Sunday, Sep 26 2021 | Time 19:21 Hrs(IST)
Sports Share

ಇಟಲಿ, ಸ್ಪೇನ್ ಸೆಮಿಫೈನಲ್ಸ್ ಗೆ

ಇಟಲಿ, ಸ್ಪೇನ್ ಸೆಮಿಫೈನಲ್ಸ್ ಗೆ
ಇಟಲಿ, ಸ್ಪೇನ್ ಸೆಮಿಫೈನಲ್ಸ್ ಗೆ

ಮೊನಿಚ್, ಜು.3 (ಯುಎನ್ಐ)- ಯುರೋ ಕಪ್ ಫುಟ್ಬಾಲ್ ಟೂರ್ನಿಯ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಇಟಲಿ ಹಾಗೂ ಸ್ಪೇನ್ ತಂಡಗಳು ಭರ್ಜರಿ ಪ್ರದರ್ಶನ ನೀಡಿ ಗೆಲುವು ದಾಖಲಿಸಿದ್ದು, ಸೆಮಿಫೈನಲ್ಸ್ ಹಂತಕ್ಕೆ ಪ್ರವೇಶಿಸಿದೆ.



ಶುಕ್ರವಾರ ತಡ ರಾತ್ರಿ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಇಟಲಿ 2-1 ರಿಂದ ಬೆಲ್ಜಿಯಂ ತಂಡವನ್ನು ಮಣಿಸಿತು. ಇಟಲಿ ಪರ ನಿಕೋಲೆ ಬರೆಲ್ಲಾ (31ನೇ ನಿಮಿಷ) ಹಾಗೂ ಲೊರೆಂಜೊ ಇನ್ಸೈನ್ (44ನೇ ನಿಮಿಷ) ಗೋಲು ದಾಖಲಿಸಿ ಜಯದಲ್ಲಿ ಮಿಂಚಿದರು. ಬೆಲ್ಜಿಯಂ ಪರ ರೊಮೆಲು ಲುಕಾಕು ಮೊದಲಾವಧಿಯ ಹೆಚ್ಚುವರಿ ಸಮಯದಲ್ಲಿ ಗೋಲು ದಾಖಲಿಸಿ ಅಂತರವನ್ನು ಕಡಿಮೆ ಮಾಡಿದರು.



ಮೊದಲಾವಧಿಯಲ್ಲಿ ಉಭಯ ತಂಡಗಳು ಭರ್ಜರಿ ಆಟದ ಪ್ರದರ್ಶನ ನೀಡಿದವು. ಈ ಅವಧಿಯಲ್ಲಿ ಇಟಲಿ ಎರಡು ಗೋಲು ಬಾರಿಸಿ ಅಬ್ಬರಿಸಿತು. ಎದುರಾಳಿ ತಂಡದ ನ್ಯೂನತೆಗಳನ್ನು ಮೆಟ್ಟಿ ನಿಂತು ಆಡಿದ ಇಟಲಿ ಅಬ್ಬರಿಸಿತು. ಬೆಲ್ಜಿಯಂ ತಂಡದ ಪರ ಲುಕಾಕು ಈ ಅವಧಿಯ ಕೊನೆಯ ಕ್ಷಣದಲ್ಲಿ ಗೋಲು ದಾಖಲಿಸಿದರು.



ಎರಡನೇ ಅವಧಿಯಲ್ಲಿ ಉಭಯ ತಂಡಗಳು ಗೋಲು ಬಾರಿಸುವ ಯೋಜನೆ ಫಲಿಸಲಿಲ್ಲ. ಪರಿಣಾಮ ಬೆಲ್ಜಿಯಂ ಈ ಪಂದ್ಯದಲ್ಲಿ ಸೋಲು ಕಂಡಿತು.



ಸ್ಪೇನ್ ಗೆ ಜಯ



ಇನ್ನೊಂದು ಪಂದ್ಯದಲ್ಲಿ ಸ್ಪೇನ್, ಸ್ವಿಟ್ಜರ್ ಲ್ಯಾಂಡ್ ತಂಡವನ್ನು ಮಣಿಸಿ ಸೆಮಿಫೈನಲ್ಸ್ ಹಂತ ಕಂಡಿತು.



ಸ್ಪೇನ್ ನಗೆ ಡೆನಿಸ್ ಜಕಾರಿಯಾ ಉಡುಗೊರೆ ಗೋಲು ನೀಡಿದರು. ಪಂದ್ಯದ ಆರಂಭದ ಎಂಟನೇ ನಿಮಿಷದಲ್ಲೇ ಸ್ಪೇನ್ ತಂಡಕ್ಕೆ ಸಿಕ್ಕ ಪೆನಾಲ್ಟಿ ಅವಕಾಶದಲ್ಲಿ ಗೋಲು ಲಭಿಸಿತು. ಸ್ಪೇನ್ ಗೆ ಸ್ವೀಸ್ ಆಟಗಾರ ಉಡುಗೊರೆ ಗೋಲು ನೀಡಿದರು.



ಸ್ವಿಟ್ಜರ್ ಲ್ಯಾಂಡ್ ಪರ ಜೆರ್ಡಾನ್ ಶಕಿರಿ 68ನೇ ನಿಮಿಷದಲ್ಲಿ ಗೋಲು ದಾಖಲಿಸಿ ಮಿಂಚಿದರು. ಗೋಲು ಪೆಟ್ಟಿಗೆಯ ಎಡಭಾಗದಿಂದ ಸಹ ಆಟಗಾರ ನೀಡಿದ್ದ ಚೆಂಡನ್ನು ಶಕಿರಿ ಆಕರ್ಷಕವಾಗಿ ಗೋಲು ಬಾರಿಸಿದರು. ಕೊನೆಯ ಕ್ಷಣದವರೆಗೂ ಗೋಲು ಬಾರಿಸುವ ಅವಕಾಶ ಉಭಯ ತಂಡಗಳಿಗೆ ಲಭಿಸಲಿಲ್ಲ.



ಹೆಚ್ಚುವರಿ ಸಮಯದಲ್ಲೂ ಗೋಲು ದಾಖಲಾಗದ ಕಾರಣ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು. ಈ ಪ್ರಯತ್ನದಲ್ಲಿ ಸ್ಪೇನ್ ಮೂರು ಗೋಲು ದಾಖಲಿಸಿದರೆ, ಸ್ವೀಸ್ ಒಂದು ಗೋಲು ದಾಖಲಿಸಿ ನಿರಾಸೆ ಕಂಡಿತು.



ಯುಎನ್ಐ ವಿಎನ್ಎಲ್ 1836