Friday, Oct 22 2021 | Time 05:06 Hrs(IST)
Special Share

ಮಮತಾ ಬ್ಯಾನರ್ಜಿ ಪ್ರಧಾನಿಯಾಗಬೇಕು

ಕೋಲ್ಕತಾ, ಸೆ 20(ಯುಎನ್‌ ಐ) 2024 ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಹುದ್ದೆಗೆ ಬಿಂಬಿತವಾಗಲಿರುವ ನಾಯಕರಲ್ಲಿ ಮಮತಾ ಬ್ಯಾನರ್ಜಿ ಮುಂಚೋಣಿಯಲ್ಲಿರಲಿದ್ದಾರೆ ಎಂದು ಮೊನ್ನೆಯಷ್ಟೇ ತೃಣ ಮೂಲ ಕಾಂಗ್ರೆಸ್‌ ಸೇರ್ಪಡೆಗೊಂಡಿರುವ ಬಿಜೆಪಿ ಸಂಸದ, ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಮಹತ್ವದ ಹೇಳಿಕೆ ನೀಡಿದ್ದಾರೆ.
ದೇಶದ ಮುಂದಿನ ಪ್ರಧಾನಿ ಮಮತಾ ಬ್ಯಾನರ್ಜಿ ಅವರು ಆಗಬೇಕು ಎಂಬುದು ತಮ್ಮ ಬಯಕೆಯಾಗಿದೆ. ನಮ್ಮ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ 2024 ರಲ್ಲಿ ಪ್ರಧಾನಿ ಹುದ್ದೆಗೆ ಬಿಂಬಿತರಾಗಲಿರುವ ನಾಯಕರಲ್ಲಿ ಅಗ್ರಗಣ್ಯರಾಗಲಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷಗಳದ್ದು ಪ್ರಮುಖ ಪಾತ್ರ " ಪ್ರಧಾನಿ ಹುದ್ದೆಗೆ ಮಮತಾ ಪ್ರಮುಖ ನಾಯಕಿ ಎಂಬುದು ನಿರಾಕರಿಸಲಾಗದ ಸತ್ಯ" ಎಂದು ಸುಪ್ರಿಯೋ ಬಣ್ಣಿಸಿದ್ದಾರೆ.
ರಾಜಕೀಯದಿಂದ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದ ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಇತ್ತೀಚಿಗೆ ಟಿಎಂಸಿಗೆ ಸೇರ್ಪಡೆಗೊಂಡರು. ರಾಜಕೀಯ ತೊರೆಯುವುದಾಗಿ ಹೇಳಿದ್ದ ಅವರು, ತಾವು ಯಾವುದೇ ರಾಜಕೀಯ ಪಕ್ಷ ಸೇರುವುದಿಲ್ಲ ಎಂದು ಮೊದಲು ಹೇಳಿದ್ದರು. ಕೇಂದ್ರ ಸಂಪುಟ ಪುನರ್ರಚನೆಯ ಭಾಗವಾಗಿ ಸಚಿವ ಸ್ಥಾನದಿಂದ ಕೈಬಿಟ್ಟ ನಂತರ ಈ ಹೇಳಿಕೆ ನೀಡಿದ್ದರು ಪಕ್ಷ ಬದಲಾಯಿಸಿ ತಾನೇನು ಹೊಸ ಇತಿಹಾಸ ಸೃಷಿಸಿಲ್ಲ ಎಂದು ಹೇಳಿರುವ ಬಾಬುಲ್‌ ಶೀಘ್ರವೇ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಯುಎನ್‌ ಐ ಕೆವಿಆರ್‌ 2117
More News
ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

21 Oct 2021 | 1:28 PM

ಭಾರತದ ಗಲ್ಲಿ ಗಲ್ಲಿಗಳಲ್ಲಿ ಆಡುತ್ತಿದ್ದ ಹುಡುಗ ಈಗ ಓಮನ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ. ಟಿ-20 ವಿಶ್ವಕಪ್ ನ ಅರ್ಹತಾ ಪಂದ್ಯಗಳಲ್ಲಿ ಆಡುತ್ತಿರುವ ಜತೀಂದರ್ ಸಿಂಗ್, ಓಮನ್ ತಂಡದ ಸ್ಟಾರ್ ಆಟಗಾರನಾಗಿದ್ದಾನೆ.

 Sharesee more..