Friday, Feb 28 2020 | Time 09:04 Hrs(IST)
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ಹೊಸ ವರ್ಷ: ಏಳು ನಾಯಕರೊಂದಿಗೆ ಮೋದಿ ಮಾತುಕತೆ

ನವದೆಹಲಿ, ಜ 1 (ಯುಎನ್ಐ) ಹೊಸ ವರ್ಷದ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು, ಬಾಂಗ್ಲಾದೇಶದ ಸಹವರ್ತಿ , ಪ್ರಧಾನಿ ಶೇಖ್ ಹಸೀನಾ ಸೇರಿದಂತೆ ನೆರೆ ಹೊರೆ ದೇಶಗಳ ಏಳು ಉನ್ನತ ನಾಯಕರ ಜೊತೆ ಮಾತನಾಡಿ ಹೊಸ ವರ್ಷದ ಶುಭ ಹಾರೈಸಿದ್ದಾರೆ.
ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ ಕುರಿತು ಇತ್ತೀಚಿನ ದಿನಗಳಲ್ಲಿ ಉಭಯ ದೇಶಗಳ ನಡುವಿನ ಸಂಬಂಧದ ಮೇಲೆ ಈ ಹೇಳಿಕೆಗಳು ಮಹತ್ವ ಪಡೆದುಕೊಳ್ಳಲಿವೆ .
ಮೋದಿ, ಹೊಸ ವರ್ಷದ ಶುಭಾಶಯ ವಿನಿಮಯ ಮಾಡಿಕೊಂಡ ನೆರೆಯ ರಾಷ್ಟ್ರಗಳ ಪ್ರಮುಖ ನಾಯಕರಲ್ಲಿ ಹಸೀನಾ ಕೂಡ ಒಬ್ಬರಾಗಿದ್ದಾರೆ. ಮುಂದಿನ ಮೂರು ವರ್ಷಗಳ ಕಾಲ ಆಡಳಿತಾರೂಢ ಅವಾಮಿ ಲೀಗ್ ಪಕ್ಷದ ಅಧ್ಯಕ್ಷರಾಗಿ ಮತ್ತೆ ಆಯ್ಕೆಯಾಗಿರುವುದಕ್ಕೆ ಹಸೀನಾ ಅವರನ್ನು ಮೋದಿ ಇದೆ ಸಮಯದಲ್ಲಿ ಅಭಿನಂದಿಸಿದರು.
ಮೋದಿ '2019 ರಲ್ಲಿ ಭಾರತ - ಬಾಂಗ್ಲಾದೇಶ ಸಂಬಂಧದಲ್ಲಿ ಸಾಧಿಸಿದ ಪ್ರಗತಿಯನ್ನು ಗಮನಿಸಿದ್ದಾರೆ' ಎಂದೂ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಹಸೀನಾ ಅವರ ತಂದೆ ಮುಜೀಬುರ್ ರೆಹಮಾನ್ ಅವರ ಮುಂಬರುವ ಜನ್ಮ ಶತಮಾನ ಮತ್ತು ಬಾಂಗ್ಲಾದೇಶದ ವಿಮೋಚನೆ ಮತ್ತು ರಾಜತಾಂತ್ರಿಕ ಸಂಬಂಧಗಳ 50 ನೇ ವರ್ಷ ಭಾರತ-ಬಾಂಗ್ಲಾದೇಶ ಸಂಬಂಧಗಳ ಪ್ರಗತಿಗೆ ಪ್ರಮುಖ, ಗಟ್ಟಿಯಾದ ಮೈಲಿಗಲ್ಲಾಗಲಿದೆ ಎಂದು ಅವರು ಹೇಳಿದರು.
ಬಾಂಗ್ಲಾದೇಶದ ಮಾಜಿ ಹೈಕಮಿಷನರ್ ಸೈಯದ್ ಮುಸ್ಸಾಜ್ ಅಲಿ ಅವರ ನಿಧನಕ್ಕೂ ಪ್ರಧಾನಿ ಸಂತಾಪ ಸೂಚಿಸಿದ್ದಾರೆ.
ಭೂತಾನ್ ರಾಜ ಜಿಗ್ಮೆ ಖೇಸರ್ ನಂಗೆಲ್ ವಾಂಗ್‌ಚಕ್ ಅವರೊಂದಿಗಿನ ಅವರ ಸಂವಾದದಲ್ಲಿ, ಮೋದಿ ಕಳೆದ ವರ್ಷದ ಸಾಧನೆಗಳನ್ನು ಪ್ರಸ್ತಾಪಿಸಿ, ಯುವ ವಿನಿಮಯ ಕೇಂದ್ರಗಳನ್ನು ಹೆಚ್ಚಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ.
ನೇಪಾಳದ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರೊಂದಿಗೆ ಮಾತನಾಡಿದ ಮೋದಿ, ಹಲವಾರು ಯೋಜನೆಗಳು, ವಿಶೇಷವಾಗಿ ಮೋತಿಹಾರಿ- ಅಮ್ಲೆಖ್‌ಗುಂಜ್ ಪೆಟ್ರೋಲಿಯಂ ಉತ್ಪನ್ನಗಳ ಪೈಪ್‌ಲೈನ್ ಪೂರ್ಣಗೊಂಡ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ.
ಇದರ ನಂತರ ಶ್ರೀಲಂಕಾ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ಮತ್ತು ಪ್ರಧಾನಿ ಮಹಿಂದಾ ರಾಜಪಕ್ಸೆ ಅವರೊಂದಿಗೂ ದ್ವಿಪಕ್ಷೀಯ ವಿಚಾರ ಕುರಿತು ಮೋದಿ ಮಾತನಾಡಿದರು.
ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಅವರು ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವ ಮೂಲಕ ಮತ್ತು ಒಟ್ಟಾಗಿ ಕೆಲಸ ಮಾಡುವ ಇಚ್ಚೆ ವ್ಯಕ್ತಪಡಿಸಿದರು.
ಯುಎನ್ಐ ಜಿಎಸ್ಆರ್ 2204