Friday, Oct 22 2021 | Time 06:34 Hrs(IST)
Special Share

ವರ್ಕ್‌ ಫ್ರಮ್‌ ಹೋಂ ಸೌಲಭ್ಯ ವಿಸ್ತರಿಸಿದ ಗೂಗಲ್ !

ಸ್ಯಾನ್ ಫ್ರಾನ್ಸಿಸ್ಕೋ, ಸೆ 1 (ಯುಎನ್‌ ಐ) ಮನೆಯಿಂದ ಕೆಲಸ (ವರ್ಕ್‌ ಫ್ರಮ್‌ ಹೋಂ) ಸೌಲಭ್ಯವನ್ನು ಮುಂದಿನ ವರ್ಷದವರೆಗೆ ವಿಸ್ತರಿಸಿರುವುದಾಗಿ ಟೆಕ್ ದೈತ್ಯ ಗೂಗಲ್ ಘೋಷಿಸಿದೆ. ಗೂಗಲ್ ಕ್ಯಾಂಪಸ್‌ ಗಳಿಗೆ ವಾಪಸ್ಸಾಗುವ ವಿಷಯದಲ್ಲಿ ಉದ್ಯೋಗಿಗಳು ಜನವರಿ 10 ರವರೆಗೆ ಸ್ವಾತಂತ್ರ ನೀಡಲಾಗುತ್ತಿದೆ ಎಂದು ಗೂಗಲ್ ಸಿಇಓ ಸುಂದರ್ ಪಿಚೈ ಪ್ರಕಟಿಸಿದ್ದಾರೆ.
ಅದೇ ರೀತಿ ಉದ್ಯೋಗಿಗಳನ್ನು ಕಚೇರಿಗಳಿಗೆ ಕರೆಸಿಕೊಳ್ಳುವ ವಿವೇಚನಾ ಆಧಿಕಾರವನ್ನು ಸ್ಥಳೀಯ ಕಚೇರಿಗಳಿಗೆ ನೀಡಿರುವುದಾಗಿ ಹೇಳಿದ್ದಾರೆ. ಪ್ರಪಂಚದಾದ್ಯಂತದ ಈಗ ಹೆಚ್ಚಿನ ಕಚೇರಿಗಳಲ್ಲಿ ಬಿಜಿನೆಸ್‌ ವೃದ್ಧಿಯಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಸಂದರ್ಭದಲ್ಲಿ, ಸ್ವಯಂಪ್ರೇರಣೆಯಿಂದ ಕ್ಯಾಂಪಸ್‌ ಗಳಿಗೆ ಬರುವ ಗೂಗಲ್ ಉದ್ಯೋಗಿಗಳನ್ನು ನಾವು ಸ್ವಾಗತಿಸುತ್ತೇವೆ. ಮುಂಬರುವ ದಿನಗಳು ನಿರೀಕ್ಷೆಗಿಂತ ಸ್ವಲ್ಪ ಭಿನ್ನವಾಗಿರುವ ಅವಕಾಶಗಳಿದ್ದರೂ... ಮುಂಬರುವ ಸವಾಲುಗಳನ್ನು ಒಟ್ಟಾಗಿ ಎದುರಿಸುವ ಸಾಮರ್ಥ್ಯ ಗೂಗಲ್‌ ಹೊಂದಿದೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
ಕಚೇರಿಗಳಿಗೆ ಬರುವಂತೆ ಕನಿಷ್ಠ ಒಂದು ತಿಂಗಳ ಮುಂಚಿತವಾಗಿ ಮಾಹಿತಿ ನೀಡಲಾಗುವುದು ಎಂದು ಪಿಚೈ ಉದ್ಯೋಗಿಗಳಿಗೆ ಭರವಸೆ ನೀಡಿದ್ದಾರೆ. ವಿಶ್ರಾಂತಿ ಪಡೆಯಲು ಡಿಸೆಂಬರ್ , ಅಕ್ಟೋಬರ್‌ ತಿಂಗಳಲ್ಲಿ ಹೆಚ್ಚುವರಿ ಒಂದು ದಿನ ರಜೆ ಪಡೆಯುವ ಅವಕಾಶ ಕಲ್ಪಿಸಿದ್ದಾರೆ. ಡೆಲ್ಟಾ ರೂಪಾಂತರಿ ಮತ್ತೊಮ್ಮೆ ಪ್ರಪಂಚದಾದ್ಯಂತ ಹರಡುತ್ತಿರುವ ಹಿನ್ನೆಲೆಯಲ್ಲಿ, ಅನೇಕ ಸಂಸ್ಥೆ ಗಳು ವರ್ಕ್- ಫ್ರಂ ಹೋಂ ಸೌಲಭ್ಯ ವಿಸ್ತರಿಸುತ್ತಿವೆ. ಫೇಸ್ ಬುಕ್ ಈಗಾಗಲೇ ಈ ಸಂಬಂಧ ನಿರ್ಧಾರ ಕೈಗೊಂಡಿದೆ. ಈಗ ಗೂಗಲ್ ಕೂಡ ಅದೇ ಹಾದಿಯನ್ನು ಅನುಸರಿಸಿದೆ.
ಯುಎನ್‌ ಐ ಕೆವಿಆರ್‌ 1556
More News
ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

21 Oct 2021 | 1:28 PM

ಭಾರತದ ಗಲ್ಲಿ ಗಲ್ಲಿಗಳಲ್ಲಿ ಆಡುತ್ತಿದ್ದ ಹುಡುಗ ಈಗ ಓಮನ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ. ಟಿ-20 ವಿಶ್ವಕಪ್ ನ ಅರ್ಹತಾ ಪಂದ್ಯಗಳಲ್ಲಿ ಆಡುತ್ತಿರುವ ಜತೀಂದರ್ ಸಿಂಗ್, ಓಮನ್ ತಂಡದ ಸ್ಟಾರ್ ಆಟಗಾರನಾಗಿದ್ದಾನೆ.

 Sharesee more..