Monday, Sep 20 2021 | Time 06:46 Hrs(IST)
Sports Share

ಸಮಬಲ ಸಾಧಿಸಿದ ದಕ್ಷಿಣ ಆಫ್ರಿಕಾ

ಸೆಂಟ್ ಜಾರ್ಜ್, ಜೂ.28 (ಯುಎನ್ಐ)- ಸಂಘಟಿತ ಆಟದ ಪ್ರದರ್ಶನ ನೀಡಿದ ದಕ್ಷಿಣ ಆಫ್ರಿಕಾ ತಂಡ ಇಲ್ಲಿ ನಡೆದ ಎರಡನೇ ಟಿ-20 ಪಂದ್ಯವನ್ನು 16 ರನ್ ಗಳಿಂದ ಗೆದ್ದು, ವಿಂಡೀಸ್ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.

ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 166 ರನ್ ಸೇರಿಸಿತು. ವೆಸ್ಟ್ ಇಂಡೀಸ್ 20 ಓವರ್ ಗಳಲ್ಲಿ 9 ವಿಕೆಟ್ ಗೆ 150 ರನ್ ಸೇರಿಸಲಷ್ಟೇ ಶಕ್ತವಾಯಿತು.

ಆಫ್ರಿಕಾ ಪರ ಇನ್ನಿಂಗ್ಸ್ ಆರಂಭಿಸಿದ ರಿಜಾ ಹೆಂಡ್ರಿಕ್ಸ್ ಹಾಗೂ ಕ್ವಿಂಟನ್ ಡಿಕಾಕ್ ಜೋಡಿ ಮೊದಲ ವಿಕೆಟ್ ಗೆ 6.5 ಓವರ್ ಗಳಲ್ಲಿ 73 ರನ್ ಸೇರಿಸಿತು. ಹೆಂಡ್ರಿಕ್ಸ್ 42 ಹಾಗೂ ಡಿಕಾಕ್ 26 ರನ್ ಸಿಡಿಸಿದರು.

ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರರು ಜವಾಬ್ದಾರಿ ಮರೆತರು. ನಾಯಕ ತೆಂಬು ಬುವಾಮ 33 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ 46 ರನ್ ಸೇರಿಸಿ ತಂಡಕ್ಕೆ ನೆರವಾದರು. ವಿಂಡೀಸ್ ಪರ ಓಬೆಡ್ ಮೆಕಾಯ್ 3, ಕೆವಿನ್ ಸಿಂಕ್ಲೇರ್ 2 ವಿಕೆಟ್ ಕಬಳಿಸಿದರು.

ವೆಸ್ಟ್ ಇಂಡೀಸ್ ಪರ ಆಂಡ್ರೆ ಫ್ಲೆಚರ್ 35, ಫ್ಯಾಬಿಯನ್ ಅಲೆನ್ 34, ಇವಾನ್ ಲೂಯಿಸ್ 21, ಜೇಸನ್ ಹೋಲ್ಡರ್ 20 ರನ್ ಸೇರಿಸಿ ತಂಡಕ್ಕೆ ನೆರವಾದರು.

ದಕ್ಷಿಣ ಆಫ್ರಿಕಾ ಪರ ಜಾರ್ಜ್ ಲಿಂಡೆ 19 ರನ್ ನೀಡಿ ಎರಡು ವಿಕೆಟ್ ಕಬಳಿಸಿದರೆ, ಕಗಿಸೊ ರಬಾಡ 37 ರನ್ ಗೆ ಮೂರು ವಿಕೆಟ್ ಪಡೆದರು.

ಯುಎನ್ಐ ವಿಎನ್ಎಲ್ 2044