Monday, Sep 20 2021 | Time 07:14 Hrs(IST)
National Share

ಲಡಾಖ್ ನ ಭೂಕಂಪನ, ಆಸ್ತಿ-ಪಾಸ್ತಿ , ಹಾನಿ ವರದಿಯಿಲ್ಲ

ನವದೆಹಲಿ, ಜೂನ್ 28 (ಯುಎನ್ಐ) ಲಡಾಖ್ ನ ಲೇಹ್ ನಲ್ಲಿ ಸೋಮವಾರ ಮುಂಜಾನೆ ಭೂಕಂಪನ ಸಂಭವಿಸಿದ್ದು,ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 4.6 ಎಂದು ದಾಖಲಾಗಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸೀಸ್ಮಾಲಜಿ (ಎನ್ ಸಿಎಸ್) ಮಾಹಿತಿ ನೀಡಿದೆ.
ನ್ಯಾಷನಲ್ ಸೆಂಟರ್ ಫಾರ್ ಸೀಸ್ಮಾಲಜಿ ವರದಿಯ ಪ್ರಕಾರ ಬೆಳಿಗ್ಗೆ 6:10 ರ ಸುಮಾರಿಗೆ ಕಂಪನದ ಅನುಭವವಾಗಿದೆ. ಲಡಾಖ್ ನ ಲೇಹ್ ನಲ್ಲಿ 4.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ತಿಳಿದು ಬಂದಿದೆ. ಆದಾಗ್ಯೂ, ಯಾವುದೇ ಜೀವ ಹಾನಿ ಅಥವಾ ಆಸ್ತಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಇದರ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಯುಎನ್ಐ ಕೆಎಸ್ಆರ್ 1155