Thursday, Dec 9 2021 | Time 00:28 Hrs(IST)
Sports Share

ಐಪಿಎಲ್: ಆರ್‌ಸಿಬಿ ಪರ ಹರ್ಷಲ್ ದಾಖಲೆ

ದುಬೈ, ಸೆ.30 (ಯುಎನ್ಐ)- ರಾಯಲ್ ಚಾಲೆಂಜರ್ಸ್ ಬೆಂಗಳೂರು ವೇಗಿ ಹರ್ಷಲ್ ಪಟೇಲ್ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಹೊಸ ದಾಖಲೆ ನಿ"ಸಿದ್ದಾರೆ.

ದೇಶಿಯ ಆಟಗಾರನಾಗಿ ಐಪಿಎಲ್ ಆವೃತ್ತಿ ಒಂದರಲ್ಲಿ ಅತ್ಯಧಿಕ ವಿಕೆಟ್ ಪಡೆದ ಆಟಗಾರನಾಗಿ ಪಟೇಲ್ ದಾಖಲೆ ನಿರ್ಮಿಸಿದ್ದಾರೆ. ಬುಧವಾರ (ಸೆಪ್ಟೆಂಬರ್ 29) ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಪಟೇಲ್ ಈ ಸಾಧನೆ ಮಾಡಿದ್ದಾರೆ.

ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಈ ವರೆಗೆ ಆಡಿದ 11 ಪಂದ್ಯಗಳಲ್ಲಿ ಒಟ್ಟು 26 ವಿಕೆಟ್ ಉರುಳಿಸಿದ್ದು, ಇದೊಂದು ನೂತನ ದಾಖಲೆ ಎನಿಸದೆ.

2015ರ ಐಪಿಎಲ್‌ನಲ್ಲಿ ಯಜುವೇಂದ್ರ ಚಾಹಲ್ 15 ಪಂದ್ಯಗಳಲ್ಲಿ 23 ವಿಕೆಟ್ ಪಡೆದಿದ್ದು, ಇದು ವರೆಗಿನ ದಾಖಲೆ ಎನಿಸಿತ್ತು. ಆದರೆ ಹರ್ಷಲ್ ಪಟೇಲ್, 2021 ರ ಐಪಿಎಲ್‌ನಲ್ಲಿ ಈ ವರೆಗೆ ಆಡಿದ 11 ಪಂದ್ಯಗಳಲ್ಲಿ 26 ವಿಕೆಟ್ ಪಡೆಯುವ ಮೂಲಕ ಚಾಹಲ್ ದಾಖಲೆಯನ್ನು ಮುರಿದು ನೂತನ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.

ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಐಪಿಎಲ್ 43ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ ಆರ್‌ಸಿಬಿ ಮಧ್ಯಮ ವೇಗಿ ಮೂರು ವಿಕೆಟ್ ಪಡೆಯುವ ಮೂಲಕ ಐಪಿಎಲ್ ಆವೃತ್ತಿಯಲ್ಲಿ ಅತ್ಯಧಿಕ ವಿಕೆಟ್ ದಾಖಲೆ ನಿರ್ಮಿಸಿದ್ದಾರೆ.

ಯುಎನ್ಐ ವಿಎನ್ಎಲ್ 1955