Wednesday, Dec 1 2021 | Time 21:01 Hrs(IST)
Karnataka Share

ಪರಿಶಿಷ್ಟ ಸಮುದಾಯದವರಷ್ಟೇ ಪಾಯಖಾನ ತೊಳೆಯಬೇಕೇ?

ಪರಿಶಿಷ್ಟ ಸಮುದಾಯದವರಷ್ಟೇ ಪಾಯಖಾನ ತೊಳೆಯಬೇಕೇ?
PRASANNANADPURI SWAMIJI

ಬೆಂಗಳೂರು,ಅ.20(ಯುಎನ್‌ಐ)ಪರಿಶಿಷ್ಟ ಸಮುದಾಯದವರಷ್ಟೇ ಪಾಯಖಾನ ತೊಳೆಯಬೇಕೇ ಎಂದು ವಾಲ್ಮೀಕಿ ಸಮುದಾಯದ

ಪ್ರಸನ್ನಾನಂದಪುರಿ ಸ್ವಾಮೀಜಿ ಪ್ರಶ್ನಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ವಾಲ್ಮೀಕಿ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸ್ವಾಮೀಜಿ,ಎಸ್ಸಿಎಸ್ಟಿಯವರಷ್ಟೇ ಪಾಯಖಾನೆ ತೊಳೆಯಬೇಕೇ?ಮೇಲ್ವರ್ಗ ಸಮುದಾಯವೇನು ಇದರಿಂದ ಹೊರತೇ?ಪಾಯಿಖಾನೆ ತೊಳೆಯುವುದನ್ನೂ ಕೆಲಸವೆಂದು ಪರಿಗಣಿಸಬೇಕು.ಮೇಲ್ವರ್ಗದವರು ಇದನ್ನೂ ಕೆಲಸವೆಂದರಿಯಬೇಕು.ಹಾಗಾದಾಗ ಮಾತ್ರ ಶೋಷಣೆ ನಿಲ್ಲುತ್ತದೆ ಎಂದು ಸ್ವಾಮೀಜಿ ಹೇಳಿದರು.

30ವರ್ಷದಿಂದ ಪರಿಶಿಷ್ಟರ ಮಕ್ಕಳು ಶಿಕ್ಷಣದಿಂದ ಹೊರಗುಳಿಯುತ್ತಿದ್ದಾರೆ.ಹಿಂದಿನ ಸರ್ಕಾರ ಎಸ್ಸಿಪಿಟಿಎಸ್ಪಿ ಜಾರಿಗೆ ತಂದಿತು.ಈಗ ವಾಲ್ಮೀಕಿ ಸಮುದಾಯಕ್ಕೆ ಜನಸಂಖ್ಯೆಗನುಗುಣವಾಗಿ ಮೀಸಲಾತಿ‌ ಹೆಚ್ಚಳವಾಗಬೇಕು.ನಮ್ಮ ಮಕ್ಕಳಿಗೆ ಶೈಕ್ಷಣಿಕ,ಔದ್ಯೋಗಿಕ ಮೀಸಲಾತಿ ಬೇಕು.ಹೆಚ್ಚಳದ ಬಗ್ಗೆ ಸರ್ಕಾರ ಆಯೋಗ ರಚಿಸಿದೆ.ಸಬ್ ಕಮಿಟಿಗೆ ಬಂದಾಗ ನಮಗೆ ನೋವಾಯಿತು.ಈಗ ಉನ್ನತ ಮಟ್ಟದ ಸಮಿತಿಗೆ ಹೋಗಿದೆ.ಸಿಎಂ ಮೇಲೆ ನಮಗೆ ನಂಬಿಕೆಯಿದೆ.ಆರ್ಥಿಕವಾಗಿ ಸಬಲರಾದವರು ಮೀಸಲಾತಿಗೆ ಪ್ರಯತ್ನಿಸುತ್ತಿದ್ದಾರೆ.ಆದರೆ ನಾವು ನ್ಯಾಯಯುತವಾಗಿ ಕೇಳುತ್ತಿದ್ದೇವೆ.ನಮ್ಮ‌ ಬೇಡಿಕೆಯನ್ನು ನೀವು ಈಡೇರಿಸಬೇಕು ಎಂದು

ಸಿಎಂಗೆ ಪ್ರಸನ್ನಾನಂದಪುರಿಶ್ರೀ ಮನವಿ ಮಾಡಿದರು.

More News

ಎಸ್ ಆರ್ ವಿಶ್ವನಾಥ್‌ಗೆ ಬಿಗಿಭದ್ರತೆ

01 Dec 2021 | 5:59 PM

 Sharesee more..
ಬೆಳಗಾವಿಯಲ್ಲಿ  ಸದ್ಯ ಅಧಿವೇಶನ ರದ್ದುಪಡಿಸಿ

ಬೆಳಗಾವಿಯಲ್ಲಿ ಸದ್ಯ ಅಧಿವೇಶನ ರದ್ದುಪಡಿಸಿ

01 Dec 2021 | 5:29 PM

ಸಚಿವಾಲಯದ ನೌಕರರ ಸಂಘದಿಂದ ಮನವಿ

 Sharesee more..
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಕಾರ್ಯಕರ್ತರ ಮತ್ತು ಚುನಾಯಿತ ಸದಸ್ಯರ ಸಭೆ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಕಾರ್ಯಕರ್ತರ ಮತ್ತು ಚುನಾಯಿತ ಸದಸ್ಯರ ಸಭೆ

01 Dec 2021 | 4:37 PM

ಕರ್ನಾಟಕದ ವಿಧಾನ ಪರಿಷತ್ ನ 25 ಸ್ಥಾನಗಳಿಗೆ ಡಿಸೆಂಬರ್ 10 ರಂದು ಚುನಾವಣೆ ನಡೆಯಲಿದೆ. ಚುನಾವಣೆಗೆ ಕೆಲವು ನದಿಗಳು ಬಾಕಿ ಇರುವುದರಿಂದ ದಿನದಿಂದ ದಿನಕ್ಕೆ ಚುರುಗೊಳ್ಳುತ್ತಿರುವ ಮತದಾರರ ಓಲೈಕೆ‌ ಪ್ರಕ್ರಿಯೆ.

 Sharesee more..