Friday, Oct 22 2021 | Time 05:00 Hrs(IST)
Special Share

ಜಮ್ಮುವಿಗೆ 2 ದಿನಗಳ ಪ್ರವಾಸ ಕೈಗೊಂಡ ರಾಹುಲ್‌ ಗಾಂಧಿ

ಜಮ್ಮು, ಸೆ 9 (ಯುಎನ್ಐ) ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಎರಡು ದಿನಗಳ ಭೇಟಿಗಾಗಿ ಗುರುವಾರ ಜಮ್ಮುವಿಗೆ ಭೇಟಿ ನೀಡಿದರು.
ರಾಹುಲ್‌ ಗಾಂಧಿ ಅವರನ್ನು ವಿಮಾನ ನಿಲ್ದಾಣದ ಹೊರಗೆ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಪುಷ್ಪವೃಷ್ಟಿಯಿಂದ ಶುಭ ಹಾರೈಸಿದರು. ನಂತರ ಮೆರವಣಿಗೆ ಮೂಲಕ ಅವರನ್ನು ಕರೆದೊಯ್ಯಲಾಯಿತು.
ಅಲ್ಲಿಂದ ರಾಹುಲ್, ಗುಹೆ ದೇಗುಲದಲ್ಲಿ ಪೂಜೆ ಸಲ್ಲಿಸಲು ಕತ್ರಾಗೆ ತೆರಳಿದರು.
ಈ ಹಿಂದೆ, ಆ 10 ರಂದು ಜಮ್ಮುವಿಗೆ ಆಗಮಿಸಿದ್ದ ಅವರು, ಶ್ರೀನಗರದ ಖೀರ್ ಭವಾನಿ ದೇವಸ್ಥಾನದೊಂದಿಗೆ ಹಜರತಲ್ ದರ್ಗಾಕ್ಕೆ ಭೇಟಿ ನೀಡಿದ್ದರು.
ಮಾತಾ ವೈಷ್ಣೋದೇವಿಗೆ ಪೂಜೆ ಸಲ್ಲಿಸಲು ಕಾಂಗ್ರೆಸ್ ನಾಯಕ ಪಾದಯಾತ್ರೆ ನಡೆಸಲಿದ್ದಾರೆ ಎಂದು ಮಾಹಿತಿ ಪಕ್ಷದ ವಕ್ತಾರರುನೀಡಿದ್ದಾರೆ.
ಶುಕ್ರವಾರ ಅವರು ಜಮ್ಮುವಿನ ಜೆಕೆ ರೆಸಾರ್ಟ್‌ನಲ್ಲಿ ಪಕ್ಷದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಯುಎನ್ಐ ಎಸ್ಎಚ್ 1458
More News
ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

21 Oct 2021 | 1:28 PM

ಭಾರತದ ಗಲ್ಲಿ ಗಲ್ಲಿಗಳಲ್ಲಿ ಆಡುತ್ತಿದ್ದ ಹುಡುಗ ಈಗ ಓಮನ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ. ಟಿ-20 ವಿಶ್ವಕಪ್ ನ ಅರ್ಹತಾ ಪಂದ್ಯಗಳಲ್ಲಿ ಆಡುತ್ತಿರುವ ಜತೀಂದರ್ ಸಿಂಗ್, ಓಮನ್ ತಂಡದ ಸ್ಟಾರ್ ಆಟಗಾರನಾಗಿದ್ದಾನೆ.

 Sharesee more..