Thursday, Dec 9 2021 | Time 00:07 Hrs(IST)
Sports Share

ಐಪಿಎಲ್: ಕೋಲ್ಕತ್ತಾ-ಚೆನ್ನೈ ನಡುವೆ ಫೈನಲ್ ಫೈಟ್

ಐಪಿಎಲ್: ಕೋಲ್ಕತ್ತಾ-ಚೆನ್ನೈ ನಡುವೆ ಫೈನಲ್ ಫೈಟ್

ದುಬೈ, ಅ.14 (ಯುಎನ್ಐ)- ಇಯಾನ್ ಮಾರ್ಗನ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಮೂರನೇ ಬಾರಿ ಮತ್ತು ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಶುಕ್ರವಾರ ನಾಲ್ಕನೇ ಬಾರಿ ಪ್ರಶಸ್ತಿ ಗೆಲ್ಲುವ ಉದ್ದೇಶದಿಂದ ಫೈನಲ್ ನಲ್ಲಿ ಸೆಣಸಾಡಲಿದೆ.ಇದು ಚೆನ್ನೈಯ 9 ನೇ ಫೈನಲ್ ಆಗಿದ್ದು, ಕೋಲ್ಕತಾ ತಂಡವು ಮೂರನೇ ಬಾರಿಗೆ ಫೈನಲ್ ಆಡಲಿದೆ. ಎರಡೂ ತಂಡಗಳು ಲೀಗ್ ಹಂತದಲ್ಲಿ ಅಗ್ರಸ್ಥಾನದಲ್ಲಿರುವ ದೆಹಲಿ ಕ್ಯಾಪಿಟಲ್ಸ್ ಅನ್ನು ಸೋಲಿಸುವ ಮೂಲಕ ಫೈನಲ್ ಗೆ ಟಿಕೆಟ್ ಪಡೆದುಕೊಂಡಿವೆ. ಚೆನ್ನೈ ಮೊದಲ ಕ್ವಾಲಿಫೈಯರ್‌ನಲ್ಲಿ ದೆಹಲಿಯನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿದರೆ, ಬುಧವಾರ ನಡೆದ ರೋಚಕ ಹೋರಾಟದಲ್ಲಿ ಕೋಲ್ಕತ್ತಾ ದೆಹಲಿಯನ್ನು ಮೂರು ವಿಕೆಟ್‌ಗಳಿಂದ ಸೋಲಿಸಿತು. ಶುಕ್ರವಾರ ನಡೆಯಲಿರುವ ಫೈನಲ್‌ನಲ್ಲಿ ಚೆನ್ನೈ ಮತ್ತು ಕೋಲ್ಕತ್ತಾ ಮುಖಾಮುಖಿಯಾಗಲಿವೆ.ಕೋಲ್ಕತ್ತಾಗೆ ಇದು ಮೂರನೇ ಫೈನಲ್ ಆಗಿದ್ದು ತಂಡ ಹಿಂದಿನ ಎರಡೂ ಫೈನಲ್‌ಗಳನ್ನು ಗೆದ್ದು ಬೀಗಿದೆ.ಕೋಲ್ಕತ್ತಾ ನಾಯಕ ಮಾರ್ಗನ್ ಮತ್ತು ಚೆನ್ನೈ ನಾಯಕ ಧೋನಿ ಮೈದಾನದಲ್ಲಿ ಉತ್ತಮ ರಣ ತಂತ್ರ ರೂಪಿಸಬಲ್ಲರು. ಆದರೆ ಪ್ರದರ್ಶನದ ದೃಷ್ಟಿಯಿಂದ ಇಬ್ಬರು ನಾಯಕರ ನಡುವೆ ಸಾಕಷ್ಟು ವ್ಯತ್ಯಾಸವಿದೆ. ದೆಹಲಿ ವಿರುದ್ಧದ ಮೊದಲ ಕ್ವಾಲಿಫೈಯರ್‌ನಲ್ಲಿ ಧೋನಿ ಕೇವಲ ಆರು ಎಸೆತಗಳಲ್ಲಿ ಅಜೇಯ 18 ರನ್ ಗಳಿಸಿದರು ಮತ್ತು ಅವರ ತಂಡಕ್ಕೆ ಜಯವನ್ನು ನೀಡಿದರು. ಆದರೆ ಎರಡನೇ ಕ್ವಾಲಿಫೈಯರ್‌ನಲ್ಲಿ ಮೋರ್ಗನ್ ಔಟಾದರು. ಆದರೆ ರಾಹುಲ್ ತ್ರಿಪಾಠಿ ರವಿಚಂದ್ರನ್ ಅಶ್ವಿನ್‌ರ ಎಸೆತವನ್ನು ಸಿಕ್ಸರ್ ಗೆ ಎತ್ತಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು.ಎರಡೂ ತಂಡಗಳಲ್ಲಿ ಸ್ಟಾರ್ ಆಟಗಾರರು ಇದ್ದಾರೆ. ಚೆನ್ನೈ ತಂಡದ ಆರಂಭಿಕರಾಗಿ ಕಾಣಿಸಿಕೊಳ್ಳುವ ರುತುರಾಜ್ ಗಾಯಕ್ವಾಡ್ ಮತ್ತು ಫಾಫ್ ಡುಪ್ಲೇಸಿಸ್ ತಂಡಕ್ಕೆ ಭರ್ಜರಿ ಆರಂಭ ನೀಡಬೆಕಿದೆ. ಮಧ್ಯಮ ಕ್ರಮಾಂಕದಲ್ಲಿ ರಾಬಿನ್ ಉತ್ತಪ್ಪ, ಸುರೇಶ್ ರೈನಾ, ಮೋಯಿನ್ ಅಲಿ, ಧೋನಿ ಉತ್ತಮವಾಗಿ ಬ್ಯಾಟಿಂಗ್ ನಡೆಸಿ ರನ್ ಹಿಗ್ಗಿಸಬೇಕಿದೆ. ಆಲ್ ರೌಂಡರ್ ರವೀಂದ್ರ ಜಡೇಜಾ ತಮ್ಮ ಅನುಭವ ಬಳಸಿಕೊಂಡು ಆಡಬೇಕಿದೆ.ಬೌಲಿಂಗ್ ವಿಭಾಗದಲ್ಲಿ ಶಾರ್ದೂಲ್ ಠಾಕೂರ್, ದೀಪಕ್ ಚಹಾರ್, ಜೋಶ್ ಹ್ಯಾಜಲ್ ವುಡ್ ಬಿಗುವಿನ ದಾಳಿಯ ಮೂಲಕ ಕೆಕೆಆರ್ ಬ್ಯಾಟ್ಸ್ ಮನ್ ಗಳನ್ನು ಕಟ್ಟಿ ಹಾಕಬೇಕಿದೆ.ಕೆಕೆಆರ್ ತಂಡದ ಯುವ ಆಟಗಾರ ವೆಂಕಟೇಶ್ ಅಯ್ಯರ್ ಪ್ರಸಕ್ತ ಋತುವಿನಲ್ಲಿ ಮೈ ಚಳಿ ಬಿಟ್ಟು ಬ್ಯಾಟಿಂಗ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಇವರು ಶುಭಮನ್ ಗಿಲ್ ಜೊತೆಗೆ ಮತ್ತೊಮ್ಮೆ ಸಮಯೋಚಿತ ಇನ್ನಿಂಗ್ಸ್ ಕಟ್ಟಬೇಕಿದೆ. ತಂಡಕ್ಕೆ ನಿತೀಶ್ ರಾಣಾ, ರಾಹುಲ್ ತ್ರಿಪಾಠಿ ಆಧಾರವಾಗಬಲ್ಲರು. ಆದರೆ ಉಳಿದ ಆಟಗಾರರು ರನ್ ಕಲೆ ಹಾಕದೇ ಇರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಸಂಘಟಿತ ಆಟ ಮೂಡಿಬಂದರೆ ಗೆಲುವು ಸಾಧ್ಯ.

ಬೌಲಿಂಗ್ ವಿಭಾಗದಲ್ಲಿ ಶಿವಂ ಮಾವಿ ಹಾಗೂ ಲಾಕಿ ಫಾರ್ಗ್ಯೂಸನ್ ಬಿಗುವಿನ ದಾಳಿ ನಡೆಸಬಲ್ಲರು. ಇನ್ನು ಎಲಿಮಿನೇಟರ್ ಹಾಗೂ ಎರಡನೇ ಕ್ವಾಲಿಫೈಯರ್ ನಲ್ಲಿ ಮಿಂಚಿದ್ದ ವರುಣ್ ಚಕ್ರವರ್ತಿ, ಸುನಿಲ್ ನರೈನ್, ಶಕೀಬ್ ಅಲ್ ಹಸನ್ ತಮ್ಮ ಮೋಡಿಯ ದಾಳಯಿಂದ ಎದುರಾಳಿಯನ್ನು ಕಟ್ಟಿಹಾಬೇಕಿದೆ.

ಯುಎನ್ಐ ವಿಎನ್ಎಲ್ 1605