Monday, Sep 20 2021 | Time 06:37 Hrs(IST)
Sports Share

ಅರ್ಜುನ್ ಪ್ರಶಸ್ತಿಗೆ ಸಜನ್ ಹೆಸರು ಶಿಫಾರಸ್ಸು

ನವದೆಹಲಿ, ಜು.3 (ಯುಎನ್ಐ)- ಈಜುಗಾರ ಸಜನ್ ಪ್ರಕಾಶ್ ಅವರನ್ನು ಸತತ ಎರಡನೇ ವರ್ಷ ಅರ್ಜುನ ಪ್ರಶಸ್ತಿಗೆ ಶಿಫಾರಸ್ಸು ಮಾಡಿದೆ ಎಂದು ಈಜು ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಹೆಸರಿಸಿದೆ. ಇದಕ್ಕೂ ಮುನ್ನ ಜೂನ್‌ನಲ್ಲಿ ಎಸ್‌ಎಫ್‌ಐ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ 2021 ಕ್ಕೆ ವಿವಿಧ ವಿಭಾಗಗಳ ಅಡಿಯಲ್ಲಿ ನಾಮಪತ್ರಗಳನ್ನು ಕಳುಹಿಸಿತ್ತು.

ಒಲಿಂಪಿಕ್ ಎ ಅರ್ಹತಾ ಸಮಯವನ್ನು ಪೂರ್ಣಗೊಳಿಸಿದ ಹಿರಿಮೆ ಹೊಂದಿರುವ ಸಜನ್ ಅವರು ದೇಶದ ಬಹು ವರ್ಷಗಳ ಆಸೆಯನ್ನು ಈಡೆರಿಸಿದ್ದಾರೆ.

ಕಮಲೇಶ್ ನಾನಾವತಿಯ ಹೆಸರನ್ನು ಸಹ ಧ್ಯಾನ್ ಚಂದ್ ಪ್ರಶಸ್ತಿಗೆ ಎಸ್‌ಎಫ್‌ಐ ಶಿಫಾರಸು ಮಾಡಿದೆ. ಜಲ ಕ್ರೀಡೆಗಳಲ್ಲಿ ಅವರ ಜೀವಮಾನದ ಸಾಧನೆಗಳಿಗಾಗಿ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ. ಅವರು ಹಲವಾರು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತವನ್ನು ವಾಟರ್ ಪೋಲೊದಲ್ಲಿ ಪ್ರತಿನಿಧಿಸಿದ್ದಾರೆ. ಮತ್ತು ನಂತರ ನಾಲ್ಕು ದಶಕಗಳ ಕಾಲ ಈಜು ತರಬೇತುದಾರರಾಗಿ ಮಿಂಚಿದ್ದಾರೆ.

ಎಸ್‌ಎಫ್‌ಐ ಪ್ರಧಾನ ಕಾರ್ಯದರ್ಶಿ ಮೋನಾಲ್ ಚೋಕ್ಸಿ ಹೇಳಿಕೆಯಲ್ಲಿ, “ಸಜನ್ ಪ್ರಕಾಶ್ 200 ಮೀಟರ್ ಬಟರ್ ಫ್ಲೈ ಸ್ಪರ್ಧೆಯಲ್ಲಿ ಟೋಕಿಯೊ 2020 ಕ್ಕೆ ಅರ್ಹತೆ ಪಡೆಯುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಮತ್ತು ಭಾರತೀಯ ಈಜು ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ಸಾಧನೆಯು ಇನ್ನೂ ಅನೇಕ ಈಜುಗಾರರಿಗೆ ಪ್ರೇರಣೆ. ಈ ಸಾಧನೆಯು ಅರ್ಜುನ ಪ್ರಶಸ್ತಿಗೆ ಸಜನ್ ಪ್ರಕಾಶ್ ಅವರನ್ನು ನಾಮನಿರ್ದೇಶನ ಮಾಡುವ ನಮ್ಮ ನಿರ್ಧಾರವನ್ನು ಸಮರ್ಥಿಸುತ್ತದೆ ಎಂಬ ವಿಶ್ವಾಸವಿದೆ. "

ಎಸ್‌ಎಫ್‌ಐ ಅಧ್ಯಕ್ಷ ಆರ್.ಎನ್.ಜಯಪ್ರಕಾಶ್, “ಕಮಲೇಶ್ ನಾನವತಿ ಅವರು ವೃತ್ತಿಜೀವನದ ಹಲವು ಮಜಲುಗಳಲ್ಲಿ ಶ್ರಮಿಸಿದ್ದಾರೆ.

ಹಲವು ಪ್ಯಾರಾ ಸೇರಿದಂತೆ ಅನೇಕ ಈಜುಗಾರರನ್ನು ಬೆಳಕಿಗೆ ತಂದ ಖ್ಯಾತ ಕೋಚ್ ತಪನ್ ಪಾನಿಗ್ರಾಹಿ ದ್ರೋಣಾಚಾರ್ಯ ಪ್ರಶಸ್ತಿಗೆ (ಜೀವಮಾನ ಸಾಧನೆ) ನಾಮನಿರ್ದೇಶನ ಮಾಡಲಾಗಿದೆ.
ಯುಎನ್ಐ ವಿಎನ್ಎಲ್ 2213