Sunday, Oct 24 2021 | Time 02:29 Hrs(IST)
International Share

ಇರಾನ್‌ ಮೇಲೆ ಐಸಿಸ್‌ ದಾಳಿ;7 ಪೊಲೀಸರು ಸಾವು

ಬಾಗ್ದಾದ್, ಸೆ 5 (ಯುಎನ್ಐ/ಸ್ಪುಟ್ನಿಕ್) ಇರಾಕ್‌ನ ಉತ್ತರ ಕಿರ್ಕುಕ್ ಗವರ್ನರೇಟ್‌ನಲ್ಲಿ ಇಸ್ಲಾಮಿಕ್ ಸ್ಟೇಟ್ (ಐಸಿಸ್‌) ಭಯೋತ್ಪಾದಕ ಗುಂಪು ನಡೆಸಿದ ದಾಳಿಯಲ್ಲಿ ಹಲವಾರು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ಶಫಕ್ ನ್ಯೂಸ್ ಭಾನುವಾರ ಮುಂಜಾನೆ ವರದಿ ಮಾಡಿದೆ.
ಐಎಸ್ ಉಗ್ರರು ತಾಲ್ ಅಲ್-ಸ್ಟೀಹ್ ಗ್ರಾಮದಲ್ಲಿ ಫೆಡರಲ್ ಪೊಲೀಸ್ ಪಡೆಗಳ ಮೇಲೆ ದಾಳಿ ನಡೆಸಿದ್ದಾರೆ. ಮೂಲಗಳ ಪ್ರಕಾರ ಕನಿಷ್ಠ ಏಳು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ. ದಾಳಿ ಇನ್ನೂ ಮುಂದುವರಿದಿದೆ.
ಕಳೆದ ತಿಂಗಳು ಇರಾಕ್ ಅಧ್ಯಕ್ಷ ಬರ್ಹಮ್ ಸಾಲಿಹ್‌ಗೆ ಅವರಿಗೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್, ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಗುಂಪಿನ ವಿರುದ್ಧ ಕಾರ್ಯಾಚರಣೆ ಮುಗಿದಿಲ್ಲ, ಆದರೆ ಹೊಸ ಹಂತವನ್ನು ಪ್ರವೇಶಿಸುತ್ತಿದೆ ಎಂದು ಭರವಸೆ ನೀಡಿದ್ದರು.
ಇರಾಕ್‌ನಲ್ಲಿ ಪ್ರಸ್ತುತ 2,500 ಅಮೆರಿಕ ಸೈನಿಕರು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಗುಂಪನ್ನು ಎದುರಿಸಲು ಸ್ಥಳೀಯ ಪಡೆಗಳಿಗೆ ಸಹಾಯ ಮಾಡುತ್ತಿದ್ದಾರೆ.
ಇರಾಕ್‌ನಲ್ಲಿ ಅಮೆರಿಕ ಯುದ್ಧ ಕಾರ್ಯಾಚರಣೆ ಈ ವರ್ಷದ ಅಂತ್ಯದ ವೇಳೆಗೆ ಮುಕ್ತಾಯಗೊಳ್ಳಲಿದೆ ಎಂದು ಅಧ್ಯಕ್ಷ ಜೋ ಬೈಡೆನ್ ಜುಲೈನಲ್ಲಿ ಹೇಳಿದರು. 2021ರ ಡಿಸೆಂಬರ್ 31ರ ನಂತರ, ಅಮೆರಿಕ ಸೇನೆ ತನ್ನ ಕಾರ್ಯಾಚರಣೆಯನ್ನು, ಭಯೋತ್ಪಾದಕರನ್ನು ಎದುರಿಸಲು ಇರಾಕ್ ಪಡೆಗಳಿಗೆ ತರಬೇತಿಯನ್ನಾಗಿ ಬದಲಾಯಿಸುವ ನಿರೀಕ್ಷೆಯಿದೆ.
ಯುಎನ್ಐ ಎಸ್ಎಚ್ 0730
More News
ಭುಗಿಲೆದ್ದ ಹಿಂಸಾಚಾರ – ಪಾಕಿಸ್ತಾನದಲ್ಲಿ ನಾಲ್ವರು ಸಾವು

ಭುಗಿಲೆದ್ದ ಹಿಂಸಾಚಾರ – ಪಾಕಿಸ್ತಾನದಲ್ಲಿ ನಾಲ್ವರು ಸಾವು

23 Oct 2021 | 12:27 PM

ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಪಾಕಿಸ್ತಾನದಲ್ಲಿ ಸರಣಿ ಪ್ರತಿಭಟನೆಗಳು ಆರಂಭಗೊಂಡಿವೆ. ಇಸ್ಲಾಮಿಸ್ಟ್ ಹಾಗೂ ಭದ್ರತಾ ಪಡೆಗಳ ಮಧ್ಯೆ ನಡದೆ ಘರ್ಷಣೆಯಲ್ಲಿ ಇಬ್ಬರು ಪೊಲೀಸರು ಸಾವಿಗೀಡಾಗಿದ್ದಾರೆ. ಇನ್ನಿಬ್ಬರು ಇಸ್ಲಾಮಿಸ್ಟ್ ಹೋರಾಟಗಾರರು ಅಸುನೀಗಿದ್ದಾರೆ.

 Sharesee more..
ಅನನ್ಯ ಪಾಂಡೆ ಆರ್ಯನ್ ಖಾನ್​ಗೂ ಇರುವ ಸಂಬಂಧ ಏನು ಗೊತ್ತಾ? : ಚಾಟ್ ನಿಂದ ಬಹಿರಂಗವಾಯ್ತು ಡ್ರಗ್ಸ್ ಪೂರೈಕೆ ವಿಚಾರ

ಅನನ್ಯ ಪಾಂಡೆ ಆರ್ಯನ್ ಖಾನ್​ಗೂ ಇರುವ ಸಂಬಂಧ ಏನು ಗೊತ್ತಾ? : ಚಾಟ್ ನಿಂದ ಬಹಿರಂಗವಾಯ್ತು ಡ್ರಗ್ಸ್ ಪೂರೈಕೆ ವಿಚಾರ

22 Oct 2021 | 7:50 PM

ಮುಂಬೈ: ಅ, 22 (ಯುಎನ್‌ಐ) ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ.

 Sharesee more..
ಈ ಪುಟ್ಟ ಪೋರನ ದುಡಿಮೆ ತಿಂಗಳಿಗೆ 75 ಸಾವಿರ ರೂ  !

ಈ ಪುಟ್ಟ ಪೋರನ ದುಡಿಮೆ ತಿಂಗಳಿಗೆ 75 ಸಾವಿರ ರೂ !

22 Oct 2021 | 4:50 PM

ವಾಷಿಂಗ್ಟನ್ : ಅ, 22 (ಯುಎನ್‌ಐ) ಸಾಮಾಜಿಕ ಮಾಧ್ಯಮಗಳಲ್ಲಿ ರಾಜಕಾರಣಿಗಳು, ಸಿನಿಮಾ ನಟ-ನಟಿಯರು ತಮ್ಮದೇ ಆದ ಹವಾವನ್ನು ಕ್ರಿಯೇಟ್​ ಮಾಡಿರುತ್ತಾರೆ.

 Sharesee more..
ರೋಹಿಂಗ್ಯಾ ಗುಂಪುಗಳ ನಡುವೆ ಘರ್ಷಣೆ- ಸಾವು

ರೋಹಿಂಗ್ಯಾ ಗುಂಪುಗಳ ನಡುವೆ ಘರ್ಷಣೆ- ಸಾವು

22 Oct 2021 | 3:23 PM

ಢಾಕಾ,ಅ.

 Sharesee more..
ಮಧುಮಗಳ ಜೊತೆ ವೈರಲ್ ಆಗುತ್ತಿದೆ ನಾಯಿ

ಮಧುಮಗಳ ಜೊತೆ ವೈರಲ್ ಆಗುತ್ತಿದೆ ನಾಯಿ

22 Oct 2021 | 3:22 PM

ಅಮೆರಿಕಾ,ಅ.

 Sharesee more..