Monday, Sep 20 2021 | Time 08:17 Hrs(IST)
Sports Share

ಯುಎಇನ್‌ ನಲ್ಲಿ ಟಿ-20 ವಿಶ್ವಕಪ್ ಆಯೋಜನೆ

ನವದೆಹಲಿ, ಜೂ.28 (ಯುಎನ್ಐ)- ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಟಿ-20 ವಿಶ್ವಕಪ್ ಅನ್ನು ಆಯೋಜಿಸುವ ಬಗ್ಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಖಚಿತಪಡಿಸಿದೆ.

ಟಿ-20 ವಿಶ್ವಕಪ್ ಸ್ಥಳವನ್ನು ಬದಲಾಯಿಸಲು ಬಿಸಿಸಿಐ ನಿರ್ಧರಿಸಿದ್ದು, ಈ ಬಗ್ಗೆ ಮಂಡಳಿ ಸೋಮವಾರ ಸಂಜೆ ವೇಳೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ಔಪಚಾರಿಕವಾಗಿ ತಿಳಿಸುತ್ತದೆ ಎಂದು ಬಿಸಿಸಿಐ ಕಾರ್ಯದರ್ಶಿ ಜೇ ಷಾ ಹೇಳಿದ್ದಾರೆ.

ಸೋಮವಾರ ಮಧ್ಯಾಹ್ನ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, "ನಾವು ಟೂರ್ನಿಯನ್ನು ಯುಎಇಗೆ ವರ್ಗಾಯಿಸುತ್ತಿದ್ದೇವೆ. ಮತ್ತು ಈ ಬಗ್ಗೆ ಸೋಮವಾರ ಸಂಜೆ ನಾವು ಐಸಿಸಿಗೆ ತಿಳಿಸುತ್ತೇವೆ. ವಿಶ್ವಕಪ್‌ನ ಮೊದಲ ಸುತ್ತಿನ ಪಂದ್ಯಗಳನ್ನು ಒಮಾನ್‌ನಲ್ಲಿ ಆಯೋಜಿಸಲು ಬಿಸಿಸಿಐ ಸಿದ್ಧವಾಗಿದೆ. ವೇಳಾಪಟ್ಟಿಯನ್ನು ನಂತರ ಅಂತಿಮಗೊಳಿಸಲಾಗುತ್ತದೆ. ನಾವು ವೇಳಾಪಟ್ಟಿಯನ್ನು ಸಂಪೂರ್ಣವಾಗಿ ನಿರ್ಧರಿಸಿಲ್ಲ. ನಾವು ಶೀಘ್ರದಲ್ಲೇ ನಿಮಗೆ ಈ ಬಗ್ಗೆ ಮಾಹಿತಿ ತಿಳಿಸುತ್ತೇವೆ" ಎಂದಿದ್ದಾರೆ.

ಒಮಾನ್ ಕ್ರಿಕೆಟ್ ಅಧಿಕಾರಿಗಳು ಈ ತಿಂಗಳ ಆರಂಭದಲ್ಲಿ ದುಬೈನಲ್ಲಿ ಬಿಸಿಸಿಐ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಶ್ರೀಲಂಕಾ, ಐರ್ಲೆಂಡ್, ಪಪುವಾ ನ್ಯೂಗಿನಿಯಾ, ಒಮಾನ್, ಬಾಂಗ್ಲಾದೇಶ, ನಮೀಬಿಯಾ, ನೆದರ್ಲ್ಯಾಂಡ್ಸ್ ಮತ್ತು ಸ್ಕಾಟ್ಲೆಂಡ್ ತಂಡಗಳು ನಡೆಯಲಿರುವ ಟಿ-20 ವಿಶ್ವಕಪ್ ನ ಮೊದಲ ಸುತ್ತಿನ ಪಂದ್ಯಗಳಿಗೆ ಒಮಾನ್ ಆತಿಥ್ಯ ವಹಿಸುವ ಸಾಧ್ಯತೆಯಿದೆ. ಓಮನ್ ಕ್ರಿಕೆಟ್ ತಂಡವೂ ಪಂದ್ಯಾವಳಿಗೆ ಅರ್ಹತೆ ಪಡೆದಿದೆ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನದಿಂದ ನೇರ ಪ್ರವೇಶದೊಂದಿಗೆ ಮೊದಲ ಸುತ್ತಿನ ನಾಲ್ಕು ತಂಡಗಳು ಸೂಪರ್ 12 ಹಂತಕ್ಕೆ ಅರ್ಹತೆ ಪಡೆಯಲಿವೆ.

ಐಸಿಸಿ ತನ್ನ ಕೊನೆಯ ಸಭೆಯಲ್ಲಿ ಜೂನ್ 28 ರೊಳಗೆ ಪಂದ್ಯಾವಳಿಯನ್ನು ನಡೆಸುವ ಸಾಧ್ಯತೆಯ ಬಗ್ಗೆ ತಿಳಿಸುವಂತೆ ಬಿಸಿಸಿಐಗೆ ಸೂಚಿಸಿರುವುದು ಗಮನಾರ್ಹವಾಗಿದೆ. ಗಡುವು ಸಮೀಪಿಸುತ್ತಿರುವುದರಿಂದ, ಭಾರತದಲ್ಲಿ ಪಂದ್ಯಾವಳಿಯನ್ನು ಆಯೋಜಿಸುವುದು ಇನ್ನು ಕಷ್ಟ ಎಂದು ಬಿಸಿಸಿಐ ನಿರ್ಧರಿಸಿದೆ.

ಪಂದ್ಯಾವಳಿ ಅಕ್ಟೋಬರ್ 18 ರಿಂದ ನವೆಂಬರ್ 15 ರವರೆಗೆ ನಿಗದಿ ಪಡಿಸಿದ ದಿನಾಂಕಗಳ ಬದಲು ಅಕ್ಟೋಬರ್ 17 ರಿಂದ ನವೆಂಬರ್ 14 ರವರೆಗೆ ನಡೆಯಲಿದೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಆದರೆ ಬಿಸಿಸಿಐ ಕಾರ್ಯದರ್ಶಿ ಜೇ ಶಾ ಈ ಕುರಿತು ಶೀಘ್ರದಲ್ಲೇ ಪ್ರಕಟಣೆ ನೀಡುವ ನಿರೀಕ್ಷೆಯಿದೆ.

ಮೂರು ಮೈದಾನಗಳಾದ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ಶಾರ್ಜಾ ಕ್ರಿಕೆಟ್ ಕ್ರೀಡಾಂಗಣ ಮತ್ತು ಯುಎಇಯ ಅಬುಧಾಬಿಯ ಶೇಖ್ ಜಾಯೆದ್ ಕ್ರಿಕೆಟ್ ಕ್ರೀಡಾಂಗಣಕ್ಕೆ ಪೂರಕವಾಗಿ ಮತ್ತೊಂದು ಮೈದಾನವನ್ನು ಹುಡುಕುತ್ತಿದ್ದೇವೆ ಎಂದು ಐಸಿಸಿ ಹೇಳಿದೆ.

ಯುಎನ್ಐ ವಿಎನ್ಎಲ್ 1843