Thursday, Dec 9 2021 | Time 00:47 Hrs(IST)
Sports Share

ಐಪಿಎಲ್: ರುತುರಾಜ್ ಗೆ ಆರೆಂಜ್ ಕ್ಯಾಪ್

ಐಪಿಎಲ್: ರುತುರಾಜ್ ಗೆ ಆರೆಂಜ್ ಕ್ಯಾಪ್

ದುಬೈ, ಅ.15 (ಯುಎನ್ಐ)- ಮಹಾರಾಷ್ಟ್ರದ ಯುವ ಆಟಗಾರ ರುತುರಾಜ್ ಗಾಯಕ್ವಾಡ್ ಪ್ರಸಕ್ತ ಐಪಿಎಲ್ ಋತುವಿನಲ್ಲಿ ಮಿಂಚಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ ಯುವ ಆಟಗಾರ ಟೂರ್ನಿಯಲ್ಲಿ ಗರಿಷ್ಠ ರನ್ ಸಾಧನೆ ಮಾಡಿದ್ದಾರೆ.ಟೂರ್ನಿಯಲ್ಲಿ ಒಟ್ಟು 16 ಪಂದ್ಯಗಳಲ್ಲಿ 1 ಶತಕ ಹಾಗೂ 4 ಅರ್ಧಶತಕದ ನೆರವಿನಿಂದ ಗಾಯಕ್ವಾಡ್ ಒಟ್ಟು 635 ರನ್ ಸೇರಿಸಿದ್ದಾರೆ. ಇವರು 45.35ರ ಸರಾಸರಿಯಲ್ಲಿ ರನ್ ಕಲೆ ಹಾಕಿದರೆ, 136.26ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಫೈನಲ್ ಪಂದ್ಯಕ್ಕೂ ಮುನ್ನ ಇವರು 603 ರನ್ ಸಿಡಿಸಿದ್ದರು. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ 32 ರನ್ ಬಾರಿಸಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡರು.ಗಾಯಕ್ವಾಡ್ ಅವರಿಗೆ ಅವರದ್ದೇ ತಂಡದ ಫಾಫ್ ಡುಪ್ಲೇಸಿಸ್ ತೀವ್ರ ಪೈಪೋಟಿ ನೀಡಿದರು. ಇವರು 633 ರನ್ ಸಿಡಿಸಿದರು. ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಹುಮ್ಮಸ್ಸಿನಲ್ಲಿ ಔಟ್ ಆದರು.ಟೂರ್ನಿಯಲ್ಲಿ ಗರಿಷ್ಠ ರನ್ ಸಾಧಕರುಆಟಗಾರ ತಂಡ ರನ್ರುತುರಾಜ್ ಗಾಯಕ್ವಾಡ್ ಚೆನ್ನೈ 635ಫಾಫ್ ಡುಪ್ಲೇಸಿಸ್ ಚೆನ್ನೈ 633ಕೆ.ಎಲ್ ರಾಹುಲ್ ಪಂಜಾಬ್ 626ಶಿಖರ್ ಧವನ್ ದೆಹಲಿ 587ಗ್ಲೇನ್ ಮ್ಯಾಕ್ಸ್ ವೆಲ್ ಬೆಂಗಳೂರು 513ಯುಎನ್ಐ ವಿಎನ್ಎಲ್ 2313