Sunday, Aug 14 2022 | Time 18:15 Hrs(IST)
Sports Share

ಬರೋಡ ತಂಡದ ನಾಯಕತ್ವ ತ್ಯಜಿಸಿದ ಕೃನಾಲ್ ಪಾಂಡ್ಯ

ಭುವನೇಶ್ವರ, ನ 27(ಯುಎನ್‌ ಐ) - ಟೀಂ ಇಂಡಿಯಾ ಆಲ್ ರೌಂಡರ್, ಬರೋಡಾ ತಂಡದ ನಾಯಕ ಕೃನಾಲ್ ಪಾಂಡ್ಯ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಬರೋಡಾ ತಂಡದ ನಾಯಕತ್ವದಿಂದ ಕೆಳಗಿಳಿದಿರುವ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಈ ಸಂಬಂಧ ಕೃನಾಲ್ ಬರೋಡಾ ಕ್ರಿಕೆಟ್ ಸಂಸ್ಥೆ (ಬಿಸಿಎ) ಅಧ್ಯಕ್ಷ ಪ್ರಣಬ್ ಅಮೀನ್ ಅವರಿಗೆ ಶುಕ್ರವಾರ ಇ-ಮೇಲ್ ಕಳುಹಿಸಿದ್ದಾರೆ. ಆದರೆ, ದೇಶೀಯ ಟಿ- 20 ಟೂರ್ನಿ ಸೈಯದ್ ಮುಸ್ತಾಕ್ ಅಲಿ ಟ್ರೋಫಿ ತಂಡದ ಆಯ್ಕೆ ವೇಳೆ ಆಯ್ಕೆದಾರರ ಜತೆಗಿನ ಭಿನ್ನಾಭಿಪ್ರಾಯಗಳಿಂದಾಗಿ ಕೃನಾಲ್ ಪಾಂಡ್ಯ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಾರ ... "ಪ್ರಸ್ತುತ ದೇಶೀಯ ಋತುವಿನಲ್ಲಿ ಬರೋಡ ನಾಯಕನಾಗಿ ಮುಂದುವರಿಯುವುದಿಲ್ಲ, ಆದರೆ, ಆಯ್ಕೆಗೆ ಮಾತ್ರ ಲಭ್ಯವಿರುತ್ತೇನೆ. ತಂಡಕ್ಕಾಗಿ ಆಡಲಿದ್ದೇನೆ. ಒಬ್ಬ ಆಟಗಾರನಾಗಿ ಬರೋಡಾ ಕ್ರಿಕೆಟ್‌ಗಾಗಿ ಅತ್ಯುತ್ತಮ ಪ್ರಯತ್ನ ಮಾಡುತ್ತೇನೆ. ತಂಡದ ಹಿತಾಸಕ್ತಿಗಾಗಿ ನನ್ನ ಪ್ರಯತ್ನ ನಡೆಸಲಿದ್ದೇನೆ. ತಂಡದ ಉತ್ತಮ ಪ್ರದರ್ಶನಕ್ಕಾಗಿ ನಿರಂತರ ಶ್ರಮಿಸುತ್ತದೆ ಎಂದು ಕೃನಾಲ್ ಪಾಂಡ್ಯ ಈ- ಮೇಲ್‌ನಲ್ಲಿ ತಿಳಿಸಿದ್ದಾರೆ.
ಆದರೆ, ಇತ್ತೀಚೆಗೆ ಮುಕ್ತಾಯಗೊಂಡ ಮುಸ್ತಾಕ್ ಅಲಿ ಟ್ರೋಫಿಯಲ್ಲಿ ಕೃನಾಲ್ ಸಾರಥ್ಯದ ಬರೋಡಾ ತಂಡ ದಯನೀಯವಾಗಿ ವಿಫಲವಾಯಿತು. ಐದರಲ್ಲಿ ಕೇವಲ ಒಂದು ಪಂದ್ಯದಲ್ಲಿ ಗೆದ್ದು "ಬಿ" ಗುಂಪಿನಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿದೆ. ಇನ್ನೂ ಆಟಗಾರನಾಗಿ ಕೃನಾಲ್ ಅಷ್ಟೇನು ಪ್ರಭಾವ ಆಟ ಪ್ರದರ್ಶಿಸಲಿಲ್ಲ ಪಂದ್ಯಾವಳಿಯುದ್ದಕ್ಕೂ ಅವರು ಕೇವಲ 87 ರನ್ ಗಳಿಸಿದರು. 5.94 ಎಕಾನಮಿಯೊಂದಿಗೆ ಐದು ವಿಕೆಟ್‌ ಪಡೆದರು. ಆದರೆ, ತಂಡದ ಆಯ್ಕೆ ವಿಷಯದಲ್ಲಿ ಕೃನಾಲ್‌ ತಮ್ಮ ಆಯ್ಕೆಯ ಆಟಗಾರರಿಗೆ ಒಲವು ತೋರಿದ ಆರೋಪ ಅವರ ಮೇಲಿದೆ ಎಂದು ಬಿಸಿಎಗೆ ಆಪ್ತ ಮೂಲಗಳು ತಿಳಿಸಿವೆ.
ಈ ಅನುಕ್ರಮದಲ್ಲಿ ಆಟಗಾರರೊಬ್ಬರು ಆಯ್ಕೆದಾರರೊಂದಿಗೆ ವಾಗ್ವಾದಕ್ಕಿಳಿದರು. ಈ ಹಿನ್ನೆಲೆಯಲ್ಲಿ ಕೃನಾಲ್ ನಾಯಕತ್ವಕ್ಕೆ ವಿದಾಯ ಹೇಳಿದ್ದಾರೆ.ಅವರ ಸ್ಥಾನಕ್ಕೆ ಬಿಸಿಎ ಕೇದಾರ್ ದೇವಧರ್ ಗೆ ನಾಯಕತ್ವ ಹಸ್ತಾಂತರಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಈ ವರ್ಷ ತಮಿಳುನಾಡು ಸ್ವದೇಶಿ ಟೂರ್ನಮೆಂಟ್ ಪ್ರಶಸ್ತಿ ಗೆದ್ದಿದೆ ಫೈನಲ್‌ನಲ್ಲಿ ಕರ್ನಾಟಕವನ್ನು ಸೋಲಿಸಿ ಮೂರನೇ ಬಾರಿಗೆ ಟ್ರೋಫಿ ಗೆದ್ದಿದೆ. ಇನ್ನು ಕೃನಾಲ್ ವಿಷಯಕ್ಕೆ ಬಂದರೆ, ಟಿ-20 ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿರುವ ಈ ಮುಂಬೈ ಇಂಡಿಯನ್ಸ್ ಆಟಗಾರ ಈ ವರ್ಷದ ಮಾರ್ಚ್ ನಲ್ಲಿ ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯೊಂದಿಗೆ ಏಕದಿನ ಪಂದ್ಯಕ್ಕೆ ಎಂಟ್ರಿ ಕೊಟ್ಟಿರುವುದು ಗೊತ್ತೇ ಇದೆ.
ಯುಎನ್‌ ಐ ಕೆವಿಆರ್‌ 14.56
There is no row at position 0.