Monday, Sep 20 2021 | Time 07:12 Hrs(IST)
National Share

ನಟ ದಿಲೀಪ್ ಕುಮಾರ್ ನಿಧನಕ್ಕೆ ಪ್ರಧಾನಿ ಸಂತಾಪ

ನಟ ದಿಲೀಪ್ ಕುಮಾರ್ ನಿಧನಕ್ಕೆ ಪ್ರಧಾನಿ ಸಂತಾಪ
ನಟ ದಿಲೀಪ್ ಕುಮಾರ್ ನಿಧನಕ್ಕೆ ಪ್ರಧಾನಿ ಸಂತಾಪ

ನವದೆಹಲಿ, ಜುಲೈ 7 (ಯುಎನ್ಐ) ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.

"ದಿಲೀಪ್ ಕುಮಾರ್ ಜಿ ಅವರನ್ನು ಸಿನಿಮಾ ರಂಗದ ದಂತಕಥೆಯೆಂದು ಸ್ಮರಿಸಲಾಗುವುದು. ಅವರು ಸರಿಸಾಟಿಯಿಲ್ಲದ ತೇಜಸ್ಸಿನಿಂದ ಆಶೀರ್ವದಿಸಲ್ಪಟ್ಟಿದ್ದು ಅವರ ಅಭಿನಯಕ್ಕೆ ತಲೆಮಾರಿನ ಪ್ರೇಕ್ಷಕರು ತಲೆಬಾಗಿದರು. ಅವರ ನಿಧನ ಸಿನಿಮಾ, ಸಾಂಸ್ಕೃತಿಕ ಜಗತ್ತಿಗೆ ದೊಡ್ಡ ನಷ್ಟವಾಗಿದೆ. ಅವರ ಕುಟುಂಬ, ಸ್ನೇಹಿತರು ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ಅಗಲಿಕೆಯ ನೋವು ಭರಿಸುವ ವು ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪಿಎಂ ಟ್ವೀಟ್ ಮಾಡಿದ್ದಾರೆ.



98 ವರ್ಷದ ನಟ ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ವಯೋ ಸಹಜ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು. ದೇವದಾಸ್, ಮೊಘಲ್-ಎ-ಅಜಮ್, ಗುಂಗಾ ಜಮುನಾ, ರಾಮ್ ಔರ್ ಶ್ಯಾಮ್, ನಯಾ ದೌರ್, ಮಧುಮತಿ, ಕ್ರಾಂತಿ, ವಿಧಾನ, ಶಕ್ತಿ ಮತ್ತು ಮಾಶಾಲ್ ಚಿತ್ರಗಳಲ್ಲಿ ಅವರ ಅಭಿನಯ ಜನ ಮನ ಸೂರೆಗೊಂಡಿತ್ತು.

ಯುಎನ್ಐ ಕೆಎಸ್ಆರ್ 0919