Wednesday, Oct 20 2021 | Time 15:55 Hrs(IST)
Special Share

ಮತ್ರಿಗಳ ‘ಕಟೌಟ್‌’ ಪ್ರಚಾರ : ಗಡ್ಕರಿ ವಾಗ್ದಾಳಿ

ಪುಣೆ, ಸೆ. 24 (ಯುಎನ್ಐ) ತಮ್ಮ ಹುಟ್ಟುಹಬ್ಬವನ್ನು ಪ್ರಚಾರ ಮಾಡಿಕೊಂಡ ಹಾಗೂ ಹೆಸರು ಗಳಿಸಲು ತಮ್ಮದೇ ಕಟೌಟ್ ಮತ್ತು ಹೋರ್ಡಿಂಗ್‌ಗಳನ್ನು ಹಾಕಿಸಿಕೊಳ್ಳುವ ಮಂತ್ರಿಗಳ ವಿರುದ್ಧ ಕೇಂದ್ರ ಸಚಿವ ನಿತಿನ್ ಗಡ್ಕರಿ ವಾಗ್ದಾಳಿ ನಡೆಸಿದ್ದಾರೆ.

ಭಾರತೀಯ ಛತ್ರ ಸಂಸದ್‌ನ ರಾಷ್ಟ್ರೀಯ ಸಮಾವೇಶದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಗಡ್ಕರಿ, ಯಾರ ಹೆಸರನ್ನೂ ಹೇಳದೆ, ಈ 'ಶಾರ್ಟ್‌ಕಟ್‌ಗಳು' ರಾಜಕೀಯ ಜೀವನದಲ್ಲಿ ಸಹಾಯ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ನಗರಗಳು ಮತ್ತು ಪಟ್ಟಣಗಳಲ್ಲಿ ತಮ್ಮದೇ ಕಟೌಟ್‌ಗಳನ್ನು ಹಾಕಲು ರಾಜಕಾರಣಿಗಳು "ತಮ್ಮ ಜೇಬಿನಿಂದ ಏಕೆ ಖರ್ಚು ಮಾಡುತ್ತಾರೆ" ಎಂದು ಅರ್ಥವಾಗುತ್ತಿಲ್ಲ. ಕಟೌಟ್‌ಗಳನ್ನು ಹಾಕುವ ಮೂಲಕ, ಜಾಹೀರಾತುಗಳನ್ನು ಪ್ರಕಟಿಸುವ ಮೂಲಕ ನೀವು ದೊಡ್ಡ ನಾಯಕನಾಗಬಹುದು ಎಂದು ನೀವು ಭಾವಿಸುತ್ತೀರಾ? ಜಯಪ್ರಕಾಶ್ ನಾರಾಯಣ್, ಜಾರ್ಜ್ ಫೆರ್ನಾಂಡಿಸ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಈ ವಿಧಾನಗಳನ್ನು ಬಳಸಿದ್ದಾರೆಯೇ? ದಯವಿಟ್ಟು ಶಾರ್ಟ್‌ಕಟ್‌ ಮಾರ್ಗಗಳನ್ನು ಅನುಸರಿಸಬೇಡಿ ಎಂದಿದ್ದಾರೆ.

ಪ್ರಾಮಾಣಿಕತೆಯನ್ನು ಗೌರವಿಸುವ ಮತ್ತು ಅವರ ನಂಬಿಕೆಗಳಲ್ಲಿ ರಾಜಿ ಮಾಡಿಕೊಳ್ಳದ ಮಹಾನ್ ಸಾಮಾಜಿಕ ನಾಯಕರನ್ನು ಶ್ಲಾಘಿಸಿದ ಗಡ್ಕರಿ, ಪಕ್ಷಗಳನ್ನು ಬದಲಾಯಿಸುವವರು ಮತ್ತು ಮಂತ್ರಿಗಳು ಅಥವಾ ಮುಖ್ಯಮಂತ್ರಿಗಳಾಗುವವರು "ಸಾರ್ವಜನಿಕ ಸ್ಮರಣೆಯಲ್ಲಿ ದೀರ್ಘಕಾಲ ಉಳಿಯುವುದಿಲ್ಲ" ಎಂದು ತಿಳಿಸಿದ್ದಾರೆ.

ವ್ಯಕ್ತಿ ಮತ್ತು ಪಕ್ಷದ ನಡುವೆ ಪಕ್ಷವು ದೊಡ್ಡದು ಎಂದು ಗಡ್ಕರಿ ಯುವ ರಾಜಕಾರಣಿಗಳು ಮತ್ತು ನಾಯಕರಿಗೆ ಕಿವಿಮಾತು ಹೇಳಿದ್ದದಾರೆ.
ಯುಎನ್ಐ ಎಸ್ಎ 1719