Sunday, Nov 28 2021 | Time 08:47 Hrs(IST)
Special Share

ದೇಶದಲ್ಲಿ ಈವರೆಗೆ ಸುಮಾರು 99 ಕೋಟಿ ಮಂದಿಗೆ ಕೋವಿಡ್‌ ಲಸಿಕೆ

ನವ ದೆಹಲಿ,ಅ 20(ಯುಎನ್‌ ಐ) ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ವ್ಯಾಪಿಸುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ, 13,23,702 ಮಂದಿಗೆ ಕೋವಿಡ್‌ ಪರೀಕ್ಷೆ ನೆಡೆಸಲಾಗಿದ್ದು, ಈ ಪೈಕಿ 14,623 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಎಂದು ಬುಧವಾರ ಕೇಂದ್ರ ಆರೋಗ್ಯ ಸಚಿವಾಲಯ ಅಂಕಿ ಅಂಶ ನೀಡಿದೆ.
ಇದರಿಂದ ದೇಶದಲ್ಲಿ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 3,41,08,996 ಕ್ಕೆ ತಲುಪಿವೆ. ಸೋಂಕಿನಿಂದ ನಿನ್ನೆ 197 ಮಂದಿ ಸಾವನ್ನಪ್ಪಿದ್ದಾರೆ. ಇದರಿಂದ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 4,52,651 ಕ್ಕೆ ತಲುಪಿದೆ. ನಿನ್ನೆ 19,446 ಮಂದಿ ಸೋಂಕಿತರು ಚೇತರಿಸಿಕೊಂಡಿದ್ದಾರೆ.
ಈವರೆಗೆ ದೇಶದಲ್ಲಿ ಕೊರೊನಾ ಜಯಿಸಿದವರ ಸಂಖ್ಯೆ 3,34,78,247 ಕ್ಕೆ ತಲುಪಿದೆ. ಪ್ರಸ್ತುತ ದೇಶದಲ್ಲಿ 1,78,098 ಸಕ್ರಿಯ ಪ್ರಕರಣಗಳಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 229 ದಿನಗಳ ಕನಿಷ್ಟ ಮಟ್ಟಕ್ಕೆ ತಲುಪಿದೆ. ರಾಷ್ಟ್ರೀಯ ಚೇತರಿಕೆ ಪ್ರಮಾಣ ಶೇ 98.15ಕ್ಕೆ ಸುಧಾರಿಸಿದೆ. ದೇಶದಲ್ಲಿ ಕೋವಿಡ್‌ ಲಸಿಕೆ ಅಭಿಯಾನ ಭರದಿಂದ ಸಾಗಿದ್ದು, ನಿನ್ನೆ ಒಂದೇ ದಿನ 41,36,142 ಮಂದಿಗೆ ಲಸಿಕೆ ನೀಡಲಾಗಿದ್ದು, ಈವರೆಗೆ 99,12,82,283 ಡೋಸ್ ಲಸಿಕೆಗಳನ್ನು ವಿತರಿಸಲಾಗಿದೆ.
ಯುಎನ್‌ ಐ ಕೆವಿಆರ್‌ 10.40