Friday, Oct 22 2021 | Time 04:52 Hrs(IST)
Special Share

ಆಗಸ್ಟ್ ನಲ್ಲಿ 18 ಕೋಟಿ ಲಸಿಕೆ ನೀಡಿಕೆ; ಸರ್ಕಾರ

ನವದೆಹಲಿ, ಸೆ 5(ಯುಎನ್‌ ಐ) - ಭಾರತದಲ್ಲಿ ಆಗಸ್ಟ್ ತಿಂಗಳಲ್ಲಿ ಒಟ್ಟು 18 ಕೋಟಿ ಕೊರೊನಾ ಲಸಿಕೆ ಡೋಸ್ ಗಳನ್ನು ಫಲಾನುಭವಿಗಳಿಗೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಭಾನುವಾರ ಹೇಳಿದೆ. ಇದು G 7 ಗುಂಪಿನ ಎಲ್ಲ ದೇಶಗಳು ನೀಡಿದ ಒಟ್ಟು ಲಸಿಕೆಗಳಿಗಿಂತ ಇದು ಹೆಚ್ಚಾಗಿದೆ. ಜಿ 7 ದೇಶಗಳು ( ಅಮೆರಿಕಾ , ಜಪಾನ್, ಕೆನಡಾ, ಫ್ರಾನ್ಸ್, ಜರ್ಮನಿ, ಯುಕೆ, ಇಟಲಿ) ಆಗಸ್ಟ್‌ನಲ್ಲಿ 10.1 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಿವೆ. ಈ ಮೂಲಕ ಭಾರತ ಮತ್ತೊಂದು ಘನತೆ ಸಾಧಿಸಿದೆ. ಆಗಸ್ಟ್‌ನಲ್ಲಿ 18 ಕೋಟಿ ಲಸಿಕೆ ಡೋಸ್‌ ನೀಡುವ ಮೂಲಕ ಭಾರತ ವಿಶ್ವ ಭೂಪಟದಲ್ಲಿ ತನ್ನ ಛಾಪು ಮೂಡಿಸಿದೆ ಎಂದು ಕೇಂದ್ರ ಸರ್ಕಾರ ತನ್ನ ಅಧಿಕೃತ ಟ್ವೀಟರ್‌ ಹ್ಯಾಂಡಲ್‌ ನಲ್ಲಿ ಟ್ವೀಟ್‌ ಮಾಡಿದೆ.
ಜಿ 7 ದೇಶಗಳಲ್ಲಿ 4 ಕೋಟಿ ಲಸಿಕೆ ನೀಡುವ ಮೂಲಕ ಜಪಾನ್‌ ಅಗ್ರಸ್ಥಾನದಲ್ಲಿದ್ದರೆ, ಕೆನಡಾ ಕೇವಲ 30 ಮಿಲಿಯನ್ ಲಸಿಕೆಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಅದೇ ಸಮಯದಲ್ಲಿ ಅಮೆರಿಕದಲ್ಲಿ ಕೇವಲ 2.3 ಕೋಟಿ ಲಸಿಕೆ ಡೋಸ್‌ ನೀಡಲಾಗಿದೆ. ಜನವರಿ 16 ರಂದು ದೇಶಾದ್ಯಂತ ಕೊರೊನಾ ಲಸಿಕೆ ಆರಂಭಗೊಂಡಿತ್ತು. ಈವರೆಗೆ ಒಟ್ಟು 68.4 ಕೋಟಿ ಲಸಿಕೆ ಡೋಸ್ ನೀಡಲಾಗಿದೆ.
ಯುಎನ್‌ ಐ ಕೆವಿಆರ್‌ 1422
More News
ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

21 Oct 2021 | 1:28 PM

ಭಾರತದ ಗಲ್ಲಿ ಗಲ್ಲಿಗಳಲ್ಲಿ ಆಡುತ್ತಿದ್ದ ಹುಡುಗ ಈಗ ಓಮನ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ. ಟಿ-20 ವಿಶ್ವಕಪ್ ನ ಅರ್ಹತಾ ಪಂದ್ಯಗಳಲ್ಲಿ ಆಡುತ್ತಿರುವ ಜತೀಂದರ್ ಸಿಂಗ್, ಓಮನ್ ತಂಡದ ಸ್ಟಾರ್ ಆಟಗಾರನಾಗಿದ್ದಾನೆ.

 Sharesee more..