Monday, Sep 20 2021 | Time 06:52 Hrs(IST)
National Share

ಕರೋನ ನಿಯಂತ್ರಣ : ಮುಂದಿನ ಮೂರು ತಿಂಗಳು ನಿರ್ಣಾಯಕ

ನವದೆಹಲಿ, ಜುಲೈ 16 (ಯುಎನ್ಐ) ಕರೋನಾ ಅಪಾಯದಿಂದ ಪಾರಾಗಲು ಜನತೆ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಮುಂದಿನ ಮೂರು ತಿಂಗಳ ಕಾಲ ಮುಂದುವರಿಸಿಕೊಂಡು ಹೋಗುವುದ ಜೊತೆಗೆ ಎಚ್ಚರಿಕೆಯಿಂದ ಇರಬೇಕೆಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಕೊರೋನಾ ಪ್ರಕರಣಗಳು ಏನಾಗಿದೆಯೆಂದು ಕಡಿಮೆಯಾಗಿದೆಯೆಂದು ಮೈ ಮರೆಯುವಂತಿಲ್ಲ. ಎಲ್ಲರೂ ತಪ್ಪದೇ ಲಸಿಕೆ ಹಾಕಿಸಿಕೊಳ್ಳಬೇಕು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಂಡು ಜಾಗರೂಕರಾಗಿರಬೇಕು ನೀತಿ ಆಯೋಗ ಸದಸ್ಯ ಡಾ.ವಿ.ಕೆ ಪಾಲ್ ಹೇಳಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಕಡಿಮೆಯಾಗುವ ವೇಗ ನಿಧಾನವಾಗುತ್ತಿದೆ ಇದು ನಿಜಕ್ಕೂ ಅಪಾಯಕಾರಿ ಬೆಳವಣಿಗೆಯಾಗಿದೆ ಕೊರೋನ ವಿರುದ್ದದ ಹೋರಾಟಕ್ಕೆ ಮುಂ. ದಿನ 100 ರಿಂದ 125 ದಿನಗಳು ಬಹಳ ಮುಖ್ಯ' ಎಂದು ಅವರು ಹೇಳಿದರು.
ಯುಎನ್ಐ ಕೆಎಸ್ಆರ್ 2008