Thursday, Oct 28 2021 | Time 23:53 Hrs(IST)
Sports Share

ಜಯದ ಹುಡುಕಾಟದಲ್ಲಿ ಆರ್ ಸಿಬಿ

ದುಬೈ, ಸೆ.25 (ಯುಎನ್ಐ)- ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಯ ಎರಡನೇ ಚರಣದ ಪಂದ್ಯಗಳಲ್ಲಿ ಜಯದ ಹುಡಾಕಾಟದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಕಾದಾಟ ನಡೆಸಲಿವೆ.

ಬೆಂಗಳೂರು ತಂಡ ಆಡಿದ 9 ಪಂದ್ಯಗಳಿಂದ 5 ಜಯ ಸಾಧಿಸಿದ್ದು, 10 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮುಂಬೈ ಇಷ್ಟೇ ಪಂದ್ಯಗಳಲ್ಲಿ 4 ಜಯ ಸಾಧಿಸಿದ್ದು, ಆರನೇ ಸ್ಥಾನದಲ್ಲಿದೆ. ಈ ಪಂದ್ಯ ಗೆದ್ದು ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಇರಾದೆ ಉಭಯ ತಂಡಗಳದ್ದಾಗಿದೆ.

ಹಿಂದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ (256 ರನ್) ಹಾಗೂ ಕರ್ನಾಟಕದ ದೇವದತ್ ಪಡೀಕ್ಕಲ್ (287) ಸೊಗಸಾದ ಬ್ಯಾಟಿಂಗ್ ನಡೆಸಿ ತಂಡಕ್ಕೆ ನೆರವಾಗಿದ್ದರು. ಎಬಿಡಿ ವಿಲಿಯರ್ಸ್ ಹಾಗೂ ಗ್ಲೇನ್ ಮ್ಯಾಕ್ಸ್ ವೆಲ್ (244 ರನ್) ಚೆನ್ನೈ ವಿರುದ್ಧ ನಿರಾಸೆ ಅನುಭವಿಸಿದ್ದರು. ಇವರಿಬ್ಬರೂ ತಮ್ಮ ಜವಾಬ್ದಾರಿ ಅರಿತು ಆಡಬೇಕಿದೆ ಅಂದಾಗ ಮಾತ್ರ ದೊಡ್ಡ ಮೊತ್ತದ ಕನಸು ನನಸಾಗುತ್ತದೆ.

ವಿರಾಟ್ ಪಡೆಯ ಬೌಲಿಂಗ್ ವಿಭಾಗವನ್ನು ಮುನ್ನಡೆಸುವ ಮೊಹಮ್ಮದ್ ಸಿರಾಜ್, ನವದೀಪ್ ಸೈನಿ ತಮ್ಮ ಶಿಸ್ತು ಬದ್ಧ ಲೈನ್ ಹಾಗೂ ಲೆಂಥ್ ಮೂಲಕ ಎದುರಾಳಿಯನ್ನು ಕಾಡಬೇಕಿದೆ. ಹರ್ಷಲ್ ಪಟೇಲ್ ವಿಕೆಟ್ ಪಡೆದು ಮಿಂಚಬಲ್ಲ ಕ್ಷಮತೆ ಹೊಂದಿದ್ದಾರೆ. ಇನ್ನು ಯಜುವೇಂದ್ರ ಚಹಾಲ್ ಹಾಗೂ ವನಿಂದಾ ಹಸರಂಗಾ ಸ್ಪಿನ್ ಮೋಡಿ ನಡೆಸಿ ತಂಡಕ್ಕೆ ನೆರವಾಗಬೇಕಿದೆ.

ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಟೂರ್ನಿಯಲ್ಲಿ ತಮ್ಮ ಘನತೆಗೆ ತಕ್ಕ ಆಟವನ್ನು ಆಡಿಲ್ಲ. ರೋಹಿತ್ ಶರ್ಮಾ, ಕ್ವಿಂಟನ್ ಡಿಕಾಕ್ ರನ್ ಕಲೆ ಹಾಕುತ್ತಿದ್ದಾರೆ. ಆದರೆ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕೀರನ್ ಪೋಲಾರ್ಡ್ ರನ್ ಕಲೆ ಹಾಕಿ ಅಬ್ಬರಿಸಬೇಕಿದೆ.

ಮುಂಬೈ ತಂಡದಲ್ಲಿ ಸ್ಟಾರ್ ವೇಗದ ಬೌಲರ್ ಗಳಿದ್ದಾರೆ. ಜಸ್ಪ್ರೀತ್ ಬುಮ್ರಾ ಹಾಗೂ ಟ್ರೆಂಟ್ ಬೋಲ್ಟ್ ಬಿಗುವಿನ ದಾಳಿ ನಡೆಸಿ ವಿಕೆಟ್ ಕಬಳಿಸಿ ರನ್ ವೇಗಕ್ಕೆ ಕಡಿವಾಣ ಹಾಕಬಲ್ಲರು. ಇನ್ನು ಸ್ಪಿನ್ ಬೌಲರ್ ಗಳಾದ ರಾಹುಲ್ ಚಹಾರ್ ಮತ್ತು ಕೃನಾಲ್ ಪಾಂಡ್ಯ ತಮ್ಮ ನೈಜ ದಾಳಿ ನಡೆಸಬೇಕಿದೆ.

ಯುಎನ್ಐ ವಿಎನ್ಎಲ್ 1918
More News
ಟಿ-20 ವಿಶ್ವಕಪ್; ವಿರಾಟ್ ಕೊಹ್ಲಿ ಪಡೆಗೆ ಗುಡ್ ನ್ಯೂಸ್!

ಟಿ-20 ವಿಶ್ವಕಪ್; ವಿರಾಟ್ ಕೊಹ್ಲಿ ಪಡೆಗೆ ಗುಡ್ ನ್ಯೂಸ್!

28 Oct 2021 | 10:58 AM

ದುಬೈ, ಅ 28 (ಯುಎನ್ಐ) ಟೀಮ್ ಇಂಡಿಯಾ ಪಾಲಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ.

 Sharesee more..
ಟಿ-20 ವಿಶ್ವಕಪ್: ಆಸ್ಟ್ರೇಲಿಯಾ V/s ಶ್ರೀಲಂಕಾ - ಸಂಜೆ 7;30ಕ್ಕೆ ಪಂದ್ಯ

ಟಿ-20 ವಿಶ್ವಕಪ್: ಆಸ್ಟ್ರೇಲಿಯಾ V/s ಶ್ರೀಲಂಕಾ - ಸಂಜೆ 7;30ಕ್ಕೆ ಪಂದ್ಯ

28 Oct 2021 | 10:29 AM

ಟ್ವೆಂಟಿ ಟ್ವೆಂಟಿ ವಿಶ್ವಕಪ್ ನ 22ನೇ ಪಂದ್ಯ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ಮಧ್ಯೆ ಇವತ್ತು ಅತ್ಯಂತ ಮಹತ್ವದ ಪಂದ್ಯ ನಡೆಯಲಿದೆ. ಉಭಯ ತಂಡಗಳು ಸಂಜೆ 7:30ಕ್ಕೆ ದುಬೈನಲ್ಲಿ ಸೆಣಸಲಿವೆ.

 Sharesee more..

"ಓವರ್ ಸ್ಮಾರ್ಟ್ ಬೇಡ" ಲೈವ್ ಟಿವಿ ಶೋದಲ್ಲಿ ಶೋಯೆಬ್ ಅಖ್ತರ್ ಗೆ "ಗೆಟ್ ಔಟ್"!

27 Oct 2021 | 1:42 PM

ಟೀಮ್ ಇಂಡಿಯಾ ವಿರುದ್ಧ ಗೆದ್ಮೇಲೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಟಿವಿ ಶೋಗಳಲ್ಲಿ ಠಿಕಾಣಿ ಹೂಡಿದ್ದಾರೆ. ಲೈವ್ ಕಾರ್ಯಕ್ರಮಗಳಲ್ಲಿ ತಾವೇ ದೊಡ್ಡ ಸ್ಟಾರ್ ಗಳು ಅನ್ನೋ ಕೊಂಬುಗಳು ಅವರಿಗೆ ಬಂದ್ಬಿಟ್ಟಿವೆ. ಭಾರತದ ಕೊಹ್ಲಿ ಪಡೆ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.

 Sharesee more..
ಟಿ-20 ವಿಶ್ವಕಪ; ನ್ಯೂಜಿಲೆಂಡ್ ತಂಡಕ್ಕೆ ಮತ್ತೊಂದು ಶಾಕ್! ಲಾಕಿ ಫರ್ಗುಸನ್ ಔಟ್

ಟಿ-20 ವಿಶ್ವಕಪ; ನ್ಯೂಜಿಲೆಂಡ್ ತಂಡಕ್ಕೆ ಮತ್ತೊಂದು ಶಾಕ್! ಲಾಕಿ ಫರ್ಗುಸನ್ ಔಟ್

27 Oct 2021 | 12:17 PM

ನ್ಯೂಜಿಲೆಂಡ್ ಕ್ರಿಕೆಟ್ ತಂಡ ಶಾಕ್ ಮೇಲೆ ಶಾಕ್ ಗೆ ಗುರಿಯಾಗುತ್ತಿದೆ. ಮಂಗಳವಾರ ಪಾಕಿಸ್ತಾನ ವಿರುದ್ಧ ಸೋಲಿನ ನಂತರ ಈಗ ಮತ್ತೊಂದು ಸುದ್ದಿ ಕಿವೀಸ್ ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

 Sharesee more..