Wednesday, Oct 20 2021 | Time 14:36 Hrs(IST)
Special Share

ಮಮತಾ ಬ್ಯಾನರ್ಜಿ ಗೂಡು ಸೇರಿದ ಬಾಬುಲ್‌ ಸುಪ್ರಿಯೋ ..!

ಕೊಲ್ಕತ್ತಾ, ಸೆ 18(ಯುಎನ್‌ ಐ) - ಇತ್ತೀಚೆಗೆ ನಡೆದ ಕೇಂದ್ರ ಸಚಿವ ಸಂಪುಟ ಪುನ್ರ ರಚನೆಯಲ್ಲಿ ಸ್ಥಾನ ಕಳೆದುಕೊಂಡ ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಅವರು ಬಿಜೆಪಿಗೆ ಗುಡ್ ಬೈ ಹೇಳಿ.. ತೃಣಮೂಲ ಕಾಂಗ್ರೆಸ್ ಸೇರಿದ್ದಾರೆ. ಕೆಲವು ದಿನಗಳ ಹಿಂದೆ ಬಿಜೆಪಿಗೆ ರಾಜೀನಾಮೆ ನೀಡಿದ್ದ ಅವರು ಶನಿವಾರ ತೃಣಮೂಲ ಕಾಂಗ್ರೆಸ್‌ ಪಕ್ಷ ಸೇರಿದ್ದಾರೆ. ಬಾಬುಲ್ ಸುಪ್ರಿಯೋ ಅವರನ್ನು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ, ರಾಜ್ಯಸಭಾ ಸದಸ್ಯ ಡೆರೆಕ್ ಒಬ್ರಿಯಾನ್‌ ಪಕ್ಷಕ್ಕೆ ಬರಮಾಡಿಕೊಂಡರು.
ಕೇಂದ್ರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಸಿಗದ ಕಾರಣ ಜುಲೈ 31 ರಂದೇ ರಾಜಕೀಯ ತ್ಯಜಿಸುವುದಾಗಿ ಸಂಚಲನ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಲೋಕಸಭಾ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಪಶ್ಚಿಮ ಬಂಗಾಳದ ಬಾಬುಲ್ ಸುಪ್ರಿಯೋ ಜನಪ್ರಿಯ ಗಾಯಕ. 2014 ರ ಚುನಾವಣಾ ಸಮಯದಲ್ಲಿಬಿಜೆಪಿ ಸೇರಿ ರಾಜಕೀಯ ಪ್ರವೇಶಿಸಿದ್ದರು. ಸಾರ್ವತ್ರಿಕ ಚುನಾವಣೆಯಲ್ಲಿ ಅಸನ್‌ ಸಾಲ್‌ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರ ಮೊದಲ ಸಂಪುಟ ಸೇರಿ ನಗರಾಭಿವೃದ್ಧಿ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರು 2019 ರ ಚುನಾವಣೆಯಲ್ಲಿ ಮತ್ತೆ ಆದೇ ಕ್ಷೇತ್ರದಿಂದ ಗೆದ್ದು, ಕೇಂದ್ರ ಸಚಿವರಾಗಿ ನೇಮಕಗೊಂಡಿದ್ದರು.
ಆದರೆ, ಇತ್ತೀಚೆಗೆ ನಡೆದ ಕೇಂದ್ರ ಸಂಪುಟ ಪುನ್ರರಚನೆಯಲ್ಲಿ ಸ್ಥಾನ ಲಭಿಸದ ಕಾರಣ ಅವರು ಬಿಜೆಪಿಗೆ ವಿದಾಯ ಹೇಳಿದ್ದಾರೆ. ಇತರ ಕೆಲವು ಕಾರಣಗಳೂ ಇವೆ. ಕೆಲ ತಿಂಗಳ ಹಿಂದೆ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಾಬುಲ್ ಸುಪ್ರಿಯೋ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತು. ಅನಿರೀಕ್ಷಿತವಾಗಿ ಸುಪ್ರಿಯೋ ತೃಣಮೂಲ ಕಾಂಗ್ರೆಸ್ ಎದುರು ಸೋಲು ಅನುಭವಿಸಿದದ್ದರು. ಜೊತೆಗೆ, ರಾಜ್ಯದಲ್ಲಿ ಬಿಜೆಪಿ ನಿರೀಕ್ಷಿಸಿದ್ದ ಫಲಿತಾಂಶ ಪಡೆಯಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ ನಾಯಕತ್ವ ಕೇಂದ್ರ ಸಚಿವ ಸಂಪುಟದಿಂದ ಸುಪ್ರಿಯೋ ಅವರನ್ನು ಕೈಬಿಟ್ಟಿತ್ತು. ಇದರಿಂದ ಅವರು ತೀವ್ರ ಬೇಸರಗೊಂಡಿದ್ದರು. ಆ ಕ್ರಮವಾಗಿ ಬಿಜೆಪಿಗೆ ರಾಜೀನಾಮೆ ನೀಡಿ ತೃಣಮೂಲ ಸೇರಿದ್ದಾರೆ. ತೃಣ ಮೂಲ ಸೇರುವ ಮೂಲಕ, ರಾಜಕೀಯ ಸನ್ಯಾಸ ಪಡೆಯಲಿದ್ದಾರೆ ಎಂಬ ವದಂತಿಗಳಿಗೆ ತೆರೆಬಿದ್ದಿದೆ.
ಯುಎನ್‌ ಐ ಕೆವಿಆರ್‌ 1950