Friday, Oct 22 2021 | Time 05:19 Hrs(IST)
Special Share

ಆರ್.ಎನ್ ರವಿ ತಮಿಳುನಾಡು ರಾಜ್ಯಪಾಲ

ನವದೆಹಲಿ, ಸೆ ೧೦(ಯು ಎನ್ ಐ) ತಮಿಳುನಾಡು ಮತ್ತು ಉತ್ತರಾಖಂಡ್ ರಾಜ್ಯಗಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೊಸ ರಾಜ್ಯಪಾಲರ ನೇಮಕ ಮಾಡಿದ್ದಾರೆ. ನಾಗಾಲ್ಯಾಂಡ್ ರಾಜ್ಯಪಾಲ ಆರ್.ಎನ್.ರವಿ ಅವರನ್ನು ತಮಿಳುನಾಡಿನ ರಾಜ್ಯಪಾಲರನ್ನಾಗಿ, ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್ ಅವರನ್ನು ಉತ್ತರಾಖಂಡದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ.
ತಮಿಳುನಾಡಿನ ಹೆಚ್ಚುವರಿ ರಾಜ್ಯಪಾಲರ ಹೊಣೆ ಹೊತ್ತಿರುವ ಬನ್ವರಿಲಾಲ್ ಪುರೋಹಿತ್ ಅವರಿಗೆ ಪಂಜಾಬ್ ರಾಜ್ಯದ ರಾಜ್ಯಪಾಲರ ಹೊಣೆ ವಹಿಸಲಾಗಿದೆ.
ಅಸ್ಸಾಂ ರಾಜ್ಯಪಾಲ ಪ್ರೊಫೆಸರ್ ಜಗದೀಶ್ ಮುಖಿ ಅವರಿಗೆ ನಾಗಾಲ್ಯಾಂಡ್ ರಾಜ್ಯಪಾಲರ ನೇಮಕದವರೆಗೆ ಆ ರಾಜ್ಯದ ಹೆಚ್ಚುವರಿ ಹೊಣೆ ನೀಡಲಾಗಿದೆ ಎಂದು ರಾಷ್ಟ್ರಪತಿ ಕಾರ್ಯಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಯುಎನ್ ಐ ಕೆವಿಆರ್ ೧೬೦೩
More News
ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

21 Oct 2021 | 1:28 PM

ಭಾರತದ ಗಲ್ಲಿ ಗಲ್ಲಿಗಳಲ್ಲಿ ಆಡುತ್ತಿದ್ದ ಹುಡುಗ ಈಗ ಓಮನ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ. ಟಿ-20 ವಿಶ್ವಕಪ್ ನ ಅರ್ಹತಾ ಪಂದ್ಯಗಳಲ್ಲಿ ಆಡುತ್ತಿರುವ ಜತೀಂದರ್ ಸಿಂಗ್, ಓಮನ್ ತಂಡದ ಸ್ಟಾರ್ ಆಟಗಾರನಾಗಿದ್ದಾನೆ.

 Sharesee more..