Friday, Oct 22 2021 | Time 06:33 Hrs(IST)
Special Share

ಭದ್ರತಾ ಪಡೆ ಕಾರ್ಯಾಚರಣೆ : ಶಸ್ತ್ರಾಸ್ತ್ರ ವಶ

ಶ್ರೀನಗರ, ಸೆಪ್ಟೆಂಬರ್ 1 (ಯುಎನ್‌ಐ) ಮಧ್ಯ ಕಾಶ್ಮೀರ ಜಿಲ್ಲೆಯ ಗಂದೇರ್‌ಬಾಲ್‌ನಲ್ಲಿ ಭದ್ರತಾ ಪಡೆಗಳು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ.
ಕೇಂದ್ರ ಮೀಸಲು ಪೊಲೀಸ್ ಪಡೆಯ ಸಿಆರ್‌ಪಿಎಫ್ ವಕ್ತಾರ ಅಭಿರಾಮ್ ಈ ಕುರಿತು ಮಾಹಿತಿ ನೀಡಿದ್ದಾರೆ.
ಖಚಿತ ಸುಳಿವು ಆಧರಿಸಿ, ಸಿಆರ್ ಪಿಎಫ್, ಭದ್ರತಾ ಪಡೆ ಮತ್ತು ಪೊಲೀಸರು ಗಂದೇರ್‌ಬಾಲ್ ವ್ಯಾಪ್ತಿಯ ಸದ್ರಬಾಗ್‌ನ ಅರಣ್ಯ ಪ್ರದೇಶದಲ್ಲಿ ಬುಧಾರ ಮುಂಜಾನೆ ಶೋಧ ಕಾರ್ಯಾಚರಣೆ ಆರಂಭಿಸಿದರು.
ಕಾಡಿನಲ್ಲಿ ಸುದೀರ್ಘ ಹುಡುಕಾಟದ ನಂತರ, ಮೂರು ಹ್ಯಾಂಡ್ ಗ್ರೆನೇಡ್‌ಗಳು, ಕಾರ್ಡೆಕ್ಸ್ ವೈರ್, ಎರಡು ಎಕೆ 47 ಮ್ಯಾಗಜೀನ್‌ ಗಳು, ಜೀವಂತ ಗುಂಡುಗಳನ್ನು ಎಂದು ತಿಳಿಸಿದ್ದಾರೆ.
ಸಿಆರ್‌ಪಿಎಫ್‌ನ ಡಾಗ್ ಸ್ಕ್ವಾಡ್ ಮತ್ತು ಬಾಂಬ್ ನಿಷ್ಕ್ರಿಯ ದಳ (ಬಿಡಿಡಿ) ತಂಡವು ಶೋಧ ಕಾರ್ಯದಲ್ಲಿ ಸಂಪೂರ್ಣ ಸಹಕಾರ ನೀಡಿತು. ಶಸ್ತ್ರಾಸ್ತ್ರ ವಶಕ್ಕೆ ಸಂಬಂಧಿಸಿ ಗಂದರ್‌ಬಾಲ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ವಕ್ತಾರರು ಹೇಳಿದ್ದಾರೆ.
ಯುಎನ್ಐ ಎಸ್ಎ 1420
More News
ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

21 Oct 2021 | 1:28 PM

ಭಾರತದ ಗಲ್ಲಿ ಗಲ್ಲಿಗಳಲ್ಲಿ ಆಡುತ್ತಿದ್ದ ಹುಡುಗ ಈಗ ಓಮನ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ. ಟಿ-20 ವಿಶ್ವಕಪ್ ನ ಅರ್ಹತಾ ಪಂದ್ಯಗಳಲ್ಲಿ ಆಡುತ್ತಿರುವ ಜತೀಂದರ್ ಸಿಂಗ್, ಓಮನ್ ತಂಡದ ಸ್ಟಾರ್ ಆಟಗಾರನಾಗಿದ್ದಾನೆ.

 Sharesee more..