Sunday, Sep 26 2021 | Time 17:31 Hrs(IST)
Sports Share

ಬಟ್ಲರ್ ಗೆ ಗಾಯ ಲಂಕಾ ಸರಣಿಯಿಂದ ಹೊರಕ್ಕೆ

ಬಟ್ಲರ್ ಗೆ ಗಾಯ ಲಂಕಾ ಸರಣಿಯಿಂದ ಹೊರಕ್ಕೆ
ಬಟ್ಲರ್ ಗೆ ಗಾಯ ಲಂಕಾ ಸರಣಿಯಿಂದ ಹೊರಕ್ಕೆ

ಲಂಡನ್, ಜೂ.25 (ಯುಎನ್ಐ) ಗಾಯದಿಂದಾಗಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಸೀಮಿತ ಓವರ್ ಗಳ ಸರಣಿಯಿಂದ ಇಂಗ್ಲೆಂಡ್‌ನ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಹೊರಗುಳಿದಿದ್ದಾರೆ. ಬುಧವಾರ ವೇಲ್ಸ್‌ನ ಕಾರ್ಡಿಫ್‌ನಲ್ಲಿ ಶ್ರೀಲಂಕಾ ವಿರುದ್ಧದ ಮೊದಲ ಟಿ-20 ಪಂದ್ಯದ ವೇಳೆ ಅವರು ಗಾಯಗೊಂಡಿದ್ದು, ಗುರುವಾರ ಎರಡನೇ ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ.



ಮೊದಲ ಟಿ-20 ಪಂದ್ಯದಲ್ಲಿ ಇಂಗ್ಲೆಂಡ್‌ ಎಂಟು ವಿಕೆಟ್‌ಗಳ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಬಟ್ಲರ್ 68 ರನ್‌ಗಳ ಕಾಣಿಕೆ ನೀಡಿದ್ದಾರೆ. ಪಂದ್ಯದ ಬಳಿಕ ಅವರಿಗೆ ಸ್ನಾಯು ಸೆಳೆತ ಕಾಣಿಸಿಕೊಂಡಿತು. ಅವರನ್ನು ಕಾರ್ಡಿಫ್‌ನಲ್ಲಿ ಎಂಆರ್‌ಐ ಸ್ಕ್ಯಾನ್‌ಗೆ ಒಳಪಡಿಸಲಾಯಿತು. ಗಾಯದ ನಿಮಿತ್ಯ ಚೇತರಿಸಿಕೊಳ್ಳಲು ಅವರು ಮನೆಗೆ ತೆರಳಿದ್ದಾರೆ. ಶ್ರೀಲಂಕಾ ತಂಡದ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿರುವ ಇಂಗ್ಲೆಂಡ್ ಏಕದಿನ ತಂಡದಲ್ಲಿ ಡೇವಿಡ್ ಮಲಾನ್ ಅವರಿಗೆ ಸ್ಥಾನ ನೀಡಲಾಗಿದೆ.



ಪ್ರಸ್ತುತ ಮೂರು ಪಂದ್ಯಗಳ ಟಿ-20 ಸರಣಿಯನ್ನು ಇಂಗ್ಲೆಂಡ್ 2-0 ಗೋಲುಗಳಿಂದ ಗೆದ್ದಿರುವುದು ಗಮನಾರ್ಹ. ಮೂರನೇ ಮತ್ತು ಅಂತಿಮ ಟಿ 20 ಪಂದ್ಯವು ಶನಿವಾರ ಸೌತಾಂಪ್ಟನ್‌ನಲ್ಲಿ ನಡೆಯಲಿದೆ.



ಯುಎನ್ಐ ವಿಎನ್ಎಲ್ 2014