Sunday, Mar 29 2020 | Time 00:34 Hrs(IST)
National Share

ಹೊಸ ಹುದ್ದೆ ಬಳಿಕ, ಹೊಸ ಇಲಾಖೆ ತೆರೆದ ಸರ್ಕಾರ

ನವದೆಹಲಿ, ಡಿ 31 (ಯುಎನ್ಐ) ಹೊಸದಾಗಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಹುದ್ದೆ ಸೃಷ್ಟಿಸಿ ಹುದ್ದೆಗೆ ಜನರಲ್ ಬಿಪಿನ್ ರಾವತ್ ಅವರನ್ನು ನೇಮಕ ಮಾಡಿರುವ ಸರ್ಕಾರ, ಇದೀಗ ಮಿಲಿಟರಿ ವ್ಯವಹಾರ ಎಂಬ ಹೊಸ ಇಲಾಖೆಯನ್ನೇ ಅವರಿಗಾಗಿ ಸೃಷ್ಟಿಸಿದೆ.
ಹೊಸ ಹುದ್ದೆಯ ಬಳಿಕ ಸರ್ಕಾರ ಹೊಸ ಇಲಾಖೆ ತೆರೆದಿದೆ. ಹೊಸ ಇಲಾಖೆಯ ಕಾರ್ಯಚೌಕಟ್ಟಿನ ಪ್ರಕಾರ, ಇದು ಭೂಸೇನೆ, ನೌಕಾಪಡೆ, ವಾಯುಪಡೆಗಳ ನಡುವೆ ಸಮನ್ವಯದ ಕಾರ್ಯ ಸಾಧನೆ ಮತ್ತು ಸೇನಾ ಪಡೆಗಳಿಗೆ ಬೇಕಾಗುವ ಖರೀದಿ, ಮದ್ದು ಗುಂಡು ಮುಂತಾದ ಅಗತ್ಯದ ಕಡೆ ಇಲಾಖೆ ಗಮನ ಹರಿಸಲಿದೆ ಎಂದೂ ಹೇಳಲಾಗಿದೆ.
ಕೇಂದ್ರ ಸರ್ಕಾರ ಸೇನೆಯ ಸುಧಾರಣಾ ಕ್ರಮಕ್ಕೆ ಮುನ್ನುಡಿ ಬರೆದಿದ್ದು, ಈ ಹೊಸ ಇಲಾಖೆ ಈ ದಿಶೆಯಲ್ಲಿ ಇಟ್ಟಿರುವ ಮೊದಲ ಹೆಜ್ಜೆ ಎಂದೂ ಬಣ್ಣಿಸಲಾಗುತ್ತಿದೆ.
ಯುಎನ್ಐ ಕೆಎಎಸ್ಆರ್ 1613
More News
ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

28 Mar 2020 | 7:17 PM

ನವದೆಹಲಿ, ಮಾ 28 (ಯುಎನ್ಐ) ಕೊರೋನಾ ವೈರಸ್ ತಡೆಯಲು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆಯಿಂದ ಬೃಹತ್ ಸಂಖ್ಯೆ ಕಾರ್ಮಿಕರುತ ತಮ್ಮ ತವರೂರಿಗೆ ತೆರಳಲಾಗದೆ ಪರದಾಡುವಂತಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

 Sharesee more..
ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ  ನೆರವು ನೀಡಿದ ಟಾಟಾ

ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ ನೆರವು ನೀಡಿದ ಟಾಟಾ

28 Mar 2020 | 7:10 PM

ನವದೆಹಲಿ, ಮಾ 28 (ಯುಎನ್ಐ) ದೇಶದ ಮುಂಚೂಣಿಯ ಉದ್ಯಮ ಸಂಸ್ಥೆ ಟಾಟಾ ಟ್ರಸ್ಟ್, ದೇಶದ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ.ನೆರವು ನೀಡುವುದಾಗಿ ಘೋಷಿಸಿದೆ.

 Sharesee more..