Sunday, Nov 28 2021 | Time 08:23 Hrs(IST)
Karnataka Share

ನಗರದಲ್ಲಿ ಮತ್ತೊಂದು ಬೆಂಕಿ ಅವಘಡ

ಬೆಂಗಳೂರು: ಅ.18 (ಯು.ಎನ್.ಐ.) ಮಹಾನಗರದಲ್ಲಿ ಇಂದು ಮನೆಯೊಂದು ಹತ್ತಿ ಉರಿದ ದುರ್ಘಟನೆ ಸಂಭವಿಸಿದೆ.

ಶಾಂತಿನಗರ ನಂಜಪ್ಪ ವೃತ್ತದ ಬಳಿ ಇರುವ ಮನೆಯಲ್ಲಿಯೇ ಬೆಂಕಿ ಹೊತ್ತಿಕೊಂಡಿದೆ. ಕ್ಷಣಾರ್ಧದಲ್ಲಿಯೇ ಇಡೀ ಮನೆಗೆ ಬೆಂಕಿ ಹರಡಿದೆ. ಮನೆಯ ನಿವಾಸಿಗಳು, ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದರಾದರೂ ಪ್ರಯೋಜನವಾಗಿಲ್ಲ. ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.

ಬೆಂಕಿ ಹೊತ್ತಿಕೊಳ್ಳಲು ಕಾರಣ ಏನೆಂಬುದು ನಿಖರವಾಗಿ ಇನ್ನೂ ತಿಳಿದು ಬಂದಿಲ್ಲ. ಅಶೋಕ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ.

UNI, KR