಲಿ 5 ತೀವ್ರತೆಯ ಭೂಕಂಪ
 • ಕರೋನಾ ಸೋಂಕು; ಚೈನಾದಲ್ಲಿ 2, 715ಕ್ಕೆ ಏರಿದ ಸಾವಿನ ಸಂಖ್ಯೆ, 29, 700 ಮಂದಿ ಚೇತರಿಕೆ
 • ಕೊರೋನವೈರಸ್ ಮೇಲೆ ಸ್ಯಾನ್ ಫ್ರಾನ್ಸಿಸ್ಕೋ ಮೇಯರ್ ಲಂಡನ್ ಬ್ರೀಡ್ ತುರ್ತು ಪರಿಸ್ಥಿತಿ ಘೋಷಣೆ
 • ನಾಗರಿಕರು ದೇಶದಿಂದ ಹೊರ ಹೋಗದಂತೆ ಜೆಕ್ ರಿಪಬ್ಲಿಕ್ಪ್ರಧಾನಿ ಶಿಫಾರಸು
National Share

ಹೊಸ ವರ್ಷದ ಶುಭಾಶಯ ಕೋರಿದ ಪ್ರಧಾನಿ: ಸಿಡಿಎಸ್‌ ಮಹತ್ವದ ಸುಧಾರಣೆ

ನವದೆಹಲಿ, ಜ.1 (ಯುಎನ್‌ಐ) ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ದೇಶದ ಜನರಿಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಸೇನೆಯ ವ್ಯವಹಾರಗಳ ಇಲಾಖೆ ಮತ್ತು ಸಿಡಿಎಸ್ ಹುದ್ದೆ ಸೃಷ್ಟಿಸಿರುವ ತಮ್ಮ ಸರ್ಕಾರದ ಹೊಸ ಪ್ರಯತ್ನವನ್ನು ಸ್ವಾಗತಿಸಿದ ಅವರು, ಇದು ಮಹತ್ವದ ಮತ್ತು ಸಮಗ್ರ ಸುಧಾರಣೆಯಾಗಿದೆ ಎಂದು ಬಣ್ಣಿಸಿದ್ದಾರೆ.
2020 ಅದ್ಬುತ ವರ್ಷವಾಗಲಿ ! ಎಂದು ಮೋದಿ ವರ್ಷದ ಮೊದಲ ದಿನವಾದ ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.
"ಸೇನಾ ವ್ಯವಹಾರಗಳ ಇಲಾಖೆಯನ್ನು ಅಗತ್ಯ ಮಿಲಿಟರಿ ಪರಿಣತಿಯೊಂದಿಗೆ ರಚಿಸುವುದು ಮತ್ತು ಸಿಡಿಎಸ್ ಹುದ್ದೆಯನ್ನು ಸಾಂಸ್ಥೀಕರಣಗೊಳಿಸುವುದು ಒಂದು ಮಹತ್ವದ ಮತ್ತು ಸಮಗ್ರ ಸುಧಾರಣೆಯಾಗಿದೆ" ಎಂದು ಅವರು ಹೇಳಿದರು.
ಆಧುನಿಕ ಯುದ್ಧದ ಸದಾ ಬದಲಾಗುತ್ತಿರುವ ಸವಾಲುಗಳನ್ನು ಎದುರಿಸಲು ಇದು ದೇಶಕ್ಕೆ ಸಹಾಯ ಮಾಡುತ್ತದೆ ಎಂದು ಬಣ್ಣಿಸಿದರು.
" 2019, ಆಗಸ್ಟ್ 15, ಕೆಂಪು ಕೋಟೆಯ ಮೇಲೆ ನಿಂತು, ಭಾರತವು ರಕ್ಷಣಾ ಮುಖ್ಯಸ್ಥರನ್ನು ಹೊಂದಿರಲಿದೆ ಎಂದು ನಾನು ಘೋಷಿಸಿದ್ದೆ. ಈ ಸಂಸ್ಥೆಯು ನಮ್ಮ ಮಿಲಿಟರಿ ಪಡೆಗಳನ್ನು ಆಧುನೀಕರಿಸುವ ಮಹತ್ತರವಾದ ಜವಾಬ್ದಾರಿಯನ್ನು ಹೊಂದಿದೆ. ಇದು 1.3 ಬಿಲಿಯನ್ ಭಾರತೀಯರ ಆಶಯ ಮತ್ತು ಆಕಾಂಕ್ಷೆಗಳನ್ನು ಸಹ ಪ್ರತಿಬಿಂಬಿಸುತ್ತದೆ" ಎಂದು ಅವರು ಟ್ವೀಟ್‌ನಲ್ಲಿ ಬರೆದಿದ್ದಾರೆ.
"ಮೊದಲ ಸಿಡಿಎಸ್ ಅಧಿಕಾರ ವಹಿಸಿಕೊಂಡಿದ್ದು, ಈ ಸಂದರ್ಭದಲ್ಲಿ ನಮ್ಮ ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸಿದ ಮತ್ತು ತಮ್ಮ ಪ್ರಾಣವನ್ನು ಅರ್ಪಿಸಿದ ಎಲ್ಲರಿಗೂ ನಾನು ಗೌರವ ಸಲ್ಲಿಸುತ್ತೇನೆ. ಕಾರ್ಗಿಲ್‌ನಲ್ಲಿ ಹೋರಾಡಿದ ಧೀರ ಸಿಬ್ಬಂದಿಯನ್ನು ನಾನು ನೆನಪಿಸಿಕೊಳ್ಳುತ್ತೇನೆ, ನಮ್ಮ ಸೇನೆಯಲ್ಲಿ ಹಲವು ಸುಧಾರಣೆಯ ಬಗ್ಗೆ ಅನೇಕ ಚರ್ಚೆಗಳು ನಡೆದಿದ್ದು, ಇದು ಇಂದಿನ ಐತಿಹಾಸಿಕ ಬೆಳವಣಿಗೆಗೆ ಕಾರಣವಾಯಿತು" ಎಂದು ಪ್ರಧಾನಿ ಹೇಳಿದ್ದಾರೆ.
"ನಾವು ಹೊಸ ವರ್ಷ ಮತ್ತು ಹೊಸ ದಶಕವನ್ನು ಸ್ವಾಗತಿಸುತ್ತಿರುವಾಗಲೇ ಭಾರತವು ತನ್ನ ಮೊದಲ ರಕ್ಷಣಾ ಮುಖ್ಯಸ್ಥರಾಗಿ ಜನರಲ್ ಬಿಪಿನ್ ರಾವತ್‌ ಅವರನ್ನು ಪಡೆಯುತ್ತಿರುವುದು ನನಗೆ ಖುಷಿ ತಂದಿದೆ. ನಾನು ಅವರನ್ನು ಅಭಿನಂದಿಸುತ್ತೇನೆ ಮತ್ತು ಈ ಜವಾಬ್ದಾರಿಗೆ ಅವರಿಗೆ ಶುಭ ಹಾರೈಸುತ್ತೇನೆ. ಅವರು ಭಾರತಕ್ಕೆ ಸೇವೆ ಸಲ್ಲಿಸಿದ ಅತ್ಯುತ್ತಮ ಅಧಿಕಾರಿ" ಎಂದು ಪ್ರಧಾನಿ ಸರಣಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಹೊಸ ಮಿಲಿಟರಿ ವ್ಯವಹಾರಗಳ ಇಲಾಖೆ ಮತ್ತು ಸಿಡಿಎಸ್ ಹುದ್ದೆಯ ಸೃಷ್ಟಿಯ ಬಗ್ಗೆ 1960 ರ ದಶಕದಲ್ಲಿ ಚರ್ಚೆ ಪ್ರಾರಂಭವಾಯಿತಾದರೂ ಈಗ ಕಾಲ ಕೂಡಿಬಂದಿದೆ. ಆದರೆ ಕಾರ್ಗಿಲ್ ಯುದ್ಧದ ನಂತರ ಕೆ. ಸುಬ್ರಹ್ಮಣ್ಯಂ ಸಮಿತಿಯು ಸಿಡಿಎಸ್ ರಚಿಸಲು ಶಿಫಾರಸು ಮಾಡಿದ ಬಳಿಕ ಅದು ಸೇವಾ ಕೇಂದ್ರ ಕಚೇರಿಯ ಏಕೀಕರಣದ ಜೊತೆಗೆ ವೇಗವನ್ನು ಪಡೆದುಕೊಂಡಿತು.
ಅಂದಿನ ಗೃಹ ಸಚಿವ ಎಲ್. ಕೆ. ಅಡ್ವಾಣಿ ನೇತೃತ್ವದ ಮಂತ್ರಿಗಳ ಗುಂಪು ಸುಬ್ರಹ್ಮಣ್ಯಂ ವರದಿಯನ್ನು ಪರಿಶೀಲಿಸಿದ್ದು, ಅದೇ ಸಲಹೆಯನ್ನು ಸಹ ಅನುಮೋದಿಸಿದ್ದರು.
ಯುಎನ್ಐ ಎಎಚ್ 1710