Friday, Oct 22 2021 | Time 06:26 Hrs(IST)
Special Share

ಅಯೋಧ್ಯೆ ರಾಮ ಮಂದಿರಕ್ಕೆ 115 ದೇಶಗಳ ಜಲ

ನವದೆಹಲಿ, ಸೆ 18(ಯುಎನ್‌ ಐ) ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಭವ್ಯ ರಾಮ ಮಂದಿರಕ್ಕಾಗಿ ಜಗತ್ತಿನ ಎಲ್ಲ ದೇಶಗಳ ಪವಿತ್ರ ಜಲವನ್ನು ಸಂಗ್ರಹಿಸಲಾಗುತ್ತಿದೆ. ಈ ಭಾಗವಾಗಿ ಮೊದಲ ಕಂತಿನಲ್ಲಿ ಭಾರತಕ್ಕೆ ಬಂದ 115 ದೇಶಗಳ ಜಲವನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಶೇಷವಾಗಿ ಸ್ವೀಕರಿಸಿದರು. ಅವರೊಂದಿಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಇದ್ದರು.
ಈ ಬಾರಿಯ ಜಲ 115 ದೇಶಗಳ ವಿವಿಧ ನದಿಗಳು, ತೊರೆಗಳು ಹಾಗೂ ಜಲಪಾತಗಳಿಗೆ ಸೇರಿದವಾಗಿವೆ ಎಂದು ತಿಳಿದುಬಂದಿದೆ. "ಅಯೋಧ್ಯೆ ರಾಮ ದೇವಾಲಯ ನಿರ್ಮಾಣ ಪೂರ್ಣಗೊಳ್ಳುವದೊರಳಗೆ, ಇತರ ದೇಶಗಳಿಂದ ಪವಿತ್ರ ಜಲ ಭಾರತವನ್ನು ತಲುಪಲಿದೆ ಎಂದು ಭಾವಿಸಿದ್ದೇನೆ ಎಂದು ರಾಜನಾಥ್ ನುಡಿದರು. ಪ್ರಪಂಚದ ಹಲವು ದೇಶಗಳ ನೀರನ್ನು ದೇಗುಲ ನಿರ್ಮಾಣದಲ್ಲಿ ಸಾಧ್ಯವಾದಷ್ಟು ಬಳಸುವ ಮೂಲಕ 'ವಸುಧೈವ ಕುಟುಂಬ'ದ ಸಂದೇಶವನ್ನು ಪ್ರತಿಬಿಂಬಿಸುವ ಗುರಿ ಹೊಂದಲಾಗಿದೆ ಎಂದು ಅವರು ವಿವರಿಸಿದರು.
ಯುಎನ್‌ ಐ ಕೆವಿಆರ್‌ 2140
More News
ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

21 Oct 2021 | 1:28 PM

ಭಾರತದ ಗಲ್ಲಿ ಗಲ್ಲಿಗಳಲ್ಲಿ ಆಡುತ್ತಿದ್ದ ಹುಡುಗ ಈಗ ಓಮನ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ. ಟಿ-20 ವಿಶ್ವಕಪ್ ನ ಅರ್ಹತಾ ಪಂದ್ಯಗಳಲ್ಲಿ ಆಡುತ್ತಿರುವ ಜತೀಂದರ್ ಸಿಂಗ್, ಓಮನ್ ತಂಡದ ಸ್ಟಾರ್ ಆಟಗಾರನಾಗಿದ್ದಾನೆ.

 Sharesee more..