Sunday, Oct 24 2021 | Time 01:11 Hrs(IST)
Special Share

ಭಾರತಕ್ಕೆ ನಮ್ಮಿಂದ ಯಾವುದೇ ಅಪಾಯ ಇಲ್ಲ ; ತಾಲಿಬಾನ್

ಕಾಬೂಲ್, ಆಗಸ್ಟ್‌ 31(ಯುಎನ್‌ ಐ) - ಭಾರತಕ್ಕೆ ತಾಲಿಬಾನ್ ನಿಂದ ಯಾವುದೇ ಅಪಾಯವಿಲ್ಲ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಸೋಮವಾರ ಸ್ಪಷ್ಟಪಡಿಸಿದ್ದಾರೆ. ಇಂಡಿಯಾ ಟುಡೇ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಜಬಿಹುಲ್ಲಾ ಹಲವು ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ‘ ಏಷ್ಯಾ ವಲಯದಲ್ಲಿ ಭಾರತ ಪ್ರಮುಖ ರಾಷ್ಟ್ರವಾಗಿದೆ. ಹಿಂದಿನ ಅಫ್ಘನ್ ಸರ್ಕಾರ, ಭಾರತದ ನಡುವೆ ಉತ್ತಮ ಬಾಂಧವ್ಯ ಹೊಂದಿತ್ತು. ತಾಲಿಬಾನ್ ನೇತೃತ್ವದ ಹೊಸ ಅಫ್ಘನ್ ಸರ್ಕಾರವು ಸಹ ಅದೇ ಮಟ್ಟದ ಸದ್ಭಾವನೆಯ ಸಂಬಂಧಗಳನ್ನು ಬಯಸುತ್ತಿದೆ ಎಂದು ಜಬಿಹುಲ್ಲಾ ಹೇಳಿದ್ದಾರೆ.
ಪಾಕಿಸ್ತಾನದೊಂದಿಗೆ ಕೈಜೋಡಿಸಿ ಭಾರತ ವಿರೋಧಿ ಚಟುವಟಿಕೆಗಳನ್ನು ತಾಲಿಬಾನ್ ಆಯೋಜಿಸಲಿದೆ ಎಂಬ ವರದಿಗಳಿಗೆ ಜಬಿಹುಲ್ಲಾ ಪ್ರತಿಕ್ರಿಯಿಸಿ, ಇವೆಲ್ಲಾ ಆಧಾರರಹಿತ ಆರೋಪಗಳು ಎಂದು ತಳ್ಳಿಹಾಕಿದರು. ತಾಲಿಬಾನಿಗಳು ಭಾರತಕ್ಕೆ ಯಾವುದೇ ರೀತಿಯ ಹಾನಿ, ಅನಾನುಕೂಲ ಮಾಡುವುದಿಲ್ಲ ಎಂದರು. ತಾಲಿಬಾನಿಗಳು ಪಾಕಿಸ್ತಾನವನ್ನು ತಮ್ಮ ಸ್ವಂತ ದೇಶವೆಂದು ಭಾವಿಸಲಿದ್ದಾರೆ ಎಂದು ಜಬಿಹುಲ್ಲಾ ಇತ್ತೀಚೆಗೆ ಹೇಳಿದ್ದರು. ಈ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಅವರು, . ‘ಅಫ್ಘಾನಿಸ್ತಾನ, ಪಾಕಿಸ್ತಾನದೊಂದಿಗೆ ಗಡಿ ಸಂಬಂಧ ಹೊಂದಿದೆ. ಅಫ್ಘಾನಿಸ್ತಾನಿಯರು ಹೆಚ್ಚಾಗಿ ಗಡಿ ದಾಟಿ ಸಂಬಂಧಿಕರು, ವ್ಯಾಪಾರಕ್ಕಾಗಿ ಪಾಕಿಸ್ತಾನಿ ಜನರೊಂದಿಗೆ ಸಂಬಂಧ ಹೊಂದಿದ್ದಾರೆ. ಆ ರೀತಿಯ ಬಾಂಧವ್ಯವನ್ನು ನಾವು ಬಯಸುತ್ತೇವೆಎಂದು ಅವರು ಹೇಳಿದರು. "ನಾವು ಎಲ್ಲಾ ದೇಶಗಳೊಂದಿಗೆ ಉತ್ತಮ ರಾಜತಾಂತ್ರಿಕ ಸಂಬಂಧಗಳನ್ನು ನಿರೀಕ್ಷಿಸುತ್ತೇವೆ" ಎಲ್ಲ ಪ್ರಮುಖ ದೇಶಗಳು ರಾಯಭಾರ ಕಚೇರಿಗಳನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದರು. ಪಂಜಾಬ್ ಪ್ರಾಂತ್ಯದ ಬಗ್ಗೆಯೂ ಮಾತನಾಡಿ, ‘ಜಂಟಿ ನಿರ್ಧಾರಕ್ಕಾಗಿ ಎರಡೂ ಕಡೆಯಿಂದ ಪ್ರಯತ್ನಗಳು ನಡೆಯುತ್ತಿವೆ. ಯುದ್ಧವೊಂದೇ ದಾರಿ ಎಂದು ನಾವು ಭಾವಿಸುವುದಿಲ್ಲ ಎಂದು ವಕ್ತಾರರು ಹೇಳಿದರು.
ಯುಎನ್‌ ಐ ಕೆವಿಆರ್‌ 1351