Sunday, Sep 26 2021 | Time 19:10 Hrs(IST)
Special Share

ಜಮ್ಮು ಕಾಶ್ಮೀರದಲ್ಲಿ ಹಲವೆಡೆ ಸಿಬಿಐ ದಾಳಿ

ಶ್ರೀನಗರ, ಜುಲೈ 24 (ಯುಎನ್‌ ಐ)- ಜಮ್ಮು ಕಾಶ್ಮೀರದ ಹಲವು ಸ್ಥಳಗಳ ಮೇಲೆ ಕೇಂದ್ರೀಯ ತನಿಖಾ ಸಂಸ್ಥೆ-ಸಿಬಿಐ ಅಧಿಕಾರಿಗಳು ಶನಿವಾರ ದಾಳಿ ನಡೆಸಿ ಶೋಧನೆ ನಡೆಸುತ್ತಿದ್ದಾರೆ ಎಂದು ಅಧಿಕಾರಿ ಮೂಲಗಳು ಹೇಳಿವೆ.
ಶನಿವಾರ ಬೆಳಗ್ಗೆಯಿಂದ ತನಿಖಾ ಸಂಸ್ಥೆಯ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ.
ಕೇಂದ್ರಾಡಳಿತ ಪ್ರದೇಶ ಜಮ್ಮು ಕಾಶ್ಮೀರ ಸರ್ಕಾರದ ಬುಡಕಟ್ಟು ವ್ಯವಹಾರಗಳ ಇಲಾಖೆ ಕಾರ್ಯದರ್ಶಿಯ ನಿವಾಸ ಹಾಗೂ ಜಮ್ಮು ಕಾಶ್ಮೀರದ ಯುವ ಅಭಿಯಾನ ಹಾಗೂ ಕೌಶಲ್ಯ ಅಭಿವೃದ್ದಿ ನಿಗಮದ ಸಿಇಓ ಡಾ. ಶಾಹಿದ್‌ ಇಕ್ಬಾಲ್‌ ಚೌಧರಿ ಅವರ ಶ್ರೀನಗರದ ತುಳಸಿ ಬಾಗ್‌ ನಲ್ಲಿ ಸರ್ಕಾರಿ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಶೋಧನೆ ನಡೆಸಿದರು. ಹೆಚ್ಚಿನ ವಿವರಗಳಿಗೆ ಕಾಯಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಯುಎನ್‌ ಐ ಕೆವಿಆರ್‌ 1156