Wednesday, Dec 8 2021 | Time 23:34 Hrs(IST)
Sports Share

ಜಾವಗಲ್‌ ಶ್ರೀನಾಥ್, ಹರ್ಭಜನ್ ಸಿಂಗ್ ಗೆ ಅಪರೂಪದ ಗೌರವ

ಲಂಡನ್, ಅ 20(ಯುಎನ್‌ ಐ) ಭಾರತದ ಮಾಜಿ ಕ್ರಿಕೆಟಿಗರಾದ ಕನ್ನಡಿಗ ಜಾವಗಲ್ ಶ್ರೀನಾಥ್, ಹರ್ಭಜನ್ ಸಿಂಗ್ ಅವರಿಗೆ ಪ್ರತಿಷ್ಠಿತ ಮೆರಿಲ್ ಬೋನ್ ಕ್ರಿಕೆಟ್ ಕ್ಲಬ್ (MCC) ನಲ್ಲಿ ಜೀವಮಾನ ಸದಸ್ಯತ್ವ ಲಭಿಸಿದೆ. ಟೆಸ್ಟ್ ಕ್ರಿಕೆಟ್ ಆಡುವ 12 ದೇಶಗಳ ಪೈಕಿ ಎಂಟು ದೇಶಗಳ ಕ್ರಿಕೆಟಿಗರಿಗೆ ಈ ವರ್ಷ ಜೀವಮಾನ ಸದಸ್ಯತ್ವ ಕಲ್ಪಿಸಲಾಗಿದೆ ಎಂದು ಎಂ ಸಿ ಸಿ ಹೇಳಿಕೆಯಲ್ಲಿ ತಿಳಿಸಿದೆ.
ಅಗ್ರ ವೇಗಿಯಾಗಿ ಭಾರತ ತಂಡಕ್ಕೆ ಸೇವೆ ಸಲ್ಲಿಸಿರುವ ಶ್ರೀನಾಥ್, ಪ್ರಸ್ತುತ ಐಸಿಸಿ ಎಲೈಟ್ ಮ್ಯಾಚ್ ರೆಫರಿ ಪ್ಯಾನೆಲ್‌ನಲ್ಲಿದ್ದಾರೆ. ಶ್ರೀನಾಥ್ ತಮ್ಮ ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ ಏಕದಿನದಲ್ಲಿ 315 ವಿಕೆಟ್‌, ಟೆಸ್ಟ್ ನಲ್ಲಿ 236 ವಿಕೆಟ್‌ ಗಳು ಪಡೆದಿದ್ದಾರೆ. ಹರ್ಭಜನ್ ಎಲ್ಲಾ ಮೂರು ಫಾರ್ಮಾಟ್‌ ಗಳು ಸೇರಿ 711 ವಿಕೆಟ್ ಪಡೆದಿದ್ದಾರೆ.
ಯುಎನ್‌ ಐ ಕೆವಿಆರ್‌ 9.33