Monday, Oct 18 2021 | Time 22:01 Hrs(IST)
Karnataka Share

ಸತೀಶ್ ರೆಡ್ಡಿಗೆ ಸಿಕ್ತು ಮುಖ್ಯ ಹುದ್ದೆ

ಬೆಂಗಳೂರು,ಸೆ.13(ಯುಎನ್ಐ)ಬಿಜೆಪಿಯಲ್ಲಿ ಭಾರೀ ಪೈಪೋಟಿಯೇ ಸೃಷ್ಟಿಸಿದ್ದ ವಿಧಾನಸಭೆ ಹುದ್ದೆ ಇದೀಗ ಶಾಸಕ ಸತೀಶ್ ರೆಡ್ಡಿ ಪಾಲಾಗಿದೆ.
ಕಾರ್ಕಳ ಶಾಸಕ ಸುನೀಲ್ ಕುಮಾರ್‌ಗೆ ಸಚಿವ ಸ್ಥಾನ ಸಿಕ್ಕಿದ್ದರಿಂದ ಅವರಿಗಿದ್ದ ವಿಧಾನಸಭೆ ಮುಖ್ಯ ಸಚೇತಕ ಸ್ಥಾನ ತೆರವಾಗಿತ್ತು.
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯ ಉಸ್ತುವಾರಿ ವಹಿಸಿ ಮೊದಲ ಬಾರಿಗೆ ಪಾಲಿಕೆ ಕಮಲ ಪಾಲಾಗುವಂತೆ ಮಾಡಿದ್ದ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿಗೆ ಬಿಜೆಪಿ ನಾಯಕರು ವಿಧಾನಸಭೆ ಮುಖ್ಯಸಚೇತಕ ಹುದ್ದೆ ನೀಡಿ ಇನ್ನಷ್ಟು ಜವಾಬ್ದಾರಿ ಹೆಚ್ಚಿಸಿದ್ದಾರೆ.ಸಚಿವಸ್ಥಾನದ ಮೇಲೆ ನಿರೀಕ್ಷೆಯಿಟ್ಟಿದ್ದ ಸತೀಶ್ ರೆಡ್ಡಿಗೀಗ ಬಿಜೆಪಿ ವಿಧಾನಸಭೆ ಮುಖ್ಯಸಚೇತಕ ಹುದ್ದೆ ಸಿಕ್ಕಿದ್ದು, ಸಿಎಂ ಬಸವರಾಜಬೊಮ್ಮಾಯಿ ಅಧ್ಯಕ್ಷತೆಯ ಮೊದಲ ಬಿಜೆಪಿ ಶಾಸಕಾಂಗ ಸಭೆ ನಡೆಯುವ ಮೊದಲೇ ನೂತನ ಮುಖ್ಯ ಸಚೇತಕ ಹುದ್ದೆಗೆ ನೇಮಕವಾಗಿದೆ.
ಅಂದ್ಹಾಗೆ ಮುಖ್ಯಸಚೇತಕ ಹುದ್ದೆ ಬಿಜೆಪಿಯಲ್ಲಿ ಪೈಪೋಟಿಯನ್ನೇ ತಂದೊಡ್ಡಿತ್ತು.ಇದಕ್ಕಾಗಿ
ಸಚಿವ ಸ್ಥಾನದ ಮೇಲೆ ಕಣ್ಣಿಟ್ಟು ಕೊನೆ ಕ್ಷಣದಲ್ಲಿ ವಂಚಿತರಾಗಿದ್ದ ಶಾಸಕರಾದ ಸತೀಶ್ ರೆಡ್ಡಿ, ಅಭಯ್‍ಪಾಟೀಲ್, ವೀರಣ್ಣ ಚರಂತಿಮಠ, ಪಿ.ರಾಜೀವ, ದತ್ತಾತ್ರೇಯ ಪಾಟೀಲ್ ರೇವೂರ್ ಸೇರಿದಂತೆ ಪ್ರಮುಖರ ಹೆಸರುಗಳು ಕೇಳಿ ಬಂದಿವೆ. ಮುಖ್ಯಸಚೇತಕರ ಹುದ್ದೆ ಅತ್ಯಂತ ಪ್ರಮುಖ ಸ್ಥಾನವಾಗಿರುವುದರಿಂದ ಹಿರಿತನ, ಪಕ್ಷ ಸಂಘಟನೆ, ಸದನದಲ್ಲಿ ಸರ್ಕಾರವನ್ನು ಸಮರ್ಥಿಸಿಕೊಳ್ಳುವ ರೀತಿ ಇವೆಲ್ಲವನ್ನು ಪರಿಗಣಿಸಿಯೇ ನೀಡಲಾಗಿದೆ.
ಯುಎನ್ಐ ಯುಎಲ್, 2021
More News
1 ರಿಂದ 5ನೇ ತರಗತಿಗಳ ಆರಂಭಕ್ಕೆ ಹಸಿರು ನಿಶಾನೆ

1 ರಿಂದ 5ನೇ ತರಗತಿಗಳ ಆರಂಭಕ್ಕೆ ಹಸಿರು ನಿಶಾನೆ

18 Oct 2021 | 9:42 PM

1 ರಿಂದ 5 ರವರೆಗಿನ ತರಗತಿಗಳನ್ನು ನಡೆಸುವ ಬಗ್ಗೆ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇವುಗಳು ಹಾರಿಗೊಳ್ಳುವಂತೆ ಗಮನಹರಿಸುವುದು ಆಯಾ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರ ಜವಾಬ್ದಾರಿಯಾಗಿದೆ. ಕೋವಿಡ್ ನಿಯಂತ್ರಣ ಕುರಿತಂತೆ ಸಂಬಂಧಿಸಿದ ಸಂಸ್ಥೆ ಸೂಚಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

 Sharesee more..
ತಗ್ಗಿದ ಕೋವಿಡ್ ಪ್ರಕರಣ; ಮತ್ತಷ್ಟೂ ಚಟುವಟಿಕೆಗೆ ಅನುಮತಿ

ತಗ್ಗಿದ ಕೋವಿಡ್ ಪ್ರಕರಣ; ಮತ್ತಷ್ಟೂ ಚಟುವಟಿಕೆಗೆ ಅನುಮತಿ

18 Oct 2021 | 9:39 PM

ಪ್ರಯಾಣಿಕರನ್ನು ಸ್ವಯಂಚಾಲಿತ ಥರ್ಮಲ್ ಪರೀಕ್ಷಾ ಕ್ಯಾಮೆರಾಗಳ ಮುಖಾಂತರ ತಪಾಸಣೆಗೊಳಪಡಿಸುವುದು ಅಗತ್ಯ ಎಂದು ಹೇಳಲಾಗಿದೆ. ಇಂಗ್ಲೆಡ್ ನಿಂದ ಬರುವ ಪ್ರಯಾಣಿಕರಿಗೆ ಕ್ವಾರಂಟೈನ್ ಅನ್ವಯಿಸುವ ಕುರಿತು ಕೇಂದ್ರ ಸರಕಾರ ಸೂಚಿಸಿರುವ ಮಾರ್ಗಸೂಚಿ ಅನುಸರಣೆ ಮುಂದುವರಿಯುತ್ತದೆ. ಇದರ ಬಗ್ಗೆ ಹೆಚ್ಚಿನ ಸ್ಪಷ್ಟೀಕರಣವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡುತ್ತದೆ ಎಂದು ಹೇಳಲಾಗಿದೆ.

 Sharesee more..
ಭಾರತದ ಕಾನೂನು ವಿಶ್ವದಲ್ಲೇ ಶ್ರೇಷ್ಠ: ರಾಜ್ಯಪಾಲ

ಭಾರತದ ಕಾನೂನು ವಿಶ್ವದಲ್ಲೇ ಶ್ರೇಷ್ಠ: ರಾಜ್ಯಪಾಲ

18 Oct 2021 | 9:27 PM

ದೇಶದ ಸಂವಿಧಾನ ಹಾಗೂ ಕಾನೂನು ವ್ಯವಸ್ಥೆ ಜಗತ್ತಿನಲ್ಲಿಯೇ ಶ್ರೇಷ್ಠವಾದದು. ಇದನ್ನು ಶ್ರೇಷ್ಠವಾಗಿಸುವಲ್ಲಿ ನಮ್ಮೆಲ್ಲರ ಕೊಡುಗೆ ಮುಖ್ಯ. ರಾಜ್ಯಪಾಲನಾಗಿ ಅಧಿಕಾರ ಸ್ವೀಕರಿಸಿದ ನಂತರ ಎರಡನೇ ಬಾರಿಗೆ ಹುಬ್ಬಳ್ಳಿ ಧಾರವಾಡಕ್ಕೆ ಭೇಟಿ ನೀಡುತ್ತಿದ್ದೇನೆ‌. ಕರ್ನಾಟಕ, ಕೃಷಿ ಹಾಗೂ ಕಾನೂನು ವಿಶ್ವವಿದ್ಯಾಲಯಗಳು ರಾಷ್ಟ್ರ ಮಟ್ಟದ ಉನ್ನತ ಶಿಕ್ಷಣ ಕೇಂದ್ರಗಳಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

 Sharesee more..

ನಗರದಲ್ಲಿ ಮತ್ತೊಂದು ಬೆಂಕಿ ಅವಘಡ

18 Oct 2021 | 6:20 PM

 Sharesee more..

ಬಿಜೆಪಿ ಸರಕಾರ ಜನತೆಗೆ ಶಾಪ : ಡಿಕೆಶಿ ವಾಗ್ದಾಳಿ

18 Oct 2021 | 5:51 PM

 Sharesee more..