Wednesday, Dec 8 2021 | Time 23:42 Hrs(IST)
Sports Share

ಅಕ್ಟೋಬರ್ 25 ರಂದು ಐಪಿಎಲ್ ಹೊಸ ತಂಡಗಳ ಘೋಷಣೆ

ನವದೆಹಲಿ, ಸೆ.29 (ಯುಎನ್ಐ)- ಎರಡು ಹೊಸ ಐಪಿಎಲ್ ತಂಡಗಳನ್ನು ಅಕ್ಟೋಬರ್ 25 ರಂದು ಘೋಷಿಸಲಾಗುವುದು ಎಂದು ಬಿಸಿಸಿಐ ಮಂಗಳವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಎರಡು ಹೊಸ ಫ್ರಾಂಚೈಸಿಗಳ ಹೆಸರನ್ನು ಅಕ್ಟೋಬರ್ 25 ರಂದು ಘೋಷಿಸಲಾಗುವುದು ಎಂದು ಐಪಿಎಲ್ ಆಡಳಿತ ಮಂಡಳಿ ಅನುಮೋದಿಸಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ. ಹರಾಜುಗೆ ಸಲ್ಲಿಸುವ ಗಡುವು ಇತ್ತೀಚೆಗೆ ಅಕ್ಟೋಬರ್ 10 ರವರೆಗೆ ವಿಸ್ತರಿಸಲ್ಪಟ್ಟಿತು. ಇದುವರೆಗೆ ಸುಮಾರು 11 ಬಿಡ್ ದಾರರು ಟೆಂಡರ್ ದಾಖಲೆ ಖರೀದಿಸಿದ್ದಾರೆ ಎಂದು ತಿಳಿದು ಬಂದಿದೆ. ಬಿಸಿಸಿಐ ಪ್ರತಿ ಹೊಸ ಫ್ರಾಂಚೈಸಿಗಳಿಗೆ ಕನಿಷ್ಠ 2000 ಕೋಟಿ ರೂ.ಗಳ (ಸುಮಾರು USD 270 ಮಿಲಿಯನ್) ಬಿಡ್ ಬೆಲೆಯನ್ನು ನಿಗದಿಪಡಿಸಿದೆ. ಅಹಮದಾಬಾದ್, ಲಕ್ನೋ, ಗುವಾಹಟಿ ಮತ್ತು ಕಟಕ್ ಸೇರಿದಂತೆ ಆರು ನಗರಗಳು ಸ್ಪರ್ಧೆಯಲ್ಲಿವೆ. ಯಾವುದೇ ಎರಡು ಯಶಸ್ವಿ ತಂಡಗಳು ಐಪಿಎಲ್ 2022 ರಲ್ಲಿ ಆಡುವ ಅವಕಾಶವನ್ನು ಪಡೆಯುತ್ತವೆ.
ಅಕ್ಟೋಬರ್ 25 ರಂದು 2023-27ರ ಐಪಿಎಲ್ ಮಾಧ್ಯಮ ಹಕ್ಕುಗಳಿಗಾಗಿ ಟೆಂಡರ್ ಕರೆಯಲು ಬಿಸಿಸಿಐ ನಿರ್ಧರಿಸಿದೆ. ಐಪಿಎಲ್ ಮಾಧ್ಯಮ ಹಕ್ಕುಗಳು ಕ್ರಿಕೆಟ್ ನಲ್ಲಿ ಅತ್ಯಂತ ಆಕರ್ಷಕ ಮತ್ತು ಪ್ರಮುಖ ಸ್ಥಾನವನ್ನು ಹೊಂದಿವೆ. 2017 ರಲ್ಲಿ, ಸ್ಟಾರ್ ಇಂಡಿಯಾ 2018–22ರ ಆವೃತ್ತಿಗಾಗಿ ಐಪಿಎಲ್ ಹಕ್ಕುಗಳನ್ನು ಗೆದ್ದಿತ್ತು.
ಯುಎನ್ಐ ವಿಎನ್ಎಲ್ 1800