Wednesday, Dec 1 2021 | Time 21:20 Hrs(IST)
International Share

ಮಧುಮಗಳ ಜೊತೆ ವೈರಲ್ ಆಗುತ್ತಿದೆ ನಾಯಿ

ಮಧುಮಗಳ ಜೊತೆ ವೈರಲ್ ಆಗುತ್ತಿದೆ ನಾಯಿ
Bride photoshoot

ಅಮೆರಿಕಾ,ಅ.22(ಯುಎನ್ಐ)ಈ‌ ಪ್ರಾಣಿಪ್ರಿಯರು ಹೇಗಿರ್ತಾರೆ?ಅದೆಷ್ಟು ರೀತಿಲ್ಲಿ ಪ್ರಾಣಿನ್ನ ಪ್ರೀತಿಸ್ತಾರೆ,ವರ್ತಿಸ್ತಾರೆ ಅಂತ ಹೇಳೋಕೆ ಆಗಲ್ಲ.ಒಬ್ಬೊಬ್ಬರದ್ದು ಒಂದೊಂಥರ ಪ್ರೀತಿ,ಭಾವ,ಅಭಿವ್ಯಕ್ತಿ.

ಇಲ್ಲೊಬ್ಬಳ ನಾಯಿ ಪ್ರೀತಿಗೆ ಅದೂ ಕೂಡ ವೈರಲ್ ಆಗ್ತಿದೆ.ಅಂದ್ಹಾಗೆ ಅಮೆರಿಕಾದಲ್ಲಿ ಮಧುಮಗಳ ಜೊತೆ ನಾಯಿಯೂ ಈಗ ಕೇಂದ್ರಬಿಂದುವಾಗಿದೆ.

ಹೀಗೆ ನಾಯಿಯೊಂದಿಗೆ ಮಹಿಳೆಯೊಬ್ಬಳು ಚಿತ್ರೀಕರಿಸಿದ ಮದುವೆಯ ಫೋಟೋಗಳು ವೈರಲ್ ಆಗಿವೆ. ಒಬ್ಬ ಅಮೇರಿಕನ್ ವಧು ತನ್ನ ಗಂಡನ ಬದಲಾಗಿ ತನ್ನ ನಾಯಿಯೊಂದಿಗೆ ಮದುವೆಯ ಚಿತ್ರೀಕರಣವನ್ನು ಮಾಡಿದ್ದಾಳೆ. ಈ ವಧುವಿನ ಮದುವೆಯ ಫೋಟೋ ಶೂಟ್ ಈ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೈರಲ್ ಆಗ್ತಿದೆ.

ನಾಯಿಯೊಂದಿಗೆ ಮಹಿಳೆಯೊಬ್ಬಳು ಚಿತ್ರೀಕರಿಸಿದ ಮದುವೆಯ ಫೋಟೋಗಳು ವೈರಲ್ ಆಗಿದ್ದು, ಅಮೆರಿಕಾದ ವಧು ತನ್ನ ಗಂಡನ ಬದಲಾಗಿ ತನ್ನ ನಾಯಿಯೊಂದಿಗೆ ವಿವಾಹದ ಚಿತ್ರೀಕರಣವನ್ನು ಮಾಡಿದ್ದಾಳೆ. ಈ ವಧುವಿನ ಮದುವೆಯ ಫೋಟೋ ಶೂಟ್ ಈ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೈರಲ್ ಆಗುತ್ತಿದೆ.

ಮದುವೆಯ ದಿನದಂದು ಮೊದಲ ನೋಟದ ಚಿತ್ರಗಳು ಯಾವಾಗಲೂ ವಿಶೇಷವಾಗಿರುತ್ತದೆ. ಸಾಮಾನ್ಯವಾಗಿ ಗಂಡ ಮತ್ತು ಹೆಂಡತಿ ತಮ್ಮ ತೋಳುಗಳಲ್ಲಿ ಅಪ್ಪಿಕೊಂಡು ಮುದ್ದಾಡಿ ಆ ಪೋಸು ಈ ಪೋಸು ಅಂತೆಲ್ಲ ಫೋಟೋಗಳನ್ನು ತೆಗೆದುಕೊಳ್ಳೋದು ಸಾಮಾನ್ಯ.ಆದರೆ ಈ ಅಮೇರಿಕನ್ ವಧು ತನ್ನ ಗಂಡನ ಬದಲಾಗಿ ತನ್ನ ನಾಯಿಯೊಂದಿಗೆ ಮದುವೆಯ ಚಿತ್ರೀಕರಣವನ್ನು ಮಾಡಿದ್ದಾಳೆ.

ಅಂದ್ಹಾಗೆ ಈ ವಧುವಿನ ಹೆಸರು.ಹನಾ ಕಿಮ್. ಇತ್ತೀಚೆಗೆ ತನ್ನ ಬಹುಕಾಲದ ಗೆಳೆಯ ಜರದ್ ಬ್ರಿಕ್‌ಮ್ಯಾನ್‌ನೊಂದಿಗೆ ಒರೆಗಾನ್‌ನ ಕ್ಯಾಂಪ್ ಕಾಲ್ಟನ್‌ನ ಕಾಡಿನಲ್ಲಿ ವಿವಾಹವಾದರು. ಬಿಳಿ ನಿಲುವಂಗಿಯನ್ನು ಧರಿಸಿದ ಕಿಮ್ ತನ್ನ ನಾಯಿಯೊಂದಿಗೆ ಪುಷ್ಪಗುಚ್ಛದೊಂದಿಗೆ ಬಂದು ತನ್ನ ಸಾಕು ನಾಯಿ ಶಗೋಲ್ಡನ್ ರಿಟ್ರೈವರ್‌ಗೆ ನೋಟ ಬೀರಿದ್ದು, ವಧುವಿನ ಈ ನೋಟ ನೋಡಿ ರಿಟ್ರೈವರ್ ಕೂಡ ಹಾಗೇ ಸಂತೋಷದಿಂದ ಹನಾಕಿಮ್‌ ಜೊತೆ ಪೋಸ್ ಕೊಟ್ಟಿದೆ.ಛಾಯಾಗ್ರಾಹಕಿ ಆಗಿರೋ ಕಿಮ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತನ್ನ ಈ ಸಾಕುಪ್ರಾಣಿ ಜೊತೆ ಮದುವೆಯ ಫೋಟೋ ಶೂಟ್‌ ಅನ್ನು ಹಂಚಿಕೊಂಡಿದ್ದಾಳೆ. 'ನನಗೆ ನನ್ನ ನಾಯಿಯೊಂದಿಗೇ ಮದುವೆಯ ಮೊದಲ ಚಿತ್ರ ಬೇಕು, ಅದು ಇಡೀ ಬದುಕಿನ ನನ್ನ ಏಕೈಕ ಬಯಕೆ"ಅಂತ ಬರ್ಕೊಂಡಿದ್ದಾಳೆ.

ವೆಡ್ಡಿಂಗ್ ಫೋಟೋಗ್ರಾಫರ್ ಸ್ಟೆಫನಿ ನಾಚ್‌ಟ್ರಾಬ್, ತನ್ನ ಕ್ಯಾಮೆರಾದಿಂದ ಈ ಕ್ಷಣವನ್ನು ಸೆರೆಹಿಡಿದು, ಅದನ್ನು 'ಅತ್ಯಂತ ಮುದ್ದಾದ ವಿಷಯ' ಎಂದಿದ್ದಾರೆ. ನಾಯಿಯ ನೋಟ ಏನೋ ಹೇಳುವಂತಿತ್ತು. ಕಿಮ್ ನನ್ನ ತಾಯಿಯನ್ನು ಮದುವೆಯಾಗಲು ತುಂಬಾ ಸಂತೋಷವಾಗಿದೆ. 2014 ರಲ್ಲಿ ನಡೆದ ಒಂದು ಘಟನೆಯ ಕಾರಣ ನಾಯಿ ನನ್ನ ವಿವಾಹದ ಅವಿಭಾಜ್ಯ ಅಂಗವಾಗಿ ಉಳಿದಿದೆ ಎಂದಿದ್ದಾಳೆ.

More News
ಅಜರ್​​​ಬೈಜಾನ್ ಮಿಲಿಟರಿ ಹೆಲಿಕಾಪ್ಟರ್ ಪತನ: 14 ಮಂದಿ ದುರ್ಮರಣ

ಅಜರ್​​​ಬೈಜಾನ್ ಮಿಲಿಟರಿ ಹೆಲಿಕಾಪ್ಟರ್ ಪತನ: 14 ಮಂದಿ ದುರ್ಮರಣ

30 Nov 2021 | 9:53 PM

ಅಜರ್‌ಬೈಜಾನ್: ನ.

 Sharesee more..
“ಅಗತ್ಯಬಿದ್ದರೆ ಓಮಿಕ್ರಾನ್‌ಗಾಗಿ 2 ತಿಂಗಳಲ್ಲಿ ಪ್ರತ್ಯೇಕ ಲಸಿಕೆ ಸಿದ್ಧಪಡಿಸುತ್ತೇವೆ” – ಮಾಡರ್ನ ಕಂಪನಿ

“ಅಗತ್ಯಬಿದ್ದರೆ ಓಮಿಕ್ರಾನ್‌ಗಾಗಿ 2 ತಿಂಗಳಲ್ಲಿ ಪ್ರತ್ಯೇಕ ಲಸಿಕೆ ಸಿದ್ಧಪಡಿಸುತ್ತೇವೆ” – ಮಾಡರ್ನ ಕಂಪನಿ

30 Nov 2021 | 10:12 AM

ಹೆಚ್ಚುತ್ತಿರುವ ಆತಂಕದ ಮಧ್ಯೆ, ಲಸಿಕೆ ಕಂಪನಿ ಮೊಡರ್ನಾ, ಒಮಿಕ್ರಾನ್‌ ಹೂಸ ರೂಪಾಂತರಿ ವಿರುದ್ಧ ಹೋರಾಡಲು ಪ್ರತ್ಯೇಕ ಲಸಿಕೆ ಅಗತ್ಯವಿದ್ದರೆ, ಅದು ಎರಡು ಮೂರು ತಿಂಗಳಲ್ಲಿ ಸಿದ್ಧಪಡಿಸಲಿದೆ ಅಂತಾ ಕಂಪನಿ ತಿಳಿಸಿದೆ.

 Sharesee more..

ಹೊಸ ಕೋವಿಡ್ ಸೊಂಕು, ಭಯ ಬೇಡ: ಜೋ ಬೈಡೆನ್

30 Nov 2021 | 8:48 AM

 Sharesee more..