Wednesday, Oct 20 2021 | Time 14:56 Hrs(IST)
Special Share

ಒಡಿಸ್ಸಾದ ಮಂಡ ಎಮ್ಮೆಗೂ ಸ್ವದೇಶಿ ತಳಿ ಮಾನ್ಯತೆ

ಭುವನೇಶ್ವರ, ಸೆ 9 (ಯುಎನ್ಐ) ಕರ್ನಾಟಕದ ಧಾರವಾಡಿ ಎಮ್ಮೆಗೆ ತಳಿ ಮಾನ್ಯತೆ , ದೊರೆಕಿರುವಾಗಲೇ ಒಡಿಸ್ಸಾದ “ಮಂಡ ಎಮ್ಮೆಗೂ ಸ್ವದೇಶಿ ತಳಿ ಎಂಬ ಹೆಗ್ಗಳಿಕೆ ಲಭ್ಯವಾಗಿರುವುದು ರೈತ ಸಮುದಾಯಕ್ಕೆ ಬಹಳ ಹೆಮ್ಮೆ ಸಂಗತಿಯಾಗಿದೆ.
ಮಲ್ಕನ್ಗಿರಿ ಮತ್ತು ನಬರಂಗ್ಪುರ ಪ್ರದೇಶದಲ್ಲಿ ಕಾಣಿಸಿಕೊಳ್ಳುವ ಈ ಎಮ್ಮೆಗಳನ್ನು ನ್ಯಾಷನ್ಲ್ ಬ್ಯೂರೋ ಆಫ್ ಅನಿಮಲ್ ಜೆನೆಟಿಕ್ ರಿಸೋರ್ಸಸ್(ಎನ್ಬಿಎಜಿಆರ್) ಸ್ಥಳೀಯ ತಳಿ ಎಂದು ಘೋಷಿಸಿದೆ.
ಒಡಿಶಾದ ಪ್ರಾಣಿ ಸಂಪನ್ಮೂಲಗಳ ಅಭಿವೃದ್ಧಿ ಇಲಾಖೆ, ಹಾಗೂ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ 2019 ರಲ್ಲಿ ವಿವರ ಸಮೀಕ್ಷೆ ನಡೆಸಲಾಗಿತ್ತು. ಮಂಡಾ ಗಟ್ಟಿಮುಟ್ಟಾದ ಎಮ್ಮೆಯಾಗಿದ್ದು ಗಂಡು ಮತ್ತು ಹೆಣ್ಣು ಎರಡನ್ನೂ ಕೃಷಿ ಚಟುವಟಿಕೆಕಾಗಿ ಕೋರಾಪುಟ್, ಮಲ್ಕನ್ ಗಿರಿ ಮತ್ತು ನಬರಂಗಪುರ ಜಿಲ್ಲೆಗಳಲ್ಲಿ ಬಳಸಲಾಗುತ್ತಿದೆ. ಈ ಮೂಲಕ ದೇಶದಲ್ಲಿ ಮಾನ್ಯತೆ ಪಡೆದ ತಳಿಗಳ ಸಂಖ್ಯೆ 202ಕ್ಕೆ ಏರಿದೆ. ಅದರಲ್ಲಿ 19 ತಳಿಗಳು ಎಮ್ಮೆಗೆ ಸೇರಿದ ತಳಿಗಳಾಗಿವೆ.

ಯುಎನ್ಐ ಕೆಎಸ್ಆರ್ 1723