Monday, Sep 20 2021 | Time 07:42 Hrs(IST)
National Share

ತಮಿಳುನಾಡಿನಲ್ಲಿ ಮತ್ತೊಂದು ವಾರ ಲಾಕ್‍ ಡೌನ್‍ ವಿಸ್ತರಣೆ

ಚೆನ್ನೈ, ಜುಲೈ 10(ಯುಎನ್‍ಐ)- ತಮಿಳುನಾಡಿನಲ್ಲಿ ನಿರ್ಬಂಧಗಳ ಹೆಚ್ಚುವರಿ ಸಡಿಲಿಕೆಯೊಂದಿಗೆ ಕೋವಿಡ್ ಲಾಕ್‍ ಡೌನ್‍ ಅವಧಿಯನ್ನು ಮತ್ತೊಂದು ವಾರ ವಿಸ್ತರಿಸುತ್ತಿರುವುದಾಗಿ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್‍ ಪ್ರಕಟಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್‍ ಸಾಂಕ್ರಾಮಿಕ ಹರಡುವಿಕೆ ತಡೆಯಲು ಕಳೆದ ಮೇ ತಿಂಗಳ 10ರಂದು ಜಾರಿಗೊಳಿಸಲಾದ ಲಾಕ್‍ ಡೌನ್‍ ಅನ್ನು ಹಂತ ಹಂತವಾಗಿ ನಿರ್ಬಂಧಗಳ ಸಡಿಲಿಕೆಯೊಂದಿಗೆ ಪ್ರತಿವಾರ ವಿಸ್ತರಿಸಲಾಗುತ್ತಿದೆ.
ಸದ್ಯದ ಲಾಕ್‍ ಡೌನ್‍ ಸೋಮವಾರ ಕೊನೆಗೊಳ್ಳಬೇಕಿತ್ತು. ಆದರೆ, ಜುಲೈ 19ರಿಂದ ಮತ್ತೊಂದು ವಾರ ಇದನ್ನು ವಿಸ್ತರಿಸಲಾಗಿದೆ.
ಪುದುಚೇರಿ ಹೊರತು ಪಡಿಸಿ ಅಂತರ ರಾಜ್ಯ ಸಾರಿಗೆ ಸೇವೆಗಳ ಮೇಲೆ ಸದ್ಯದ ನಿರ್ಬಂಧಗಳು ಮುಂದುವರೆಯಲಿವೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಸೂಚಿಸಿದ ಮಾರ್ಗಗಳನ್ನು ಹೊರತು ಪಡಿಸಿ ಅಂತಾರಾಷ್ಟ್ರೀಯ ಸೇವೆಗಳು ಮುಂದುವರೆಯಲಿವೆ. ಹಾಗೆಯೇ ಸಿನಿಮಾ ಮಂದಿರಗಳು, ಈಜುಕೊಳಗಳು, ಸಾಮಾಜಿಕ ಮತ್ತು ರಾಜಕೀಯ ಸಭೆಗಳು, ಮನರಂಜನಾ ಕೂಟಗಳು, ಕಾಲೇಜ್‍ ಗಳು ಹಾಗೂ ಜೀವಿ ಉದ್ಯಾನವನಗಳು ಮುಚ್ಚಿರುತ್ತವೆ ಎಂದು ಅವರು ಹೇಳಿದ್ದಾರೆ.
ಉಳಿದಂತೆ ಮದುವೆಗಳಿಗೆ ಕೇವಲ 50 ಜನರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಅಂತ್ಯಸಂಸ್ಕಾರಗಳಿಗೆ ಕೇವಲ 20 ಮಂದಿಗೆ ಅವಕಾಶ ನೀಡಲಾಗಿದೆ ಎಂದು ಸ್ಟಾಲಿನ್ ತಿಳಿಸಿದ್ದಾರೆ.

ಯುಎನ್‍ಐ ಎಸ್ಎಲ್ಎಸ್ 1600