Wednesday, Oct 20 2021 | Time 15:33 Hrs(IST)
Karnataka Share

ಅಮಿತ್ ಷಾ ಹೇಳಿಕೆ : ಮೂಲ ಬಿಜೆಪಿಗರ ಹೊಟ್ಟೆಯಲ್ಲಿ ಬೆಂಕಿ..!

( ಕೆ. ಎಸ್. ರಾಜಮನ್ನಾರ್ )
ಬೆಂಗಳೂರು, ಸೆ 4 (ಯುಎನ್ಐ) ಬಿಜೆಪಿಯ ಚಾಣಾಕ್ಷ , ಕೇಂದ್ರ ಗೃಹ ಸಚಿವ ಅಮಿತ್ ಷಾ, ರಾಜ್ಯಕ್ಕೆ ನೀಡಿದ ಮೊದಲ ಭೇಟಿಯಲ್ಲೇ, ಸಿಕ್ಕಿದ ಅವಕಾಶದಲ್ಲೇ ಸಿಕ್ಸರ್ ಭಾರಿಸಿ ರಾಜಕೀಯ ಕಂಪನಕ್ಕೂ ಕಾರಣವಾಗಿದ್ದಾರೆ. ಬೊಮ್ಮಾಯಿ ಉತ್ತಮ ಆಡಳಿತ ನೀಡುತ್ತಿದ್ದು ಅವರ ನಾಯಕತ್ವದಲ್ಲೇ ಬಿಜೆಪಿ ಮುಂದಿನ ಚುನಾವಣೆ ಎದುರಿಸಿ ಸ್ಪಷ್ಟ ಜನಾದೇಶದೊಂದಿಗೆ ಮರಳಿ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಮೂಲಕ ಪಕ್ಷವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ, ರಾಜ್ಯ ರಾಜಕಾರಣ ನನ್ನ ಮೂಗಿನ ನೇರಕ್ಕೆ ನಡೆಯಬೇಕು, ನಾನು ಹೇಳಿದವರನ್ನೇ ಮುಂದಿನ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂಬ ಅದಮ್ಯ ಆಸೆ ಕಟ್ಟಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಇತರೆ ಬಿಜೆಪಿ ನಾಯಕರ ಕನಸನ್ನು ಒಂದೇ ಏಟಿಗೆ ಅಮಿತ್ ಷಾ ನುಚ್ಚುನೂರು ಮಾಡಿದ್ದಾರೆ.
ಗಣಪತಿ ಹಬ್ಬದ ನಂತರ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವುದಾಗಿ ಹೇಳಿದ್ದು, ಇದಕ್ಕಾಗಿ ಯಡಿಯೂರಪ್ಪ ದೈಹಿಕ ಮತ್ತು ಮಾನಸಿಕ ತಯಾರಿ ಮಾಡಿಕೊಂಡಿದ್ದರು. ಆದರೆ ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ ನಡೆಯಲಿದೆ, ಬಿಜೆಪಿ ಸ್ಪಷ್ಟ ಜನಾದೇಶದೊಂದಿಗೆ ಮರಳಿ ಅಧಿಕಾರಕ್ಕೆ ಬರಲಿದೆ ಎಂಬ ಹೇಳಿಕೆ ನೀಡುವ ಮೂಲಕ ಅಮಿಷಾ ಒಂದು ಕಲ್ಲಿಗೆ ಹಲವು ಹಕ್ಕಿಗಳನ್ನು ಹೊಡೆದಿದ್ದಾರೆ.
ಇದು ರಾಜಕೀಯವಾಗಿ ಕೊಡಬಹುದಾದ ಸಂದೇಶವೆಂದರೆ, ಬಸವರಾಜ ಬೊಮ್ಮಾಯಿ ಯಡಿಯೂರಪ್ಪನವರ ಆಯ್ಕೆ ಬಿಜೆಪಿ ಹೈಕಮಾಂಡ್ ಆಯ್ಕೆ, ರಾಜ್ಯ ಬಿಜೆಪಿಯಲ್ಲಿ, ಸಂಘಪರಿವಾರದ ಹಿನ್ನೆಲೆ ಇಲ್ಲದ, ಜನತಾ ಪರಿವಾರದಿಂದ ಬಂದ ನಾಯಕರು ಬಹಳ ಸಂಖ್ಯೆಯಲ್ಲಿದ್ದಾರೆ ಉದಾಹರಣೆಗೆ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಗೋವಿಂದ ಕಾರಜೋಳ ಹೀಗೆ ಹೆಸರು ಹೇಳುತ್ತಾ ಹೋದರೆ ಬಾಲದಂತೆ ಬೆಳೆಯುತ್ತದೆ. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಜನತಾ ಪರಿವಾರದಿಂದ ಬಂದವರಾಗಿದ್ದು,ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡುಹೋಗಲಿದ್ದಾರೆ ಎಂಬ ವಿಶ್ವಾಸದಿಂದ ಮುನ್ನಡೆಯಲು ಅವರಿಗೆ ಪೂರ್ಣ ರಹದಾರಿ ಮಾಡಿ ಕೊಟ್ಟಿದ್ದಾರೆ.
ಅಮಿತ್ ಶಾ ಹೇಳಿಕೆಯಿಂದ ಮೂಲ ಬಿಜೆಪಿ ನಾಯಕರ ಹೊಟ್ಟೆಗೆ ಬೆಂಕಿ ಬಿದ್ದಿದೆ. ನಿನ್ನೆ, ಮೊನ್ನೆ ಪಕ್ಷಕ್ಕೆ ಬಂದವರು ಮುಖ್ಯಮಂತ್ರಿಯಾಗಿ ಮೆರೆಯುವುದಾದರೆ ನಾವು ಏಕೆ ಕಷ್ಟಪಟ್ಟು ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಬೇಕು ಎಂಬ ಚಿಂತೆ ಮೂಲ ಬಿಜೆಪಿಯವರನ್ನು ಕಾಡಲು ಆರಂಭಿಸಿದೆ.
ಮತ್ತೊಬ್ಬ ಲಿಂಗಾಯಿತ ನಾಯಕ ರಾಜಕೀಯವಾಗಿ ಎತ್ತರಕ್ಕೆ ಬೆಳೆಯುವುದನ್ನು ಯಡಿಯೂರಪ್ಪನವರಾಗಲೀ, ಬೊಮ್ಮಾಯಿ ರಾಜಕೀಯ ವಿರೋಧಿ ಜಗದೀಶ್ ಶೆಟ್ಟರ್ ಹೇಗೆ ತಾನೇ ಸಹಿಸಿಯಾರು? ಇದು ವಲಸಿಗರು ಮತ್ತು ಮೂಲ ಬಿಜೆಪಿ ನಡುವೆ ಒಂದು ಶಾಶ್ವತ ಕಂದಕ ಉಂಟುಮಾಡುವ, ಮತ್ತು ಮುಂದಿನ ಸಾರ್ವತ್ರಿಕ ಚುನಾವಣೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಅಲ್ಲಗಳೆಯಲಾಗದು .
ಹಾಗೆ ನೋಡಿದರೆ ಸಿದ್ದರಾಮಯ್ಯ , ಜೆಡಿಎಸ್ ತೊರೆದು ಕಾಂಗ್ರೆಸ್ ಗೆ ಬಂದು ಐದು ವರ್ಷಗಳ ಕಾಲ ಅನಭಿಷಕ್ತ ಸಾಮ್ರಾಟ ನಂತೆ, ಯಾರ ಕಾಟವಿಲ್ಲದೆ, ರಾಜನಂತೆ 5 ವರ್ಷಗಳ ಅಧಿಕಾರ ಪೂರ್ಣ ಮಾಡಿದ್ದಾರೆ.
ನಂತರ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಎಚ್. ಡಿ. ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಿದ್ದರು . ಹೆಚ್ಚು ಕಾಲ ಅಧಿಕಾರದಲ್ಲಿರಲು ಬಿಟ್ಟರೆ, ಜೆಡಿಎಸ್ ಭದ್ರವಾಗಿ ಬೇರು ಬಿಡಬಹುದೆಂಬ ದೂರದ ಅಲೋಚನೆಯಿಂದ, ಸಿದ್ದರಾಮಯ್ಯ ಪರೋಕ್ಷ ದಾಳ ಉರುಳಿಸುವ ಮೂಲಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡು, ಯಡಿಯೂರಪ್ಪ ನಾಯಕತ್ವದಲ್ಲಿ ಹೊಸ ಬಿಜೆಪಿ ಸರ್ಕಾರ ಸ್ಥಾಪನೆಯಾಯಿತು.
ನಂತರ ಎರಡು ವರ್ಷಗಳ ಅಧಿಕಾರ ಪೂರ್ಣಗೊಳಿಸಿದ ದಿನದಂದೇ ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳಬೇಕಾಗಿ ಬಂದಿದ್ದು ಅವರ ಪಾಲಿನ ದುರಂತ. ಇದು ಸ್ವಯಂಕೃತ ಅಪರಾಧವೂ ಹೌದು . ಇದಕ್ಕಾಗಿ ಬೇರೆಯವರನ್ನು ಬೊಟ್ಟುಮಾಡಿ ತೋರಿಸಲು ಸಾಧ್ಯವಾಗದು, ಅವರ ಜಾಗದಲ್ಲಿ ಈಗ ಬಸವರಾಜ ಬೊಮ್ಮಾಯಿ ಕುಳಿತಿದ್ದಾರೆ. ಒಂದು ತಿಂಗಳ ಆಡಳಿತದಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ಜನಾಂಗದ ನಾಯಕರಾಗಿ ಎತ್ತರಕ್ಕೆ ಬೆಳೆಯದೇ ಹೋದರೂ, ಆಡಳಿತದ ಕಾರಣಕ್ಕಾಗಿ ಒಳ್ಳೆಯ ಮುಖ್ಯಮಂತ್ರಿ ಎಂಬ ಹೆಸರು ಗಳಿಸಿಕೊಳ್ಳುಬಹುದೆನೋ ಹೊಸ ಭರವಸೆ, ವಿಶ್ವಾಸ ಮೂಡಿಸಿದ್ದಾರೆ. ಈ ವಿಶ‍್ವಾಸವೇ ಮೂಲ ಬಿಜೆಪಿಯವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಬಾಯಿಬಿಟ್ಟು ಬಹಿರಂಗವಾಗಿ ಅಸಮಾಧಾನ ತೋಡಿಕೊಳ್ಳುವ ಸ್ಥಿತಿಯಲ್ಲೂ ಅವರಿಲ್ಲ.
ಶಾಶ್ವತ ಭಿನ್ನಮತವನ್ನು ಬಿಜೆಪಿ ಹೈಕಮಾಂಡೇ ಹುಟ್ಟು ಹಾಕಿ ಅದರೊಂದಿಗೆ ನಾಳಿನ ಭವಿಷ್ಯ ಕಂಡುಕೊಳ್ಳುವ ದಿಟ್ಟತನವನ್ನೂ ಪ್ರದರ್ಶನ ಮಾಡಿದೆ. ಹೀಗಾಗಿ ಮುಂದಿನ ಚುನಾವಣೆ ಮೇಲೆ ಪರಿಣಾಮ ಬೀರುವುದು ಶತಸಿದ್ಧ, ಆದರೆ ಎಷ್ಟರಮಟ್ಟಿಗೆ ಹಾನಿಯಾಗಲಿದೆ, ಲಾಭವಾಗಲಿದೆ ಎಂಬುದನ್ನು ಈಗಲೇ ನಿಖರವಾಗಿ ಅಳೆಯಲು, ಹೇಳಲು ಕಾಲ ಸಕಾಲಿಕವಾಗಿಲ್ಲ. ಸಿದ್ದರಾಮಯ್ಯ ಸೇರಿದಂತೆ ನಂತರ ಬಂದ ಸಿಎಂ ಗಳಾದ ಎಚ್. ಡಿ. ಕುಮಾರಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿ ಜನತಾಪರಿವಾರ ದಿಂದಲೇ ಬಂದಿರುವುದು ಕಾಕತಾಳಿಯ, ನಿಜ. ಪಕ್ಷ ಬೇರೆಯಾದರೂ ರಂಬೆ , ಕೊಂಬೆ, ತಾಯಿ ಬೇರುಗಳು ಮಾತ್ರ ಒಂದೇ.!!
ಯುಎನ್ಐ ಕೆಎಸ್ ಆರ್ 1353
More News
ಕಾನೂನು ತಜ್ಞರ ಸಲಹೆ ಪಡೆಯಿತ್ತಿರುವ ಸರ್ಕಾರ

ಕಾನೂನು ತಜ್ಞರ ಸಲಹೆ ಪಡೆಯಿತ್ತಿರುವ ಸರ್ಕಾರ

20 Oct 2021 | 2:57 PM

ಬೆಂಗಳೂರು,ಅ.

 Sharesee more..
ಹಿಂದೂಗಳ ಮೇಲಿನ ಆಕ್ರಮಣ ಖಂಡಿಸಿ ಪ್ರತಿಭಟನೆ

ಹಿಂದೂಗಳ ಮೇಲಿನ ಆಕ್ರಮಣ ಖಂಡಿಸಿ ಪ್ರತಿಭಟನೆ

20 Oct 2021 | 2:56 PM

ಮೈಸೂರು ಬ್ಯಾಂಕ್ ಸರ್ಕಲ್ ಬಳಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮುಖಂಡ ಮೋಹನಗೌಡ, "ನವರಾತ್ರಿಯ ಸಂದರ್ಭದಲ್ಲಿ ಬಾಂಗ್ಲಾದೇಶದ 30 ಜಿಲ್ಲೆಗಳಲ್ಲಿ ದಲ್ಲಿ 315 ದೇವಸ್ಥಾನಗಳ ಮೇಲೆ ಮುಸಲ್ಮಾನರು ಆಕ್ರಮಣ ಮಾಡಿದರು ಮತ್ತು 1500 ಹಿಂದೂ ಮನೆಗಳ ಧ್ವಂಸ ಮಾಡಿದರು.

 Sharesee more..
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಪ್ರತ್ಯೇಕ ಸಚಿವರನ್ನು ಕೊಡಿ

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಪ್ರತ್ಯೇಕ ಸಚಿವರನ್ನು ಕೊಡಿ

20 Oct 2021 | 2:53 PM

ಬೆಂಗಳೂರು,ಅ.

 Sharesee more..
ಪರಿಶಿಷ್ಟ ಸಮುದಾಯದವರಷ್ಟೇ ಪಾಯಖಾನ ತೊಳೆಯಬೇಕೇ?

ಪರಿಶಿಷ್ಟ ಸಮುದಾಯದವರಷ್ಟೇ ಪಾಯಖಾನ ತೊಳೆಯಬೇಕೇ?

20 Oct 2021 | 2:52 PM

ವಿಧಾನಸೌಧದಲ್ಲಿ ನಡೆದ ವಾಲ್ಮೀಕಿ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸ್ವಾಮೀಜಿ,ಎಸ್ಸಿಎಸ್ಟಿಯವರಷ್ಟೇ ಪಾಯಖಾನೆ ತೊಳೆಯಬೇಕೇ?ಮೇಲ್ವರ್ಗ ಸಮುದಾಯವೇನು ಇದರಿಂದ ಹೊರತೇ?ಪಾಯಿಖಾನೆ ತೊಳೆಯುವುದನ್ನೂ ಕೆಲಸವೆಂದು ಪರಿಗಣಿಸಬೇಕು.

 Sharesee more..