Sunday, Oct 24 2021 | Time 02:45 Hrs(IST)
Entertainment Share

ಪವರ್ ಫುಲ್ “ಓಲ್ಡ್ ಮಾಂಕ್"

ಪವರ್ ಫುಲ್ “ಓಲ್ಡ್ ಮಾಂಕ್
ಬೆಂಗಳೂರು, ಆಗಸ್ಟ್ 28(ಯುಎನ್ಐ) ನಟ ಶ್ರೀನಿ ಅಭಿನಯಿಸಿ, ನಿರ್ದೇಶಿಸಿರುವ "ಓಲ್ಡ್ ಮಾಂಕ್" ಚಿತ್ರದ ಟ್ರೇಲರ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದಾರೆ.
ಟ್ರೇಲರ್ ಬಿಡುಗಡೆ ‌ಮಾಡಿ ಮಾತನಾಡಿದ, ಪುನೀತ್ ರಾಜ್‍ಕುಮಾರ್, ಶ್ರೀನಿ‌ ಬಹಳ ದಿನಗಳಿಂದ ನನಗೆ ಪರಿಚಯ. ಅವರ ಹಿಂದಿನ ಚಿತ್ರಗಳನ್ನು ನೋಡಿದ್ದೇನೆ. ಈ ಚಿತ್ರದ ಟ್ರೇಲರ್ ಕೂಡ ಚೆನ್ನಾಗಿದೆ. ಚಿತ್ರ ಕೂಡ ಚೆನ್ನಾಗಿರುತ್ತದೆ ಎಂಬ ನಂಬಿಕೆಯಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಪವರ್ ತುಂಬಿ ಹಾರೈಸಿದರು.

ಈ ಚಿತ್ರದ ಕಥೆ ಆರಂಭವಾಗುವುದು ವೈಕುಂಠದಲ್ಲಿ. ಮಹಾವಿಷ್ಣು ಹಾಗೂ ನಾರದರ ಸಂಭಾಷಣೆ ಮೂಲಕ. ಓಲ್ಡ್ ‌ಮಾಂಕ್ ಅಂದರೆ ಹಿರಿಯ ಸನ್ಯಾಸಿ ಎಂದು ಶೀರ್ಷಿಕೆಯ ಅರ್ಥ ತಿಳಿಸಿದ ನಾಯಕ ನಿರ್ದೇಶಕ ಶ್ರೀನಿ, ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್ ಟೈನರ್ ಎಂದರು.

ಟ್ರೇಲರ್ ಬಿಡುಗಡೆ ಮಾಡಿದ ಪುನೀತ್ ರಾಜ್‍ಕುಮಾರ್ ಅವರಿಗೆ ಹಾಗೂ ಚಿತ್ರ ಉತ್ತಮವಾಗಿ ಮೂಡಿಬರಲು ಸಹಕರಿಸಿದ ಚಿತ್ರತಂಡದ ಸಮಸ್ತರಿಗೂ ಶ್ರೀನಿ ಧನ್ಯವಾದ ಅರ್ಪಿಸಿದರು.

ನಾನು ಅಭಿನಯಿಸುತ್ತಿರುವ ಚಿತ್ರಗಳ ಪೈಕಿ ಭಾರೀ ನಿರೀಕ್ಷೆಯಿಟ್ಟುಕೊಂಡಿರುವ ಚಿತ್ರ "ಓಲ್ಡ್ ಮಾಂಕ್". ಶ್ರೀನಿ ಅವರ ಕಾರ್ಯವೈಖರಿ ಅದ್ಭುತ. ಚಿತ್ರ ಗೆಲ್ಲುವುದು ಖಚಿತ ಎಂದರು ನಾಯಕಿ ಅದಿತಿ ಪ್ರಭುದೇವ.

ಹಿರಿಯ ನಟ ಕಲಾತಪಸ್ವಿ ರಾಜೇಶ್ ಅವರನ್ನು ಚಿತ್ರತಂಡ ಸನ್ಮಾನಿಸಿತು. ರಾಜೇಶ್ ಸಹ ಈ ಚಿತ್ರದಲ್ಲಿ ನಟಿಸಿದ್ದಾರೆ. ನಾನು ಎರಡುವರ್ಷದಿಂದ ಮನೆ ಅಂಗಳ ಬಿಟ್ಟು ಆಚೆ ಬಂದಿಲ್ಲ. ಶ್ರೀನಿ ಪ್ರೀತಿಯ ಒತ್ತಾಯಕ್ಕೆ ಇಲ್ಲಿಗೆ. ಬಂದಿದ್ದೀನಿ. ಚಿಕ್ಕಪಾತ್ರದಲ್ಲಿ ಅಭಿನಯಿಸಿದ್ದೇನೆ. ಚಿತ್ರ ಉತ್ತಮವಾಗಿ ಮೂಡಿಬಂದಿರಲಿದೆ ನೋಡಿ ಹರಸಿ ಎಂದರು ರಾಜೇಶ್.

ನಟ ಸುನೀಲ್ ರಾವ್, ಅತಿಥಿಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪಾತ್ರ ಚಿಕ್ಕದಾದರೂ ಎಲ್ಲರ ಮನದಲ್ಲೂ ಉಳಿಯುತ್ತದೆ. ಎಸ್ ನಾರಾಯಣ್ ಅವರ ಜೊತೆ ನಟಿಸಿದ್ದು ತುಂಬಾ ಸಂತೋಷ ತಂದಿದೆ. ಶ್ರೀನಿ ಸೇರಿದಂತೆ ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದರು.

ಪ್ರದೀಪ್ ಶರ್ಮ, ಸೃಜನ್ ಯರಬೋಳು , ಸೌರಭ್ - ವೈಭವ್ ಹಾಗೂ ಶ್ರೀನಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಭರತ್ ಪರಶುರಾಮ್ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ ಹಾಗೂ ಪ್ರಕಾಶ್ ಪುಟ್ಟಸ್ವಾಮಿ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
ಯುಎನ್ಐ ಎಸ್ಎ 0734
More News
ಹಿರಿಯ ನಟಿ ಮಿನೂ ಮುಮ್ತಾಜ್ ನಿಧನ

ಹಿರಿಯ ನಟಿ ಮಿನೂ ಮುಮ್ತಾಜ್ ನಿಧನ

23 Oct 2021 | 6:36 PM

 Sharesee more..
ಐಪಿಎಲ್ ಹೊಸ ತಂಡಕ್ಕೆ ರಣವೀರ್, ದೀಪಿಕಾ ಜೋಡಿ ಬಿಡ್!

ಐಪಿಎಲ್ ಹೊಸ ತಂಡಕ್ಕೆ ರಣವೀರ್, ದೀಪಿಕಾ ಜೋಡಿ ಬಿಡ್!

23 Oct 2021 | 3:10 PM

2022ರ ಐಪಿಎಲ್ ತಂಡ ಖರೀದಿ ಮಾಡಲು ಮತ್ತೊಂದು ಬಾಲಿವುಡ್ ಜೋಡಿ ತುದಿಗಾಲಲ್ಲಿ ನಿಂತಿದೆ. ಬಿಟೌನ್ ನ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಜೋಡಿ ಮುಂಬರುವ 2022ರ ಐಪಿಎಲ್ ಗ್ರೌಂಡ್ ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

 Sharesee more..